“ಶೂಟಿಂಗ್ ನಲ್ಲಿ ಲೈಟ್ ಹೊತ್ತ ಶಂಕರ್ ನಾಗ್”

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 8

(ಶಂಕರ್ ನಾಗ್ ಆತ್ಮೀಯ ಗೆಳೆಯ ಜಗದೀಶ್ ಮಲ್ನಾಡ್ ಅವರ ನೆನಪುಗಳು)


ಮಾಲ್ಗುಡಿ ಡೇಸ್‌ ಟೀಂ ಕ್ರಿಯೇಟ್‌ ಮಾಡಿದ ಜೀರೋ ಬಜೆಟ್‌ ಕ್ರೇನ್‌

ಜಗದೀಶ್: ಇನ್ನೆಲ್ಲೋ ಒಂದು ಹಳ್ಳಿ ಮನೆಗೆ ಹೋಗಿದ್ವಿ ಅಲ್ಲಿ ಕ್ರೇನ್ ಬೇಕೂಂತ ಆಯ್ತು. ಸಡನ್ ಆಗಿ ಕ್ರೇನ್ ತರಕ್ಕೆ ಆಗಲ್ಲ. ಅಷ್ಟು ಟೈಮ್ ಇಲ್ಲ. ಲೋಕಲ್ ಏನು ಮಾಡಕ್ಕೆ ಆಗುತ್ತೆ? ಅಲ್ಲಿ ಹಗ್ಗ ಕಟ್ಟೋದು, ಪುಲ್ಲಿ ಕಟ್ಟೋದು ಈ ತರ ಎಲ್ಲಾ ಮಾಡಿ ಶೂಟಿಂಗ್ ಮಾಡಿದ್ವಿ. ಎತ್ತಿನಗಾಡಿ ಮೇಲೆ ಕ್ಯಾಮರಾಮ್ಯಾನ್ ನ ಕೂರ್ಸಿ, ಆಪೊಸಿಟ್ ಸೈಡಿಂದ ಎತ್ತಿದ್ರೆ ಅದೇ ಕ್ರೇನ್. “ಅದೆಲ್ಲಾ ಆಗೊದಿಲ್ಲರಿ”ಅಂತ ರಾಮಚಂದ್ರ ಅವ್ರು ಕೂಡ ಹೇಳ್ತಿರಲಿಲ್ಲ. ಅವ್ರು ಏನು ಹೇಳಿದ್ರೂ ಚಾಲೆಂಜಿಂಗಾಗಿ ತೆಕೊತಾ ಇದ್ರು. ಅದು ಟೀಮ್ ವರ್ಕ್ ಎಲ್ರಿಗೂ ಅನಿಸ್ಬೇಕು, ಎಲ್ರಿಗೂ ಅನ್ಸಿದ್ರೆ ಕೆಲ್ಸಗಳು ಆಗುತ್ತೆ. ಆಗಲ್ಲಾಂತ ಒಂದ್ಸಲ ಡಿಸೈಡ್ ಮಾಡ್ಬಿಟ್ರೆ, ಯಾವ ಕಾರಣಕ್ಕೂ ಆಗಲ್ಲ. ಜಾನ್ ದೇವರಾಜ್ ಆಗ್ಬಹುದು, ಕ್ಯಾಮರಾಮನ್ ಆಗ್ಬಹುದು, ಮೇಕಪ್ ಮಾನ್ ಆಗ್ಬಹುದು ಯಾರೇ ಆದ್ರುನೂ ಮಾಡ್ತಿವಿ, ಅಂತ ಹೇಳ್ತಿದ್ರು.ಅದೇನು ರಡಿಮೇಡ್ ಅಂತೇನಲ್ಲ ಎಲ್ಲ ಮೊದಲೇ ಹೇಳಿರ್ತಾರೆ. ಯಾಕಂದ್ರೆ ಅವ್ರಿಗೆ ಮೆಟೀರಿಯಲ್ ಎಲ್ಲಾ ಬೇಕಲ್ಲ, ನಮ್ಮ ‘ರಾಮಕೃಷ್ಣ’ ಆಕ್ಟರ್ ಅವರು ಕೂಡ ಒಂದು ಎಪಿಸೋಡ್ ಮಾಡಿದ್ರು. ಒಬ್ಬ ಮೋಸಗಾರ ಹುಡುಗ ಎಲ್ಲೋ ಒಂದು ಅಂಗಡಿಯಲ್ಲಿ ಕೆಲ್ಸ ಮಾಡ್ತಿರ್ತಾನೆ. ಅಲ್ಲೆಲ್ಲಾ ಮೋಸ ಮಾಡಿರ್ತಾನೆ ಕೊನೆಗೆ ಅವನಿಗೆ ಶಾಪ ಆಗಿ ಮುಖದಲ್ಲೆಲ್ಲಾ ತೊನ್ನು ಆಗುತ್ತೆ. ತೊನ್ನು ಅಲ್ಲಾ ಕುಷ್ಟ ರೊಗ ಆಗ್ಬಿಡುತ್ತೆ. ಅದೆಲ್ಲಾ ರಾಮಕೃಷ್ಣ ಮತ್ತೆ ಮಲ್ಲೇಷ್ ಅಂತ ಮೇಕಪ್ ಮ್ಯಾನ್ಗಳು, ಕ್ರೂರ ಮುಖ ಹೆದರಿಕೆ ಆಗೋ ತರ ಕ್ರಿಯೇಟ್ ಮಾಡಿದ್ರು. ಅದನ್ನ ಕಳಸ ದಲ್ಲಿ ಶೂಟ್ ಮಾಡಿದ್ವಿ.


