ಸಂಕೇತ ಸ್ಟುಡಿಯೋ ಗೋಡೆಯನ್ನ ರಾತ್ರೋ ರಾತ್ರಿ ತಯಾರು ಮಾಡಿದ್ವಿ

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 138

(ಶಂಕರ್ ನಾಗ್ ಅವರ‌ ಒಡನಾಡಿ‌ ಬಿ.ಸುರೇಶ ಅವರ ನೆನಪುಗಳು)ಇವತ್ತೇನು ನಾನೂ ಕೂಡ ರಂಗಭೂಮಿಯಲ್ಲಿದ್ದು ಇಷ್ಟೆಲ್ಲಾ ಮಾಡಿದ್ದೀನಿ ಅಂದ್ರೆ, ಇಂತಹ ಅನೇಕ ಗುರುಗಳು ಕಾರಣ ಅಂತ ನಾನು ಭಾವಿಸ್ತೀನಿ. ನನಿಗೆ ಸಿನಿಮಾದ ಬಗ್ಗೆ ಏನು ಗೊತ್ತಿದೆ ಅವಕ್ಕೂ ಕೂಡ ಶಂಕರ್ ತರಹದವರ ಕಾಂಟ್ರಿಬ್ಯೂಷನ್ ತುಂಬಾ ದೊಡ್ಡದು. ಅವ್ರು ತೋರ್ಸಿದ್ರಿಂದಲೇ ನಾನು ‘ಜೀ’ ತರಹದ ಸಿನಿಮಾನ ನೋಡಕ್ಕೆ ಸಾಧ್ಯ ಆಗಿದೆ. ಪೊಲ್ಯುಟಿಕಲ್ ಸಿನಿಮಾನ ಮಾಡ್ಬಹುದು ಸಿನಿಮಾದಲ್ಲಿ ಅಂತ ನನಿಗೆ ಮೊದಲ ಬಾರಿಗೆ ಗೊತ್ತಾಗಿದ್ದೇ ಆ ಸಿನಿಮಾ ನೋಡಿದ ನಂತರ. ಹಾಗಾಗಿ ನಾನು ಸದಾ ಕಾಲ ಶಂಕರ್ ಗೆ ಋಣಿಯಾಗಿ ಇರಬೇಕಾಗಿರೋದು ನನ್ನ ಜವಾಬ್ದಾರಿ ಅಂತ ನಾನು ಭಾವಿಸ್ತೀನಿ.


ಶಂಕರ್ ವಾಸ್ ಅ ಲೀಡರ್, ಶಂಕರ್ ವಾಸ್ ಅ ಗುಡ್ ಹ್ಯೂಮನ್ ಬೀಯಿಂಗ್, ಶಂಕರ್ ವಾಸ್ ಅ ಗ್ರೇಟ್ ಫ್ರೆಂಡ್.ಎಷ್ಟರ ಮಟ್ಟಿಗೆ ಅಂದ್ರೆ, ಕೆಲ್ಸ ಬಿಟ್ಬಿಟ್ಟಿದ್ದೆ, ಯಾರದೋ ಆರ್ಟ್ ಸಿನಿಮಾಗಳಲ್ಲಿ ಕೆಲ್ಸ ಮಾಡ್ತಿದ್ದೆ. ಆರ್ಟ್ ಸಿನಿಮಾದಲ್ಲಿ ಆಸ್ ಯೂಷ್ವಲ್ ಕಾಸು ಕೊಡಲ್ಲ ಸೋ ಮಧ್ಯಾನದ ಊಟಕ್ಕೇ ತೊಂದರೆ ಆಗ್ಬಿಡೋದು. ಸುಮ್ಮನೆ ಸಂಕೇತ್ ಸ್ಟುಡಿಯೊ ಹತ್ರ ಹೋದ್ರೆ ಸಾಕು ಜಗದೀಶ್ ಮಲ್ನಾಡ್ ಗೆ ಹೇಳ್ತಿದ್ರು, “ಸುರೇಶ ಬಂದಿದ್ದಾನೆ ಕಣೊ, ಖಂಡಿತ ಊಟ ಮಾಡಿರಲ್ಲ, ಮೊದ್ಲು ಹೋಗಿ ಊಟ ಹಾಕ್ಸು” ಅಂತ. ಆ ತರಹದ ನಮ್ಮನ್ನ ನೋಡಿದ ಕೋಡಲೇ ನಮ್ಮ ಕಷ್ಟಗಳನ್ನ ಅರ್ಥ ಮಾಡುವಂತಹವ್ರು ಎಷ್ಟು ಜನ ಇರ್ತಾರೆ? ತುಂಬಾ ಅಪರೂಪದ ವ್ಯಕ್ತಿ.


