ಸುದೀಪ್‌ ಆಂಕ್ಟಿಂಗ್‌ ಕಲ್ತಿದ್ದು ಎಲ್ಲಿ ಗೊತ್ತಾ?

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 51


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)




25 ಸಾವಿರ ಕೊಡುವವರಿಗೆ ಆದರ್ಶ ಫಿಲ್ಮ್‌ ಇನ್‌ಸ್ಟಿಟ್ಯೂಟ್‌, 2,50 ಲಕ್ಷ ಕೊಡುವವವರಿಗೆ ಬಾಂಬೆಯಲ್ಲಿ ತರಬೇತಿ ಕೊಡಿಸುತ್ತಿದ್ದೆ. ಹಾಗೆ ತರಬೇತಿ ಕೊಡಿಸಿದವರಲ್ಲಿ ಇವತ್ತು ಪ್ರಮುಖರಾಗಿ ಇರುವವರು ಸುದೀಪ್‌. ಪುಣೆ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ಪ್ರಿನ್ಸಿಪಾಲ್‌ ರೋಹನ್‌ ತನೇಜಾ ನನಗೆ ಸ್ನೇಹಿತರು. ಆಗ ಬಾಂಬೆಯಲ್ಲಿ ಇದಿದ್ದು ಇದೊಂದೇ ಸಂಸ್ಥೆ. ಸುದೀಪ್‌ ತಂದೆ ಹೇಳಿದ್ರು, ನನ್ನ ಮಗ ಆ್ಯಕ್ಟ್‌ ಮಾಡಬೇಕು ಅಂತಿದ್ದಾನೆ. ಅವನಿಗೆ ಏನು ಮಾರ್ಗದರ್ಶನ ಕೊಡುತ್ತೀರಾ ಎಂದು. ನಾನು ಹೇಳಿದೆ, ಹೋಟೆಲ್‌ ಸರೋವರಾ ನಿಮ್ಮದೇ ಅಲ್ವಾ, ಎರಡು ಲಕ್ಷ ಖರ್ಚು ಮಾಡುವ ತಾಕತ್ತಿದೆ ನಿಮಗೆ. ನಮ್ಮ ಇನ್‌ಸ್ಟಿಟ್ಯೂಟ್‌ನಲ್ಲಿ ಒಂದು ವರ್ಷ ಕಲಿಯಬೇಕು ನೀವು. ಅಲ್ಲಾದರೆ 3 ಅಥವಾ 6 ತಿಂಗಳೊಳಗೆ ಕಲಿಸಿಕೊಟ್ಟು ಬಿಡ್ತಾರೆ. ಆದರೆ, ಫೀಸ್‌ ಜಾಸ್ತಿ ಇದೆ ಎಂದೆ. ಫೀಸ್‌ ಬಗ್ಗೆ ಯಾಕೆ ತಲೆಕೆಡಿಸಿಕೊಳ್ತೀರಾ ನನ್ನ ಮಗ ಸಿನಿಮಾದಲ್ಲಿ ನಟಿಸಬೇಕು ಅಷ್ಟೇ ಎಂದು ಅವರ ತಂದೆ ಹೇಳಿದ್ರು. ಸರಿ ಎಂದು ಬಾಂಬೆಗೆ ಸುದೀಪ್‌ ಅವರನ್ನು ಕರೆದುಕೊಂಡು ಹೋದೆ. ಒಂದೂವರೆ ಲಕ್ಷ ಫೀಸ್‌ ಹೇಳಿದ್ರು. ನಂತರ ನನ್ನ ಹೆಸರು ಹೇಳಿದ್ದಕ್ಕೆ 25 ಸಾವಿರ ಕಡಿಮೆ ಮಾಡಿದ್ರು.


ಇರಲು ಒಂದು ಪಿ.ಜಿ ಹುಡುಕಿಕೊಟ್ಟೆ. ಅಲ್ಲಿ ಶೇರಿಂಗ್‌ ವ್ಯವಸ್ಥೆ ಇತ್ತು. ತಿಂಗಳಿಗೆ 3 ಸಾವಿರ. ಹೊರಗೆ ಬಂದಾಗ ಸುದೀಪ್‌, ‘ಮಾಮ ನನಗೆ ಶೇರಿಂಗ್‌ ಇಷ್ಟವಿಲ್ಲ. ಒಬ್ಬನೇ ಇರುವ ವ್ಯವಸ್ಥೆ ಮಾಡಿಕೊಡಿ’ ಎಂದ. ಹತ್ತಿರದಲ್ಲಿ ಯಾವುದು ಇರಲಿಲ್ಲ. ಆಮೇಲೆ ಹುಡುಕಿ, ಹುಡುಕಿ ಕ್ರಿಶ್ಚಿಯನ್‌ ಒಬ್ಬರ ಮನೆಯಲ್ಲಿ ರೂಮ್‌ ಖಾಲಿಯಿದೆ ಕೊಡ್ತಾರೆ ಎಂಬುದು ಗೊತ್ತಾಯ್ತು. ತಿಂಗಳಿಗೆ 5 ಸಾವಿರ ಬಾಡಿಗೆ. ಊಟ, ತಿಂಡಿ ಕೊಡಲ್ಲ ಎಂದು ಹೇಳಿದ್ರು. ಅಲ್ಲಿಯೇ ಮಂಗಳೂರಿನವರ ಹೋಟೆಲ್‌ ಇತ್ತು. ಅವರ ಬಳಿ ಈ ಹುಡುಗ ಯಾವಾಗ ಬಂದು, ಏನು ಕೇಳಿದ್ರು ಕೊಡಿ ಎಂದು ಹೇಳಿದೆ. ಅವನಿಗೂ ಆ ರೂಮ್‌ ಇಷ್ಟವಾಯ್ತು. ಥ್ಯಾಂಕ್ಯೂ ಮಾಮ ಎಂದು ಹೇಳಿದ. ತರಬೇತಿ ಎಲ್ಲ ಮುಗಿಸಿಕೊಂಡು ಬಂದ. ಅವನದು ಒಳ್ಳೆಯ ಧ್ವನಿ. ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದ. ನಿಮ್ಮ ಮಗನಿಗೆ ಒಳ್ಳೆಯ ಮೈಕಟ್ಟು, ವಾಯ್ಸ್ ಇದೆ ಅವನು ಒಳ್ಳೆಯ ನಟನಾಗುತ್ತಾನೆ ಎಂದು ಹೇಳಿಯೇ ಬಾಂಬೆಗೆ ಕರೆದುಕೊಂಡು ಹೋಗಿದ್ದೆ. ಜಯಮಾಲಾ ಮಗಳು ಐಶ್ವರ್ಯಾ, ಶ್ರೀಮುರಳಿ.. ಇವರೆಲ್ಲ ಬಾಂಬೆಯಲ್ಲಿಯೇ ತರಬೇತಿ ಪಡೆದವರು. ನಟನೆಯ ಅರ್ಹತೆ ಇರುವವರನ್ನು ಮಾತ್ರವೇ ಕರೆದುಕೊಂಡು ಹೋಗುತ್ತಿದ್ದೆ.




ಮುಂದುವರಿಯುವುದು...

25 views