ಅನಂತನಾಗ್‌ ಶೂಟಿಂಗ್‌ ಲೇಟಾಗಿ ಬಂದಾಗ ಶಂಕರ್‌ ಮಾಡಿದ್ದು ಏನು

ಅನಂತ್ ನಾಗ್ ಅವ್ರದ್ದೇ ಶೂಟ್ ಮಾಡ್ಬೇಕಿತ್ತು ಅನಂತ್ ನಾಗ್ ಬರ್ಲೇ ಇಲ್ಲ. ನಮ್ಹತ್ರ ಬೇರೇನು ಆಪ್ಷನ್ ಇರ್ಲಿಲ್ಲ. ಕಾಯೊದು ಒಂದೇ ಆಪ್ಷನ್ ಇದ್ದದ್ದು. ಕಾದು ಕಾದು ಬೋರ್ ಆಯ್ತು ಏನ್ಮಾಡೋದು?


ಶಂಕರ್ ಬ್ಯಾಟ್, ಬಾಲ್ ತರ್ಸಿದ್ರು. ಎರಡು ಟೀಮ್ ಮಾಡಿ ಕ್ರಿಕೆಟ್ ಲೀಗ್ ಆಡಿದ್ವಿ. ಮಧ್ಯಾನ ಆಯ್ತು ಬರ್ಲಿಲ್ಲ, ಸಾಯಂಕಾಲ ಆಯ್ತು ಬರ್ಲಿಲ್ಲ. ಇನ್ನೇನು ಬ್ಯಾಟ್ ಬಾಲ್ ಎಲ್ಲಾ ತೆಗೆದಿಡ್ಬೇಕು, ಅಷ್ಟರಲ್ಲಿ ಅನಂತ್ ನಾಗ್ ಎಂಟ್ರಿ. ಅಲ್ಲಿ ಡೈರೆಕ್ಟರ್, ಆಕ್ಟರ್ ಅಣ್ಣ, ತಮ್ಮ ಮಾತು ಕತೆ ಆಯ್ತು. “ಏನು ನೀನು ಬರ್ಲಿಲ್ಲ, ಎಲ್ಲಾ ವೇಸ್ಟಾಗೋಯ್ತು” ಅಂದ್ರೆ ಅವ್ರು “ನಾನು ಎಲ್ಲಾ ಕಡೆನೂ ಲೇಟಾಗೇ ಹೋಗ್ತೇನಪ್ಪ, ನನಿಗೆ ಹೆಸರಿರೊದೇ ಲೇಟ್ ಅಂತ. ಇಲ್ಲಿಗೆ ಮಾತ್ರ ನಾನು ಬೇಗ ಬಂದ್ರೆ, ಜನ ಆಡ್ಕೊಳಲ್ವ? “ನಮ್ ಶೂಟಿಂಗ್ ಗೆ ಲೇಟಾಗಿ ಬರ್ತಾನೆ, ಅವರ ಶೂಟಿಂಗ್ ಗೆ ಮಾತ್ರ ಬೇಗ ಹೋಗ್ತಾನೆ” ಅಂತ ಅದಕ್ಕೆ ಜಸ್ಟಿಫೈ ಮಾಡ್ದೆ ಅಲ್ವ. ಇನ್ನೇನು ಈಗ ಬಂದಿದ್ದೀನಿ ತಾನೆ, ನಾಳೆಯಿಂದ ಶೂಟಿಂಗ್ ಮಾಡ್ಕೊಳಿ” ಅಂದ್ಬಿಟ್ರು. ಇದನ್ನ ತಮಾಷೆ ಅಂತ ಹೇಳೊದಾ, ಅಥವಾ ಹ್ಯಾಂಡ್ಲಿಂಗ್ ಅಂತ ಹೇಳೊದಾ? ಹೀಗೆ ಅನೇಕ ಸಣ್ಣ ಪುಟ್ಟ ವಿಷಯಗಳು, ಕೆಲವೊಂದು ಜ್ಙಾಪಕಕ್ಕೆ ಬರುತ್ತೆ. ಇನ್ನು ಕೆಲವು ಬರಲ್ಲ.


ಮಾಲ್ಗುಡಿಡೇಸ್‌ ಸಿಗ್ನೇಚರ್‌ ಹಾಡು ಹಾಡಿದ್ದು ಈ ಅದ್ಧ್ಬುತ ಗಾಯಕಿ

ಮ್ಯೂಸಿಕ್ ಡೈರೆಕ್ಟರ್ ಗೆ ಕಥೆ, ಸಿಚ್ಯುವೇಶನ್ ಎಲ್ಲಾ ಹೇಳಿದ್ಮೇಲೆ, ಅವ್ರದ್ದೇ ಕ್ರಿಯೇಶನ್. ಅದ್ರಲ್ಲಿ ಒಂದು ಸಿಗ್ನೇಚರ್ ಟೋನ್ ಇದೆ. ಅದನ್ನ ವೈದೇಹಿ ಅವ್ರೇ ಹಾಡಿದ್ರು. ಆ ಮೇಲೆ ‘ರತ್ನ ಮಾಲ ಪ್ರಕಾಶ್’ಫೀಮೇಲ್ ವಾಯ್ಸ್ ಹಾಡಿದ್ರು. ಇಡೀ ಮಾಲ್ಗುಡಿ ಡೇಸ್ ಗೆ ಅದೇ ಸಿಗ್ನೇಚರ್ ಟೋನ್. ಆ ಟೋನ್ ಬಂದ ತಕ್ಷಣ ಎಲ್ಲರೂ ಅಂಗಡಿ ಬಾಗ್ಲು ಹಾಕ್ಕೊಂಡು ಟಿ.ವಿ. ಇರುವ ಜಾಗಕ್ಕೆ ಹೋಗ್ಬಿಡ್ತಿದ್ರು.

ಪರಮ್: ಎಷ್ಟೊತ್ತಿಗೆ ಬರ್ತಿತ್ತು ಸರ್ ಅದು ದೋರದರ್ಷನಲ್ಲಿ?


