ಶಾಸ್ತ್ರಿಯವರಿಗೆ ಕಷ್ಟ ಇತ್ತು, ಕೆಲಸ ಇರಲಿಲ್ಲ ಯಾಕೆ?

ಸುಮಾ - ಎಲ್. ಎನ್‌ಶಾಸ್ತ್ರಿ ಲೈಫ್ ಸ್ಟೋರಿ ಭಾಗ-18
ಮೆಲೋಡಿ ಸಿನಿಮಾದ ನಂತರ ಸ್ವಲ್ಪ ಸಾಲ ಮಾಡಿಕೊಂಡಿದ್ದರು. ನಂತರ ಅವರಿಗೆ ಕೆಲಸ ಇರಲಿಲ್ಲ. ತಾನಾಗೇ ಹೋಗಿ ಅವರು ಯಾರ ಬಳಿಯೂ ಅವಕಾಶ ಕೇಳುತ್ತಿರಲಿಲ್ಲ. ಅವಕಾಶ ಬೇಕು ಎಂದಾದರೆ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ಅಪ್ರೋಚ್‌ ಮಾಡುವುದು ಅವಶ್ಯ. ನಾನು ಹೇಳಿದ್ರೆ ಅವರು ಕೇಳುತ್ತಿರಲಿಲ್ಲ. ಎಷ್ಟೇ ಜನಪ್ರಿಯರಾದರೂ, ಈಗ ಯಾರೂ ಮನೆ ಬಾಗಿಲಿಗೆ ಬಂದು ಅವಕಾಶ ಕೊಡುವುದಿಲ್ಲ.


ಮುರ್ನಾಲ್ಕು ಸಾವಿರ ಹಾಡುಗಳನ್ನು ಹಾಡಿದ್ದಾರೆ. ಬಹುತೇಕ ಎಲ್ಲಾ ಸಂಗೀತ ನಿರ್ದೇಶಕರ ಬಳಿಯೂ ಕೆಲಸ ಮಾಡಿದ್ದಾರೆ. ಇಳಯರಾಜ ಸಂಗೀತ ನಿರ್ದೇಶನದ ‘ಭಾಗ್ಯದ ಬಳೆಗಾರ ಸಿನಿಮಾ’ಕ್ಕಾಗಿ ಅವರು ಹಾಡಿದ್ದರು. ಆಗ ಇಳಯರಾಜ ಅವರು ಇಲ್ಲಿಯವರೆಗೂ ಯಾಕಪ್ಪ ನನ್ನ ಕಣ್ಣಿಗೆ ಕಾಣಿಸಿರಲಿಲ್ಲ ಎಂದು ಕೇಳಿದ್ದರಂತೆ. ಎಲ್ಲದ್ದಕ್ಕೂ ಸಮಯ ಬರಬೇಕಲ್ವಾ ಸರ್‌. ಎಂದು ಇವರು ಹೇಳಿದ್ದರಂತೆ.


ಅವರು ಸಾಯುತ್ತಾರೆ ಎಂದು ಕೊನೆ ಕ್ಷಣದವರೆಗೂ ನಾನು ಅಂದುಕೊಂಡೇ ಇರಲಿಲ್ಲ. ಯಾವ ದುಶ್ಚಟಗಳು ಇಲ್ಲದ ಅವರಿಗೆ, ಕ್ಯಾನ್ಸರ್‌ ಬರಲು ಸಾಧ್ಯವೇ ಇಲ್ಲ ಎಂದು ನನಗೆ ಅನಿಸುತ್ತಿತ್ತು. ಕೊನೆಯುಸಿರು ಎಳೆಯುತ್ತಾರೆ ಎಂಬ ಭ್ರಮೆಯೂ ನನಗೆ ಇರಲಿಲ್ಲ.ಮುಂದುವರೆಯುವುದು...


21 views