ಸೈಕಲ್‌ ತುಳಿತಿದ್ದ ದಿನಗಳನ್ನ ನೆನಪಿಸಿಕೊಂಡ ಬಿ.ಸುರೇಶ

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 126

(ಶಂಕರ್ ನಾಗ್ ಅವರ‌ ಒಡನಾಡಿ‌ ಬಿ.ಸುರೇಶ ಅವರ ನೆನಪುಗಳು)ಸುರೇಶ: ಶಂಕರ್ ಒಬ್ಬ ಅಪರೂಪದ ವ್ಯಕ್ತಿ. ನಾವು ಶಂಕರ ಅಂತಲೇ ಕರಿತಿದ್ದಂತಹ ವ್ಯಕ್ತಿ. ಅವರ ಮೊದಲ ಪರಿಚಯ ನನಗೆ ಆಗಿದ್ದು ಯಾವಾಗ ಅಂದ್ರೆ, ನಮ್ಮಮ್ಮ ಒಂದು ಪ್ರಿಂಟಿಂಗ್ ಪ್ರೆಸ್ ನಡಸ್ತಾ ಇದ್ರು, ಅಲ್ಲಿಗೆ ಅವ್ರ ನಾಟಕ ತಂಡದ ಕರಪತ್ರಗಳನ್ನು ಮುದ್ರಿಸೋಕೆ ಬರ್ತಾ ಇದ್ರು. ಅವಾಗ ನಾನಿನ್ನೂ ಡಿಪ್ಲೋಮೋ ಓದ್ತಾ ಇದ್ದೆ. ಆಗ ಮುದ್ರಣವಾದ ಕರ ಪತ್ರವನ್ನು ಕರಡು ತಿದ್ದುವುದಕ್ಕೆ ಅವ್ರಿಗೆ ತಗೊಂಡು ಹೋಗಿ ತೋರಿಸಲು, ಅವ್ರ ಅಪಾರ್ಟಮೆಂಟ್ ಗೆ ಸೈಕಲ್ ತುಳಿದುಕೊಂಡು ಹೋಗುತ್ತಿದ್ದೆ. ಮನೆಯಲ್ಲಿ ಅವ್ರು ಆರಾಮವಾಗಿ ಯಾರಜೊತೆಯಾದರೂ ಕ್ರಾಸ್ ವರ್ಡ್ ಆಡ್ತಾ, ಇನ್ಯಾರ ಜೊತೆಯಾದರೂ ಕತೆ ಡಿಸ್ಕಸ್ ಮಾಡ್ತಾ, ಬಂದಿರುವ ನನ್ನನ್ನು ಅಷ್ಟೇ ಪ್ರೀತಿಯಿಂದ ಮಾತನಾಡಿಸ್ತಾ ಇದ್ರು. ನಾನು ತಂದಿದ್ದಂತಹ ಕರಡು ಪ್ರತಿಯನ್ನು ನೋಡ್ತಾ ಇದ್ರು. ಅವಾಗ 1981-1982ರಲ್ಲಿ, ಅವ್ರಿಗೆ ಕನ್ನಡ ಅಷ್ಟು ಚೆನ್ನಾಗಿ ಬರ್ತಾ ಇರ್ಲಿಲ್ಲ. ಅವಾಗ ತಾನೆ ನಾನು ಕೆಲಸಕ್ಕೆ ಸೇರಿಕೊಂಡಿದ್ದೆ, ನನ್ನ ಇಂಜಿನಿಯರ್ ಓದು ಕೂಡ ಪ್ಯಾರ್ಲಲ್ ಆಗಿ ನಡಿತಾ ಇತ್ತು. ಬಿ.ಎಚ್.ಇ.ಎಲ್ ಅನ್ನುವ ಫ್ಯಾಕ್ಟರಿಯಲ್ಲಿ ಕೆಲ್ಸ ಮಾಡ್ತಿದ್ದೆ. ನನ್ನ ಸೈಕಲ್ ತುಳ್ಕೊಂಡು ಅವ್ರ ಮನೆಗೆ ಹೋಗ್ತಿದ್ದೆ. ಆ ಪೀರಿಯೆಡ್ ನಲ್ಲಿ ಅವ್ರು ‘ನೋಡಿ ಸ್ವಾಮಿ ನಾವಿರೋದೆ ಹೀಗೆ,’ಸಂಧ್ಯಾಚಾಯ, ಹೀಗೆ ಹಲವು ನಾಟಕಗಳನ್ನ ಮಾಡ್ತಾ ಇದ್ರು. ಹಾಗೆ ಅವ್ರ ಮತ್ತು ನನ್ನ ಮೊದಲ ಭೇಟಿಯಾಗಿದ್ದು.
ಮುಂದುವರೆಯುವುದು…

25 views