ಜಗದೀಶ್: ರಾತ್ರಿ 8;30 ಗಂಟೆಗೆ ಬರ್ತಿತ್ತು, ಎಲ್ಲರೂ ಹೋಗ್ಬಿಡೋರು. ಅಂದ್ರೆ ಆ ಸಿಗ್ನೇಚರ್ ಟ್ಯೂನ್ ಎಷ್ಟು ಇತ್ತು ಅಂದ್ರೆ ಅದನ್ನ ಕೇಳಿದ ತಕ್ಷಣ ಎಲ್ಲರೂ ಅಲರ್ಟ್ ಆಗ್ಬಿಡ್ತಿದ್ರು. ಅಷ್ಟು ಪಾಪ್ಯುಲರ್ ಆಗ್ಬಿಟ್ಟಿತ್ತು. ಈಗ್ಲೂ ಅಷ್ಟೆ, ಎಷ್ಟೋ ಜನ ಮೊಬೈಲ್ನಲ್ಲಿ ಕಾಲರ್ ಟ್ಯೂನ್, ರಿಂಗ್ಡೋನ್ ಹಾಕೊಂಡಿದ್ದಾರೆ.


ಶಂಕರ್ ನಾಗ್‌ ಡೈರೆಕ್ಷನ್‌ ಬಗ್ಗೆ ದೊಡ್ಡ ದೊಡ್ಡ ಡೈರೆಕ್ಟರ್‌ ಗಳೆಲ್ಲಾ ಏನ್‌ ಹೇಳ್ತಿದ್ರು

ಇವತ್ತು ಕೂಡ ಯೂಟ್ಯೂಬಲ್ಲಿ ಮಾಲ್ಗುಡಿ ಡೇಸ್ ಎಪಿಸೋಡ್ ನೋಡಿದ್ರೆ, ಅದರ ಕಮೆಂಟ್ ಸಕ್ಷನಲ್ಲಿ ಎಷ್ಟೋ ನಾರ್ಥ್ ಇಂಡಿಯನ್ ಜನ ಬರ್ದಿರ್ತಾರೆ “ನಾವು ಇಂತಹ ಕ್ಲಾಸಿಕ್ ಸೀರೀಸ್ ಇನ್ನೊಂದು ನೋಡ್ಲೇ ಇಲ್ಲ” ಅಂತ. ಅಂದ್ರೆ ಸೌತ್ ಇಂಡಿಯಾದಿಂದ ಹೋದಂತಹ ಒಂದು ಪ್ರಾಜೆಕ್ಟ್, ನಾರ್ಥ್ ಇಂಡಿಯನ್ ಪ್ರಾಜೆಕ್ಟ್ ಗಳಿಗಿಂತ ಬೆಳೆದಿರೋದು. ಅವಾಗ ನೋಡಿ ಚಂದ್ರಗುಪ್ತ ಚಾಣಕ್ಯ ಎಲ್ಲಾ ಬಂತಲ್ಲ, ಅದನ್ನೆಲ್ಲಾ ಮೀರಿ ಒಂದು ಕಿರೀಟ, ಅಂತ ಆಗ್ಹೋಯ್ತು ‘ಮಾಲ್ಗುಡಿ ಡೇಸ್ʼ.

