ಶಾಸ್ತ್ರಿ ಮತ್ತು ಹಂಸಲೇಖ ಅವರ ಜಗಳ

ಸುಮಾ - ಎಲ್. ಎನ್‌ಶಾಸ್ತ್ರಿ ಲೈಫ್ ಸ್ಟೋರಿ ಭಾಗ-15
ಒಮ್ಮೆ ಹಂಸಲೇಖ ಮತ್ತು ಶಾಸ್ತ್ರಿ ಅವರು ಯಾವುದೋ ಸಣ್ಣ ವಿಷಯಕ್ಕೆ ದೊಡ್ಡ ಜಗಳ ಆಡಿಕೊಂಡಿದ್ರು. ಆಯ್ತು ಬಿಡಿ ಸರ್‌.. ನಾನಿನ್ನು ಬರಲ್ಲ ಎಂದು ಶಾಸ್ತ್ರಿ ಚಿಕ್ಕ ಹುಡುಗನ ರೀತಿಯಲ್ಲಿ ಜಗಳ ಆಡಿಕೊಂಡು ಹೋಗಿದ್ರು. ಹಂಸಲೇಖ ಅವರು ಬರಬೇಡ. ನೀನಿಲ್ಲದೇ ನಾನು ಇರಲ್ಲ ಅಂದುಕೊಂಡ್ಯಾ ಎಂದು ಹೇಳಿದ್ರು. 2 ದಿವಸ ಇವರು ಹೋಗದೇ ಮನೆಯಲ್ಲಿಯೇ ಕುಳಿತುಕೊಂಡಿದ್ರು. ಹಂಸಲೇಖ ಅವರ ಆತ್ಮೀಯ ಸ್ನೇಹಿತ ಮತ್ತು ಡ್ರೈವರ್‌ಚಂದ್ರು ಅವರ ಬಳಿ ಹಂಸಲೇಖ, ‘ಎಲ್ಲಪ್ಪ ಅವನು, ಅವನಿಲ್ಲದೇ ನನಗೆ ಇರಲು ಆಗುತ್ತಿಲ್ಲ. ಹೋಗಿ ಎಲ್ಲಿದ್ರೂ ಎತ್ತಾಕ್ಕಿಕೊಂಡು ಬಾ’ ಎಂದು ಹೇಳಿ ಕಳುಹಿಸಿದ್ರು.


ಶಾಸ್ತ್ರಿ ವಿ. ಮನೋಹರ್‌ ಮನೆಯಲ್ಲಿ ಮಲಗಿದ್ರಂತೆ. ಅಲ್ಲಿಗೆ ಬಂದ ಚಂದ್ರು, ಆವಯ್ಯ ಏನೋ ಹೇಳುತ್ತಾನಂತ ನೀನು ಅದನ್ನೇ ತಲೆಯಲ್ಲಿ ಹಿಡ್ಕೊಂಡಿದಿಯಲ್ಲಾ, ನೋಡು ನೀನು ಇಲ್ಲದೇ ಇರೋದಕ್ಕೆ ಆಗೋದಿಲ್ಲ ಎಂದು ನನ್ನನ್ನು ಕಳುಹಿಸಿದ್ದಾರೆ. ಬಾ ಎಂದರಂತೆ. ಇವರು ನಾನು ಬರಲ್ಲ ಎಂದಿದ್ದಾರೆ. ಬಾರಪ್ಪ ನೀನು ಎಂದು ಒತ್ತಾಯ ಮಾಡಿ ಕರೆದುಕೊಂಡು ಹೋಗಿದ್ರಂತೆ. ಹಂಸಲೇಖ ಅವರ ಜೊತೆ ಸ್ವಂತ ಮಗನ ರೀತಿಯಲ್ಲಿಯೇ ಶಾಸ್ತ್ರಿ ಇದ್ದರು. ಹಂಸಲೇಖ ಅವರು ಅವರ ನೋವು, ನಲಿವುಗಳನ್ನು ಶಾಸ್ತ್ರಿಗಳ ಬಳಿ ಹೇಳಿಕೊಳ್ಳುತ್ತಿದ್ದರು. ಶಾಸ್ತ್ರಿ ಅವರು ಒಬ್ಬರು ಹೇಳಿದ ವಿಷಯವನ್ನು ಇನ್ನೊಬ್ಬರ ಬಳಿ ಹೇಳುತ್ತಿರಲಿಲ್ಲ. ಅವರ ಬಳಿ ಹೇಳುವ ವಿಷಯಗಳು ಹೊಟ್ಟೆಯಲ್ಲಿಯೇ ಇದ್ದು, ಅಲ್ಲಿಯೇ ಕರಗಿಹೋಗುತ್ತಿತ್ತು.ಮುಂದುವರೆಯುವುದು...

25 views