
ಶಾಸ್ತ್ರಿ ಅವರಿಗಿದ್ದ ಸಾಲ ಮತ್ತು ಕಾಯಿಲೆ,
ಸುಮಾ - ಎಲ್. ಎನ್ ಶಾಸ್ತ್ರಿ ಲೈಫ್ ಸ್ಟೋರಿ ಭಾಗ-21

1.10ಕೋಟಿ ಸಾಲ ಇತ್ತು. ಇದರಿಂದ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಅವರು ತುಂಬಾ ಸಣ್ಣ ಆಗುತ್ತಿದ್ರು. ಸಿಗರೇಟ್ ಸೇದುತ್ತಿರಲಿಲ್ಲ. ಕುಡಿಯುವ ಚಟ ಇರಲಿಲ್ಲ. ದಕ್ಷಿಣ ಭಾರತದ ತಿನಿಸುಗಳನ್ನು ತಿನ್ನುತ್ತಿದ್ರು. ಜಿಮ್ಗೆ ಹೋಗುತ್ತಿದ್ದರು. ಒಂದು ದಿವಸ ಹೊಟ್ಟೆಯಲ್ಲಿ ತುಂಬಾ ಹಿಂಸೆಯಾಗುತ್ತಿದೆ. ತಿರುಗಿ ಮಲಗಲು ಆಗುತ್ತಿಲ್ಲ. ವಾಂತಿ ಬರುತ್ತಿದೆ ಎಂದ್ರು. ರಕ್ತದ ಪರೀಕ್ಷೆ ಮಾಡಿಸಲು ವೈದ್ಯರು ಹೇಳಿದ್ರು. ಮಾಡಿಸಿದೆವು. ಲಿವರ್ ಫನ್ಷನಿಂಗ್ ಟೆಸ್ಟ್ ಮಾಡಿಸಿದಾಗ ಲಿಕ್ವಿಡ್ ವ್ಯತ್ಯಾಸ ಆಗಿದೆ. ಏನು ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ರು.
ಆಯುರ್ವೇದಿಕ್ ಡಾಕ್ಟರೊಬ್ಬರು ಸ್ಕ್ಯಾನಿಂಗ್ ಮಾಡಿಸಲು ಹೇಳಿದ್ರು. ಸ್ಕ್ಯಾನಿಂಗ್ ಮಾಡುವವರು ಲಿವರ್ನಲ್ಲಿ ವಾಟರ್ ಬಾಲ್ಸ್ ಕಾಣಿಸುತ್ತಿದೆ ಎಂದ್ರು. ನಂತರ ಬಾಡಿ ಸ್ಕ್ಯಾನಿಂಗ್ ಮಾಡಿಸಿದೆವು. ಆಗ ಕ್ಯಾನ್ಸರ್ ದೇಹದ ವಿವಿಧ ಭಾಗಗಳಿಗೆ ಹರಡಿದೆ ಎಂಬುದು ತಿಳಿಯಿತು. ಕ್ಯಾನ್ಸರ್ ನಾಲ್ಕನೇ ಹಂತಕ್ಕೆ ತಲುಪಿದೆ ಎಂದು ಡಾಕ್ಟರ್ ಅವರಿಗೆ ಹೇಳಿಬಿಟ್ರು. ಅಲ್ಲಿಯವರೆಗೂ ಧೈರ್ಯವಾಗಿದ್ದ ಶಾಸ್ತ್ರಿ ಕುಗ್ಗಿಹೋದ್ರು. ನನಗೆ ಕ್ಯಾನ್ಸರ್ ಅಂದಾಗ ನಂಬಲು ಸಾಧ್ಯವೇ ಆಗಿಲ್ಲ. ಒಂದು ತಿಂಗಳು ಬದುಕಿದ್ರೆ ಹೆಚ್ಚು, ಅದಕ್ಕಿಂತ ಜಾಸ್ಥಿ ದಿನ ಬದುಕುವುದಿಲ್ಲ ಎಂಬ ಅಭಿಪ್ರಾಯ ವೈದ್ಯರಿಂದ ಬಂತು. ಆಯುರ್ವೇದದಲ್ಲಿ ಆ ಕಾಯಿಲೆಗೆ ಜಲೋಧರ ಎಂದು ಹೇಳಿದ್ರು.
ಹೊಟ್ಟೆಯಲ್ಲಿ ನೀರು ತುಂಬಿಕೊಂಡು ದಪ್ಪ ಆಗಿತ್ತು. ಜೈನ್ ಆಸ್ಪತ್ರೆಗೆ ಸೇರಿಸಿದ್ವಿ. ಅಲ್ಲಿಯ ವೈದ್ಯರು ಅಬಬ್ಬಾ ಎಂದರೆ ಇನ್ನು ಹತ್ತು ದಿನ ಬದುಕಬಹುದು ಎಂದು ಅಣ್ಣನ ಹತ್ತಿರ ಹೇಳಿದ್ದರಂತೆ. ಹೊಟ್ಟೆಯಲ್ಲಿನ ನೀರು ತೆಗೆದ ಮೇಲೆ ಸ್ವಲ್ಪ ಆರಾಮಾಗಿತ್ತು ಅವರಿಗೆ. ಮನೆಗೆ ಕರೆದುಕೊಂಡು ಬಂದೆವು. ಆದರೆ ಪ್ರೋಟೀನ್ ತೆಗೆದಿದ್ದರಿಂದ ಅವರಿಗೆ ದೇಹದಲ್ಲಿ ಶಕ್ತಿಯೇ ಇರಲಿಲ್ಲ. ಸ್ವಲ್ಪವೂ ಚಟುವಟಕೆಯಿರಲಿಲ್ಲ. ಪ್ರೋಟೀನ್ ತೆಗೆದ ಒಂದು ವಾರಕ್ಕೆ ಹೋಗಿಬಿಟ್ರು.
ಮುಂದುವರೆಯುವುದು...