ಇದು ಎಪಿಕ್ ಕಥೆಯಲ್ಲ ರಾಮಾಯಣ, ಮಹಾಭಾರತದ ತರ, ಕಥೆ ಗೊತ್ತಿದ್ರೂ, ಇವಾಗ್ಲೂ ನಾವೆಲ್ಲಾ ನೋಡ್ತೀವಿ. ಮಾಲ್ಗುಡಿ ಡೇಸ್ ಹಾಗಲ್ಲ ಆರ್.ಕೆ. ನಾರಾಯಣ್ ಅವ್ರ ಕಥೆನ, ಒಳ್ಳೆ ಸ್ಕ್ರೀನ್ ಪ್ಲೇ, ಮ್ಯೂಸಿಕ್ ಎಲ್ಲಾ ಮಾಡಿರೋದು. ಇವತ್ತಿಗೆ ನೋಡಿದ್ರೂ ಖುಷಿಯಾಗುತ್ತೆ. ಡೈಲಾಗ್ಸ್, ಹಾಗೂ ಶಂಕರ್ ನಾಗ್ ಡೈರೆಕ್ಷನ್ ನ ಎಲ್ಲರೂ ಎಂಜಾಯ್ ಮಾಡಿದ್ರು. ದೊಡ್ಡ ದೊಡ್ಡ ಡೈರೆಕ್ಟರ್ ಗಳೆಲ್ಲಾ ಹೇಳ್ತಿದ್ರು “ಒಂದೊಂದು ಫ್ರೇಮ್ ಗಳನ್ನೂ ಎಷ್ಟು ಚನ್ನಾಗಿ ಇಟ್ಟಿದ್ದಾರೆ”ಅಂತ ಡೈರೆಕ್ಟರ್ ಕೆಪಾಸಿಟಿ ಅದು. ಅವ್ರ ಕಾನ್ಸೆಪ್ಟ್ ಅವ್ರ ಥಿಂಕಿಂಗ್ ಅದು.


ಶಂಕರ್ ನಾಗ್ ವರ್ಕಿಂಗ್ ಸ್ಟೈಲ್ ಮತ್ತು ಟೀಂ ಮ್ಯಾನೇಜಮೆಂಟ್

ಜಗದೀಶ್: ಕೆಲ್ಸ ಬಿಟ್ರೆ ಬೇರೇನು ಯೋಚ್ನೆ ಮಾಡ್ತಿರ್ಲಿಲ್ಲ. ಯಾವತ್ತು ಕೆಲ್ಸ,ಕೆಲ್ಸ,ಕೆಲ್ಸ. ಪ್ರತಿಯೊಬ್ಬ ನಿರ್ದೇಶಕನೂ ಕೂಡ ಅಷ್ಟೆ, ಪ್ಯಾಷನ್ ಗಾಗಿ ಸಿನಿಮಾ ಮಾಡ್ಬೇಕು. ಶೋಕಿಗಾಗಿ ಸಿನಿಮಾ ಮಾಡ್ಬಾರ್ದು. ಯಾವುದೇ ಫೇಮಸ್ ಡೈರೆಕ್ಟರ್ ನೇ ತೆಗೊಳಿ. ಅವ್ರು ಸಿನಿಮಾ ಬಗ್ಗೆ ಬಿಟ್ಟು ಬೇರೇನೂ ಯೋಚ್ನೆ ಮಾಡೊದಿಲ್ಲ. ಶಂಕರ್ ನಾಗ್ ಹಾಗೆ ಯಾವಾಗ್ಲೂ ಸಿನಿಮಾಕ್ಕೆ ಸಂಬಂದ ಪಟ್ಟಿರೂದ್ನೇ ಯೋಚ್ನೆ ಮಾಡ್ತಿದ್ರು. ಮತ್ತೆ ಬಹಳಷ್ಟು ಸಿನಿಮಾ ನೋಡ್ತಿದ್ರು. ಹೆಚ್ಚಾಗಿ ಕ್ಲಾಸಿಕ್ ಸಿನಿಮಾಗಳನ್ನೇ ನೋಡ್ತಿದ್ರು. ಹಾಗೆ ನನಗೆ ಈ ತರ ಫ್ರೇಮ್ ಬೇಕು ಅಂತ ಫಿಕ್ಸ್ ಆಗ್ತಿದ್ರು. ಅದು ಅವ್ರ ಕ್ರಿಯೇಶನ್. ಅವ್ರು ಏನು ಕ್ರಿಯೇಟ್ ಮಾಡ್ತಾರೆ ಅದು ಪಬ್ಲಿಕ್ ಗೆ ತಲ್ಪುತ್ತೆ. ಪಬ್ಲಿಕ್ ಅದನ್ನ ಒಪ್ಕೊಂಡ್ರೆ ಅದು ಸಕ್ಸಸ್. ಪಬ್ಲಿಕ್ ಒಪ್ಕೊಳ್ಳಿಲ್ಲ ಅಂದ್ರೆ ಫೇಲ್ಯೂರ್..


