ಶಾಸ್ತ್ರಿ ಅವರನ್ನ ಜಾನಕಮ್ಮ ಒಪ್ಪಿದ್ರು ನಮ್ಮವರೇ ಒಪ್ಪಲಿಲ್ಲ

ಸುಮಾ - ಎಲ್. ಎನ್‌ಶಾಸ್ತ್ರಿ ಲೈಫ್ ಸ್ಟೋರಿ ಭಾಗ-13
‘ಪ್ರೀತಿ ಮಾಡು ತಪ್ಪೇನಿಲ್ಲ’ ಹಾಡಿನ ಟ್ರ್ಯಾಕ್‌ ನಡೆಯುತ್ತಿತ್ತು. ಅದು ಡುಯೆಟ್‌ ಸಾಂಗ್‌. ಶಾಸ್ತ್ರಿ ಅವರು ಹಾಡಿದ್ದನ್ನು ಕೇಳಿ ಜಾನಕಮ್ಮ ಅವರಿಗೆ ಬಹಳ ಖುಷಿ ಆಗಿತ್ತು. ಎಷ್ಟು ಚೆನ್ನಾಗಿ ಹಾಡುತ್ತೀಯಾ ನೀನು. ಜೇಸುದಾಸ್‌, ಕಿಶೋರ್‌ಕುಮಾರ್ ಧ್ವನಿ ವಿಲೀನವಾದ ಹಾಗಿದೆ. ನೀನು ಯಾರನ್ನು ಅನುಕರಿಸಬೇಡ ಎಂದಿದ್ದರು. ಹಂಸಲೇಖ ಅವರ ಬಳಿ ಇವನದೇ ಹಾಡು ಉಳಿಸಿಕೊಳ್ಳಿ ಎಂದು ಹೇಳಿ ಹೋಗಿದ್ದರು. ಆದರೆ, ಅದು ಆಗಲಿಲ್ಲ. ಜೇಸುದಾಸ್‌ ಅವರೇ ನಂತರದಲ್ಲಿ ಅದನ್ನು ಹಾಡಿದ್ರು. ಕನ್ನಡದಲ್ಲಿ ಶಾಸ್ತ್ರಿ ಎಂಬ ಗಾಯಕನಿದ್ದಾನೆ, ಅದ್ಭುತವಾಗಿ ಹಾಡುತ್ತಾನೆ ಎಂದು ಅವರು ಸಾಕಷ್ಟು ಕಡೆ ಹೇಳಿದ್ರಂತೆ. ಆಮೇಲೆ ಎಲ್ಲೇ ಸಿಕ್ಕರೂ ಮಾತನಾಡಿಸುತ್ತಿದ್ರು. ಶಾಸ್ತ್ರಿ ಅವರ ಜೊತೆ ನಾನು ಅವರನ್ನು ಭೇಟಿಯಾಗಿದ್ದೆ. ನಾನು ಹಾಡುತ್ತೇನೆ ಎಂದು ತಿಳಿದು, ಅವರ ಹಾಡನ್ನು ಹೇಳಲು ಹೇಳಿದ್ರು. ನಿಮ್ಮ ಹಾಡನ್ನು ನಿಮ್ಮ ಮುಂದೆಯೇ ಹೇಳುವುದಿಲ್ಲ ಎಂದು ಹೇಳಿ, ಭಾವಗೀತೆಯೊಂದನ್ನು ಹಾಡಿದ್ದೆ.ಮುಂದುವರೆಯುವುದು...

17 views