ಶಾಸ್ತ್ರಿ ಅವರನ್ನ ಸುಸ್ತು ಮಾಡಿಸಿದ್ದ ಅನಂತ್‌ ನಾಗ್

ಸುಮಾ - ಎಲ್. ಎನ್‌ ಶಾಸ್ತ್ರಿ ಲೈಫ್ ಸ್ಟೋರಿ ಭಾಗ-4
ಚೆನ್ನಾಗಿ ಹಾಡುತ್ತಿಯಲ್ವಾ ನೀನು ಚಿತ್ರರಂಗದಲ್ಲಿ ಪ್ರಯತ್ನಿಸಬಹುದಲ್ವಾ ಎಂದು ಹೇಳಿ, ಎಲ್‌. ಎನ್‌ ಶಾಸ್ತ್ರಿ ಅವರು ಪಿಯುಸಿಯಲ್ಲಿದ್ದಾಗ ಕಾಲೇಜು ಪ್ರಾಧ್ಯಾಪಕ ಮತ್ತು ನಾಟಕದ ಮೇಸ್ಟ್ರು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರಂತೆ.


ಅಲ್ಲಿ ಅನಂತ್‌ನಾಗ್‌ ಸಿನಿಮಾದ ಹಾಡೊಂದರ ಸಂಯೋಜನೆ ನಡೆಯುತ್ತಿತಂತೆ. ಆಗ ಇವರನ್ನು ಹಾಡಲು ಕರೆದುಕೊಂಡು ಹೋಗಿದ್ದರಂತೆ. ಇವರು ಅಲ್ಲಿ ಭಾಗ್ಯದ ಲಕ್ಷ್ಮೀ ಹಾಡನ್ನು ಹಾಡಿದ್ದರಂತೆ. ಅದನ್ನು ಕೇಳಿದ ಅನಂತ್‌ನಾಗ್‌ಗೆ ತುಂಬಾ ಇಷ್ಟವಾಗಿ ಬೆಳಿಗ್ಗೆಯಿಂದ ಸಂಜೆವರೆಗೂ ಹಾಡಿಸುತ್ತಲೇ ಇದ್ದರಂತೆ. ಇವರಿಗೆ ಸುಸ್ತಾಗಿ, ನಿಧಾನಕ್ಕೆ ಏನೋ ಒಂದು ನೆಪ ಹೇಳಿ ಹೊರಗೆ ಬಂದರಂತೆ. ಹಾಗಾಗಿ, ಇವರಿಗೆ ಇಡಸ್ಟ್ರಿಯವರ ಪರಿಚಯ ಆಗಿತ್ತು. ಅನಂತ್‌ನಾಗ್‌ ಅವರು ಈ ಹುಡುಗನಿಗೆ ಮ್ಯೂಸಿಕ್ ಡೈರೆಕ್ಟರ್‌ ಪರಿಚಯ ಮಾಡಿಕೊಡಿ ಅದ್ಭುತವಾಗಿ ಹಾಡುತ್ತಾನೆ ಎಂದು ಹೇಳಿದ್ದರಂತೆ.ಮುಂದುವರೆಯುವದು..,

31 views