ಪರಮ್: ನೀವು ಶಂಕರ್ ಅವ್ರ ಮೊದಲನೇ ಪ್ರಾಜೆಕ್ಟ್ ‘ಮಿಂಚಿನ ಓಟ’ದಿಂದನೇ ಜೊತೆಯಲ್ಲಿದ್ರಿ, ಅವರು ಸಿನಿಮಾ ಮಾಡಿದ್ದಕ್ಕೂ, ಸೀರಿಯಲ್ ಮಾಡಿದ್ದಕ್ಕೂ ವ್ಯತ್ಯಾಸ ಏನಾದ್ರೂ ಇದ್ಯಾ?


ಜಗದೀಶ್: ವ್ಯತ್ಯಾಸ ಏನೂ ಇರ್ತಿರ್ಲಿಲ್ಲ. ಈಗ ಕಮರ್ಷಿಯಲ್ ಸಿನಿಮಾ ಮಾಡುವಾಗ ಡಿಮ್ಯಾಂಡ್ ಜಾಸ್ತಿ ಇರುತ್ತೆ. ಸೀರಿಯಲ್ ಗಳಿಗೆ ಡಿಮ್ಯಾಂಡ್ ಕಡಿಮೆ ಇರುತ್ತೆ. ಸಬ್ಜೆಕ್ಟ್ ಮೇಲೆ ಡಿಮ್ಯಾಂಡ್ ಇರುತ್ತೆ. ವರ್ಕಿಂಗ್ ಸ್ಟೈಲ್ ಒಂದೇ. ಡಿಮಾಂಡಿಂಗ್ ಒಂದೇ. ಮತ್ತೆ ಒಂದು ಒಳ್ಳೆಯ ವಿಷಯ ಏನಪ್ಪಾಂತಂದ್ರೆ, ಶಂಕರ್ ಗೆ ಚೆನ್ನಾಗಿ ಗೊತ್ತಿತ್ತು. ಕೆಲ್ಸ ಹೇಗೆ ತಗೀಬೇಕು, ಈ ಮನುಷ್ಯನ ಕೆಪಾಸಿಟಿ ಏನು? ನಾನೂಂತಲ್ಲ ಪ್ರತಿಯೊಬ್ಬರಿಗೂ. ಒಬ್ಬ ಆಕ್ಟರಿಗಾಗ್ಬೊದು, ಅಸೋಸಿಯೇಟ್ ಡೈರೆಕ್ಟರ್ ಆದ್ರೂ, ಅಸಿಸ್ಟೆಂಟ್ ಆದ್ರೂ ಎಲ್ಲರಿಗೂ ಹುರಿದುಂಬಿಸ್ತಾ ಇದ್ರು. “ಯಾಕೆ ಮಾಡಕ್ಕಾಗಲ್ಲ ಮಾಡೋ, ಹೋಗೊ, ಲೇ ಆಗುತ್ತೆ.” ಬರುತ್ತೋ ಬಿಡುತ್ತೋ ಅಷ್ಟು ಹುರಿದುಂಬಿಸಿ ಬಿಟ್ರೆ, ಅವ್ನು ಕೆಲ್ಸ ಮಾಡಿ ಬರ್ತಿದ್ದ.

\

ಪರಮ್: ಆ ಕಾನ್ಸೆಪ್ಟ್ ವರ್ಕ್ ಆಗ್ತಿತ್ತಾ?


