ಸ್ಟುಡಿಯೋ ಒಳಗೆ ಹೋಗಲು ದಯಾನಂದ ಹಾಕಿದ ವೇಷ

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 10ಸಮಯದ ಗೊಂಬೆ, ಪ್ರೀತಿ ವಾತ್ಸಲ್ಯ, ವಜ್ರಮುಷ್ಠಿ, ಆ್ಯಕ್ಸಿಡೆಂಟ್‌, ಕೃಷ್ಣ ನೀ ಬೇಗನೇ ಬಾರೋ, ಮನೆಯೇ ಮಂತ್ರಾಲಯ... ಹೀಗೆ ಆ ಸಮಯದಲ್ಲಿ ಬಹಳಷ್ಟು ಸಿನಿಮಾಗಳನ್ನು ಮಾಡಿದೆ. ನಾನು ಮಾಡಿದ ಮೊದಲ ಸಿನಿಮಾ ಇಬ್ಬನಿ ಕರಗಿತು.


ಕಂಠೀರವ ಸ್ಟುಡಿಯೊಗೆ ಹೋಗಿ ಮೈಸೂರು ಲೋಕೇಶ್‌ ಅವರಿಗೆ ಪತ್ರವೊಂದನ್ನು ಕೊಡಬೇಕಿತ್ತು. ಆದರೆ, ನನಗೆ ಒಳಗೆ ಬಿಡಲಿಲ್ಲ. ನಂತರ ಮಹಾಲಕ್ಷ್ಮೀ ಲೇಔಟ್‌ಗೆ ಸೈಕಲ್‌ನಲ್ಲಿ ಬಂದು ಕಾಯಿನ್‌ಬೂತ್‌ ನಿಂದ ಸುಂದರ್‌ ಕೃಷ್ಣ ಅರಸು ಅವರ ಧ್ವನಿಯಲ್ಲಿ ಕಂಠೀರವ ಸ್ಟುಡಿಯೊಗೆ ಫೋನ್‌ ಮಾಡಿದೆ. ‘ನನ್ನ ಪರಿಚಯದ ಹುಡುಗನೊಬ್ಬ ಬರುತ್ತಿದ್ದಾನೆ. ಅವನನ್ನು ಗೇಟಿನ ಒಳಗೆ ಬಿಡಮ್ಮ’ ಎಂದು ಸುಂದರ್ ಕೃಷ್ಣ ಅವರ ಧ್ವನಿಯಲ್ಲಿ ಹೇಳಿದೆ. ಆಕೆ ಆಯ್ತು, ಆಯ್ತು ಎಂದಳು. ನಾನು ಅಲ್ಲಿಗೆ ಹೋದ ತಕ್ಷಣ ನೀವಾ ದಯಾನಂದ್‌, ಬನ್ನಿ ಒಳಗೆ ಅಂದ್ರು. ಹೀಗೆ ನನ್ನ ಮಿಮಿಕ್ರಿಯೇ ನನಗೆ ಅಸ್ತ್ರವಾಯಿತು. ಒಳಗಡೆ ಹೋಗಿ ಮೈಸೂರು ಲೋಕೇಶ್‌ ಅವರಿಗೆ ಲೆಟರ್‌ ಕೊಟ್ಟೆ. ಅವತ್ತು ದೊರೆ ಭಗವಾನ್‌ ಅವರ ಸಮಯದ ಗೊಂಬೆ ಶೂಟಿಂಗ್‌ ನಡೆಯುತ್ತಿತ್ತು. ಅಣ್ಣವ್ರು ಒಳಗೆ ಇದ್ರು.ಮುಂದುವರೆಯುವುದು...

13 views