ಆ ಮೇಲೆ ಮಜ ಅಂದ್ರೆ, ಸಂಕೇತ್ ಸ್ಟುಡಿಯೋ ನಾಳೆ ಇನಾಗ್ರೇಶನ್ ಇತ್ತು, ನಾವೆಲ್ಲಾ ಸಂಕೇತಲ್ಲಿ ಕೆಲ್ಸ ಮಾಡುವವ್ರು, ನಾಳೆ ಮಂತ್ರಿಗಳೆಲ್ಲಾ ಬರ್ತಾರೆ, ಇನಾಗ್ರೇಟ್ ಮಾಡ್ತಾರೆ, ರೆಡಿನೇ ಆಗಿರ್ಲಿಲ್ಲ, ಗೋಡೆಗಳೇ ಆಗಿರ್ಲಿಲ್ಲ. “ಏನ್ಮಾಡೊದೋ?” ರಾತ್ರಿ ಹತ್ತು ಗಂಟೆಗೆ ನಾವೆಲ್ಲಾ ನಾಟಕ ಮುಗಿಸಿಕೊಂಡು ಹೋದ್ರೆ ಏನೂ ರೆಡಿನೇ ಆಗ್ಲಿಲ್ಲ ಅಂತ ಗಾಬರಿ. “ ಶಂಕರ ಮನೆಯಲ್ಲಿ ಇರುವ ಸೀರೆಗಳನ್ನೆಲ್ಲಾ ತರ್ಸಿ ಬಿಡಿ ಅಂತ ನನ್ನದೊಂದು ಐಡಿಯಾ, ಜೊತೆಯಲ್ಲಿದ್ದವ್ರದ್ದೂ ಒಂದೊಂದು ಐಡಿಯಾ. ಒಂದು ಐವತ್ತು ಸೀರೆ ರೆಡಿಯಾಯ್ತು. ಯಾವದೂ ಕೊಂಡ್ಕೊಂಡಿದ್ದಲ್ಲ, ಎಲ್ಲರ ಮನೆಗಳಿಂದ ಕಾಟನ್ ಸೀರೆಗಳು, ಸುರುಪುರದ ಸೀರೆ, ಉತ್ತರಕರ್ನಾಟಕದ ಚೌಕ್ಳಿಚೌಕ್ಳಿ ಸೀರೆ ಅಂತದ್ದು. ಮೇಲಿಂದ ಕೆಳಗೆ ನೀಟಾಗಿ ಇಳಿಬಿಟ್ಟು, ಗೋಡೆ ರೆಡಿಯಾಗ್ಬಿಟ್ಟಿದ್ಯೇನೋ ಅನ್ನುವಹಾಗೆ ಮಾಡಿದ್ವಿ. ರಾತ್ರೋರಾತ್ರಿ ಒಂದು ರೆಕಾರ್ಡಿಂಗ್ ಸ್ಟುಡಿಯೋನ ಸೀರೆಗಳ ಮೂಲಕ ರೆಡಿ ಮಾಡಿದ್ವಿ. ಆಮೇಲೆ ಅದನ್ನೆಲ್ಲಾ ರೆಡಿ ಮಾಡಿದ್ರು, ಆದ್ರೆ ಅವತ್ತು ಇನಾಗ್ರೇಶನ್ ಗೆ ವ್ಯವಸ್ಥೆ ಮಾಡಿದ್ದು. ಸಂಕೇತ್ ಕಿಟ್ಟಿ ಅಂತ ಸೌಂಡ್ ಇಂಜಿನಿಯರ್ ಇದ್ರು ಫೆಂಟಾಸ್ಟಿಕ್ ಮ್ಯಾನ್. ಅಂತಹವರ ಜೊತೆ ಸ್ವಲ್ಪ ಕಾಲ ಕಳೆದಿದ್ದೇ ನನಿಗೆ ಬಹಳ ದೊಡ್ಡ ಅನುಭವ ಅಂತ ನಾನು ಭಾವಿಸ್ತೀನಿ.( ಬ.ಸುರೇಶ ಅವರ ಸಂದರ್ಶನ ಇಲ್ಲಿಗೆ ಮಗಿಯಿತು)

121 views