ಜಗದೀಶ್: ವರ್ಕ್ ಆಗ್ತಿತ್ತು, ಈಗ ನನಗೆ ಒಂದು ಕೆಲ್ಸ ಆಗ್ಬೇಕು. ನೀವು ಏನೂಂತ ನನಿಗೊಂದು ಲೆವೆಲ್ ಆಫ್ ಅಂಡರ್ಸ್ಟಾಂಡಿಂಗ್ ಇರುತ್ತೆ. ಆ ಕೆಲ್ಸ ನಿಮ್ಮಿಂದ ಆಗುತ್ತೆ ಅಂತ. ಅಂತವ್ರನ್ನೆಲ್ಲಾ ಕಲೆ ಹಾಕ್ಕೋತೀನಿ ನಾನು. ಮಾಡೊಕ್ಕಾಗುತ್ತೆ ಮಾಡ್ಬೋದೂಂತ. ಆಮೇಲೆ ಹೋಗ್ತಾ ಹೋಗ್ತಾ ಜವಾಬ್ದಾರಿ ಜಾಸ್ತಿ ಆಗ್ತಾ ಹೋಗುತ್ತೆ. ಜವಾಬ್ದಾರಿ ಜಾಸ್ತಿ ಆದಾಗ ಕೆಲ್ಸ ಮಾಡುವವನಿಗೆ “ಇದು ನನ್ನ ಕೈಯಲ್ಲಿ ಆಗಲ್ಲಾ” ಅಂತ ಅನ್ನಿಸ್ಬಹುದು. ಆ ಟೈಮಲ್ಲಿ “ನೀನು ಮಾಡ್ತಿಯ, ನಿನ್ನ ಕೈಯಲ್ಲಿ ಆಗುತ್ತೆ” ಅಂತ ಕಾನ್ಫಿಡೆನ್ಸ್ ಕೊಡೋದಿದ್ಯಲ್ಲಾ, ಅದು ಚೆನ್ನಾಗಿ ಬರ್ತಿತ್ತು ಶಂಕರ್ ಗೆ.


‌ಟೀಂನಲ್ಲಿ ಕೆಲಸ ತೆಗೆಸುವುದರಲ್ಲಿ ಶಂಕರ್‌ ನಾಗ್ ಜಾಣ

ಶಂಕರ್ ಫ್ರೀ ಬಿಡ್ತಾ ಇದ್ದ. ಯಾರಿಗೂ ರಿಸ್ಟ್ರಿಕ್ಷ್ಯನ್ ಇರ್ಲಿಲ್ಲ. ಯಾರನ್ನೂ ಕಂಟ್ರೋಲ್ ಮಾಡ್ತಿರ್ಲಿಲ್ಲ. ಅಕಸ್ಮಾತ್ ಡಿಲೇ ಆಯ್ತು, ಪ್ರಾಬ್ಲಮ್ ಆಯ್ತು ಅಂದ್ರೆ ಕಿರ್ಚೊದು, ರೇಗಾಡೊದು ಎಲ್ಲಾ ಮಾಡ್ತಿರ್ಲಿಲ್ಲ ಸೆಟ್ ಅಲ್ಲಿ.

ಒಂದು ಲೊಕೇಶನ್ನಿಂದ ಇನ್ನೊಂದು ಲೊಕೇಶನ್ಗೆ, ಶಿಫ್ಟ್ ಅಂದ್ರೆ ಎಲ್ಲಾ ಶಿಫ್ಟ್ ಆಗ್ಬೇಕು. ಮೆಟೀರಿಯಲ್ ಎಲ್ಲಾ ಶಿಫ್ಟ್ ಮಾಡುವಾಗ ಹುಡುಗರೆಲ್ಲಾ ಲೆಥಾರ್ಜಿಕ್ ಆಗಿರ್ತಾರೆ. ಅವಾಗ ಅವ್ರನ್ನು ಕೂಡ ಹುರಿದುಂಬಸ್ತಾ ಇದ್ರು. ಹೇಗಂದ್ರೆ, “ಲೈಟ್ ಸ್ಟಾಂಡ್ ಶಿಫ್ಟ್ ಮಾಡ್ರೋ”ಅಂತ ಹೇಳಿ, ಒಂದು ಲೈಟ್ ಸ್ಟಾಂಡ್ ನ ಎತ್ಕೊಂಡು ಹೋಗ್ಬಿಡ್ತಿದ್ದ. ಅವ್ನು ಮಾಡ್ತಾನೆಂತ ಗೊತ್ತಾದ ತಕ್ಷಣ ಎಲ್ಲರೂ ಜಾಗ್ರತರಾಗಿ ಬಿಡ್ತಿದ್ರು. ಅಂದ್ರೆ, ನಾವು ಮಾಡದಿದ್ರೆ ಅವ್ನು ಮಾಡ್ಬಿಡ್ತಾನೆ ಅಂತ. ಬೈಯೊದು, ಗಲಾಟೆ ಮಾಡೊದು ಏನಿಲ್ಲ. ಈತರ ಹುರಿದುಂಬಿಸಿ ರೆಡಿ ಮಾಡ್ಕೊತಾ ಇದ್ದ. ಹಾಗಾಗಿ ಇಡೀ ಟೀಮಿನವ್ರಿಗೆ ಅವನ ಬಗ್ಗೆ ಗೊತ್ತಿತ್ತು.

