ಸರ್ಕಾರಿ ಕೆಲಸಕ್ಕೆ ಅನ್ಯಾಯ ಮಾಡುತ್ತಿದ್ದೇನೆ ಎನಿಸತೊಡಗಿ ಕೆಲಸವನ್ನೇ ಬಿಟ್ಟೆ

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 18ಜನಪ್ರಿಯವಾದ ಮೇಲೆ ಕಾವೇರಿ ಎಂಪೋರಿಯಂನಲ್ಲಿ ಕೆಲಸ ಮಾಡಲು ಆಗುತ್ತಿರಲಿಲ್ಲ. ಹಾಗಾಗಿ, ಇದು ಕರ್ನಾಟಕ ಸರ್ಕಾರದ್ದು, ಕೆಲಸಕ್ಕೆ ಅನ್ಯಾಯ ಮಾಡುತ್ತಿದ್ದೇನೆ ಎನಿಸತೊಡಗಿತು. ನಾನು ಕೆಲಸ ಬಿಟ್ಟರೆ ಬೇರೆಯವರಿಗೆ ಕೆಲಸ ಸಿಗುತ್ತದೆ ಎಂದು ಯೋಚನೆ ಮಾಡಿ ಕೆಲಸ ಬಿಟ್ಟೆ. ಆಗ ಮಗಳಿಗೆ ಎಂಟು, ಮಗನಿಗೆ ಐದು ವರ್ಷವಾಗಿತ್ತು. ಸರ್ಕಾರಿ ಕೆಲಸ ಯಾಕೆ ಬಿಟ್ಟೆ ಎಂದು ಎಲ್ಲರೂ ಬೈದ್ರು. ಕಚೇರಿಯವರು ನೀವು ಸಹಿ ಮಾಡಿ ಹೋಗಿ ಸಾಕು ಅಂದರು. ಆದರೆ, ನಾನು ಆಗಲ್ಲ, ಬೇರೆಯವರಿಗೆ ಕೊಡಿ ಎಂದೆ.


‘ಕೃಷ್ಣ ಸಂದಾನ’ ಹಾಸ್ಯ ನಾಟಕ ಮಾಡಿದೆವು. ಅದರಲ್ಲಿ ಕರ್ಣನ ಪಾತ್ರ ಮಾಡಿದ್ದೆ. ಸತ್ಯ ದುರ್ಯೋಧನ ಆಗಿದ್ರು. ವೆಂಕಟಾದ್ರಿ ಕೃಷ್ಣ ಆಗಿದ್ರು. ಅದೇ ಸಮಯದಲ್ಲಿ ನನಗೆ ಮದುವೆಯಾಯಿತು. ನನ್ನ ಹೆಂಡತಿಗೆ ಮನೆ ಬಿಟ್ಟು ಬೇರೇನು ಗೊತ್ತಿಲ್ಲ. ಸಿನಿಮಾ, ಶೂಟಿಂಗ್‌, ಕಾರ್ಯಕ್ರಮ ಯಾವುದಕ್ಕೂ ಆಕೆ ಬರುವುದಿಲ್ಲ. ಹಿರಿಯರೇ ನೋಡಿ, ಒಪ್ಪಿ ಮಾಡಿದ ಮದುವೆ ನಮ್ಮದು. ಮಗಳು ಎಂಎಸ್‌ಸಿ ಮಾಡಿದ್ದಾಳೆ. ಮೊಮ್ಮಗಳು ಇದ್ದಾಳೆ. ಮಗನಿಗೆ ಸ್ವಲ್ಪ ಕಣ್ಣಿನ ಸಮಸ್ಯೆಯಿತ್ತು. ಆದರೆ, ನಮ್ಮಗದು ಗೊತ್ತಾಗಲೇ ಇಲ್ಲ. ಅವನು ಓದುವುದೇ ಇಲ್ಲ ಎಂದುಕೊಂಡಿದ್ವಿ. ಆದರೆ, ನಂತರದಲ್ಲಿ ಚೆನ್ನಾಗಿ ಓದಿ, ಮಲೇಷ್ಯಾದಲ್ಲಿ ಉನ್ನತ ವ್ಯಾಸಂಗವೂ ಮಾಡಿದ್ದಾನೆ. ಈಗ ಸಾಫ್ಟವೇರ್‌ ಕ್ಷೇತ್ರದಲ್ಲಿದ್ದಾನೆ. ಕುಟುಂಬ ಜೀವನ ಚೆನ್ನಾಗಿ ನಡೆಯುತ್ತಿದೆ.ಮುಂದುವರೆಯುವುದು...

17 views