ಶಾಸ್ತ್ರಿ ಅವರು ಹಂಸಲೇಖರ ಶಿಷ್ಯರಾಗಿದ್ದು ಹೇಗೆ?

ಸುಮಾ - ಎಲ್. ಎನ್‌ ಶಾಸ್ತ್ರಿ ಲೈಫ್ ಸ್ಟೋರಿ ಭಾಗ-5
ಪತ್ರಕರ್ತೆ ಡಾ. ವಿಜಯಮ್ಮ ಶಾಸ್ತ್ರಿ ಅವರ ದೂರದ ಸಂಬಂಧಿ. ಅವರ ಮಗ ಬಿ. ಸುರೇಶ್‌. ಮತ್ತು ಶಾಸ್ತ್ರಿ ಆಪ್ತ ಗೆಳೆಯರು. ಇವರಿಗೆ ಬೆಂಗಳೂರಿನಲ್ಲಿ ವಿಜಯಮ್ಮ ಬಿಟ್ಟರೆ ಬೇರೆ ಯಾರು ಹೆಚ್ಚಾಗಿ ಗೊತ್ತಿರಲಿಲ್ಲ. ಎಂಜಿನಿಯರಿಂಗ್‌ ಸೇರಿಕೊಂಡ ನಂತರ ಬೆಂಗಳೂರಿಗೆ ಬಂದ ಇವರು, ವಿಜಯಮ್ಮ ಅವರ ಬಳಿ ಸಹಾಯ ಕೇಳಿದ್ದಾರೆ. ಆಗ ಅವರು, ಒಂದು ಲೆಟರ್‌ ಕೊಟ್ಟು ಅದನ್ನು ಹಂಸಲೇಖ ಅವರಿಗೆ ಕೊಡುವಂತೆ ಹೇಳಿದ್ದಾರೆ. ವಾರದಿಂದ ಹತ್ತು ದಿವಸ ಹಂಸಲೇಖ ಅವರನ್ನು ಭೇಟಿ ಆಗಲು ಅಲೆದಾಡಿದ್ದಾರೆ. ಒಂದು ದಿವಸ ಹಂಸಲೇಖ ಅವರ ಹೆಂಡತಿ ಅವರಿಗೆ ಬೇಸರವಾಗಿ ಆ ಹುಡುಗ ದಿನ ಬಂದು ಹೋಗುತ್ತಿದ್ದಾನೆ. ಅವನು ಇವತ್ತು ಬರುವವರೆಗೆ ನೀವು ಹೋಗಬೇಡಿ ಎಂದು ಬಲವಂತವಾಗಿ ಕೂರಿಸಿದ್ದರಂತೆ. ಪುಣ್ಯಕ್ಕೆ ಅವತ್ತು ಬೇಗನೇ ಶಾಸ್ತ್ರಿ ಬಂದಿದ್ದರಂತೆ. ಆಗ ಹಂಸಲೇಖ ಸಿಕ್ಕಿದ್ದಾರೆ. ಏನಪ್ಪ, ಯೋಗ್ಯತೆ ಇದ್ದರೆ ಪ್ರೋತ್ಸಾಹಿಸಿ ಎಂದು ಪತ್ರದಲ್ಲಿ ಬರೆದಿದ್ದಾರೆ. ನಿನಗೆ ಯೋಗ್ಯತೆ ಇದೆಯೋ ಇಲ್ವೋ ಎನ್ನುವುದನ್ನು ನೋಡಬೇಕಲ್ಲಾ ಎಂದು ಹೇಳಿದ್ದರಂತೆ. ನೋಡಿ ಸರ್‌, ಎಂದು ಇವರು ಹೇಳಿದರಂತೆ.


ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಬಾಲಮುರಳಿಕೃಷ್ಣ ಅವರ ಅಭಿಮಾನಿ ಶಾಸ್ತ್ರಿ. ಚಿಕ್ಕವಯಸ್ಸಿನಿಂದ ಅವರ ಹಾಡು ಕೇಳಿ, ಕೇಳಿ, ಸ್ವಲ್ಪ ಅವರ ತರಹವೇ ಹಾಡುತ್ತಿದ್ದರಂತೆ. ಹಂಸಲೇಖ ಅವರ ಬಳಿ ಶಾಸ್ತ್ರಿ ಬಂದಾಗ ‘ಮುತ್ತಿನ ಹಾರ’ದ ಸಂಯೋಜನೆ ನಡೆಯುತ್ತಿತ್ತು. ಏನಾದ್ರೂ ಒಂದು ಹಾಡಪ್ಪ ನೀನು ಎಂದರಂತೆ. ಶಾಸ್ತ್ರಿ ಬಾಲಮುರಳಿಕೃಷ್ಣ ಅವರದೇ ಕೃತಿ ಹಾಡಿದ್ದಾರೆ. ಹಂಸಲೇಖ ಅವರಿಗೆ ಬಹಳ ಇಷ್ಟವಾಯಿತಂತೆ. ಹಂಸಲೇಖ ಅವರಿಗೂ ಬಾಲಮುರಳಿಕೃಷ್ಣ ಎಂದರೆ ಪ್ರಾಣ. ಅದ್ಭುವಾಗಿ ಹಾಡುತ್ತೀಯ ಎಂದು, ತಕ್ಷಣವೇ ‘ದೇವರು ಹೊಸೆದ ಪ್ರೇಮದ ಹಾರ’ ಹಾಡಿಸಿದರಂತೆ. ಅವರಿಗೆ ಇಷ್ಟವಾಗಿ ಇವತ್ತಿನಿಂದ ಸ್ಟುಡಿಯೊಗೆ ಬಾ ಎಂದಿದ್ದಾರೆ. ಅಂದಿನಿಂದ ಶಾಸ್ತ್ರಿ ಹಂಸಲೇಖ ಅವರ ಶಿಷ್ಯ ವೃತ್ತಿ ಪ್ರಾರಂಭಿಸಿದರು.


ಅಂದಿನಿಂದ ಇವರನ್ನು ಎಲ್ಲರೂ ಇಷ್ಟಪಡುತ್ತಿದ್ದರು. ನಿನ್ನ ಧ್ವನಿ ಕಿಶೋರ್‌ ಕುಮಾರ್‌ ಮತ್ತು ಜೇಸುದಾಸ್‌ ಅವರ ಧ್ವನಿಯನ್ನು ವಿಲೀನಗೊಳಿಸಿದ ಹಾಗಿದೆ ಎಂದು ಹೇಳುತ್ತಿದ್ದರಂತೆ. ಹೀಗೆ ಅವರ ಪಯಣ ಶುರುವಾಯಿತು. ಹಂಸಲೇಖ ಅವರಿಗೂ ಬಹಳ ಅಚ್ಚುಮೆಚ್ಚಾದರು. ಅವರು ಕಂಪೋಸಿಂಗ್‌ ಹೋಗುವಲ್ಲೆಲ್ಲ ಇವರನ್ನು ಕರೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿಯೇ ರಾಜೇಶ್‌ ಕೃಷ್ಣ ಅವರ ಪ್ರವೇಶವಾಯ್ತು. ಅವನು ತುಂಬಾ ಚಿಕ್ಕ ಹುಡುಗನಾಗಿದ್ದ. ಶಾಸ್ತ್ರಿ ಅವರು ಅವನಿಗೆ ಮೈಕ್‌ ಮುಂದೆ ಧೈರ್ಯ ತುಂಬಿ ಹಾಡಿಸುತ್ತಿದ್ರು. ಇಬ್ಬರೂ ಬಹಳ ಒಳ್ಳೆಯ ಸ್ನೇಹಿತರಾದರು. ಆದಾದ ಆರೇಳು ತಿಂಗಳ ನಂತರ ನಾನು ಇಂಡಸ್ಟ್ರಿಗೆ ಬಂದೆ. ನಾನು ಮೊದಲು ಬಂದಿದ್ದು ವಿ.ಮನೋಹರ್ ಬಳಿ.ಮುಂದುವರೆಯುವುದು...

18 views