ಈಗ ಆರು ಗಂಟೆಗೆ ಬರಕ್ಕೆ ಹೇಳಿ, ಡೈರೆಕ್ಟರ್ ಎಂಟು ಗಂಟೆಗೆ ಬಂದ್ರೆ, ಎಲ್ಲರೂ “ಹೋಗೊಣ ಬಿಡು” ಅಂತಾರೆ. ಶಂಕರ್ ಟೈಮಿಗೆ ಸರಿಯಾಗಿ ಬಂದ್ಬಿಡ್ತಾ ಇದ್ದ. “ಬನ್ರೋ, ಮಾಡ್ರೋ, ಲೇಟಾಯ್ತು” ಅಂತೆಲ್ಲಾ ಹೇಳಿ, ಒಂದೆರಡು ಪ್ರಾಪರ್ಟೀಸ್, ಅಥವಾ ಇನ್ನೇನಾದ್ರು ಇಲ್ಲಾಂತಂದ್ರೆ, ಅದಕ್ಕೆ ಏನು ಪ್ಲಾನ್ ಮಾಡ್ಬೇಕು, ಅದನ್ನ ಮಾಡಿ ಶೂಟಿಂಗ್ ಶುರು ಮಾಡ್ತಿದ್ದ. ಈಗ ಜ್ಯೂನಿಯರ್ಸ್ ಅಥವಾ ಇನ್ಯಾರೋ ಬರ್ಬೇಕೂಂತಂದ್ರೆ, ಕಾಯುವ ಟೈಮಲ್ಲೇ ಬೇರೆ ಏನಾದ್ರು ಶಾಟ್ ತೆಗೊತಾ ಇದ್ದ. ಹಾಗಾಗಿ ಟೈಮ್ ವೇಸ್ಟ್ ಆಗ್ತಿರ್ಲಿಲ್ಲ. ಸೆಟ್ ಅಲ್ಲಿ ಎಲ್ಲರಿಗೂ ಒಂದು ಲೆವೆಲ್ ಆಫ್ ಕಾನ್ಫಿಡೆನ್ಸ್ ಇರ್ತಿತ್ತು. ಮತ್ತೆ ಡಿಸಿಪ್ಲೀನ್ ಇರ್ತಿತ್ತು. ಹಾಗಾಗಿ ಎಲ್ಲರಿಗೂ ಸೀರಿಯಸ್ನೆಸ್ ಇತ್ತು. ಯಾರೂ ಲೆಥಾರ್ಜಿಕ್ ಆಗಿರ್ತಾ ಇರ್ಲಿಲ್ಲ. ಮುಖ್ಯವಾಗಿ ಎಲ್ಲರಿಗೂ ಪ್ಯಾಷನ್ ಇತ್ತು. ಒಂದು ಕಮಿಟ್ಮೆಂಟ್ ಇರ್ತಾ ಇತ್ತು. ಯಾರೂ ಕೂಡ ಶೋಕಿಗೆ ಮಾಡ್ತಾ ಇರ್ಲಿಲ್ಲ.
ಮುಂದುವರೆಯುವುದು…

20 views