ಶಿವಾಜಿ ಗಣೇಶನ್‌, ಎಂಜಿಆರ್‌, ರಾಜ್‌ಕುಮಾರ್‌ಅವರ ಗೆಳೆತನ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 130


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ಆಗೆಲ್ಲ ಚಿತ್ರರಂಗದಲ್ಲಿ ಬೆರಳೆಣಿಕೆಯಷ್ಟು ಸಂಗೀತಗಾರರು, ನಿರ್ದೇಶಕರು, ನಟರು, ಕಲಾವಿದರು ಇದ್ದರು. ಈಗ ಯಾರು ಬೇಕಾದರೂ, ಹಾಡಬಹುದು ಎನ್ನುವಂತಾಗಿ ಬಿಟ್ಟಿದೆ. ಸಾಮಾನ್ಯವಾದ ಧ್ವನಿಯನ್ನು ಶುಶ್ರಾವ್ಯವಾಗಿ ಮಾಡಬಹುದಾದ ತಂತ್ರಜ್ಞಾನ ಬಂದಿದೆ.


ಆಗ ನಮ್ಮಲ್ಲಿಯೇ ಸೌತ್‌ ಇಂಡಿಯನ್‌ ಫಿಲ್ಮ್‌ ಚೇಂಬರ್ಸ್‌ ಆಫ್‌ ಕಾಮರ್ಸ್‌ ಎಂದಿತ್ತು. ನಾಲ್ಕು ಭಾಷೆಯ ಕಲಾವಿದರು ಅಣ್ಣ, ತಮ್ಮಂದಿರಂತೆ ಇದ್ದೆವು. ಶಿವಾಜಿ ಗಣೇಶನ್‌, ಎಂಜಿಆರ್‌ ಅವರು ಎಷ್ಟು ದೊಡ್ಡ ಮನುಷ್ಯರು. ಆದರೂ, ರಾಜ್‌ಕುಮಾರ್‌ ಅವರನ್ನು ಕಂಡರೆ ಎಷ್ಟೊಂದು ಗೌರವ ಕೊಡುತ್ತಿದ್ದರು. ಅದನ್ನೇ ಕುಟುಂಬ ಎನ್ನುವುದು. ಎಲ್ಲರ ಶ್ರೇಯಸ್ಸಿನ ಜೊತೆಗೆ ಎಲ್ಲರೂ ಸುಖವಾಗಿರಬೇಕು ಎಂದು ಬಯಸುತ್ತಿದ್ದ ಕಾಲವದು.ಮುಂದುವರೆಯುವುದು...

16 views