ಸುಧೀರ್‌ ಅವರ ಫೇವರೀಟ್‌ ಊಟ…

ಖ್ಯಾತ ಕಳನಟ ಸುಧೀರ್ ಲೈಫ್ ಸ್ಟೋರಿ ಭಾಗ 20

( ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)ಪರಮ್: ಆ ವ್ಯಕ್ತಿ ವೈಶಿಷ್ಟತೆ ಏನು? ಒಳ್ಳೆ ನಟ, ಕಲಾವಿದ ಎಲ್ಲಾ ಓಕೆ. ವಾಟ್ ಈಸ್ ಹಿಸ್ ಸ್ಪೆಷಾಲಿಟಿ?

ಮಾಲತಿ ಸುಧೀರ್: ಅವರ ಸ್ಪೆಷಾಲಿಟಿ ಅಂದ್ರೆ ಅವರ ಜೀವನದಲ್ಲಿ ಬಹಳ ಇಷ್ಟ ಪಡ್ತಾ ಇದ್ದದ್ದು ಅಂದ್ರೆ ಜೋಳದ ರೊಟ್ಟಿ ತಿನ್ನೊದು.


ಪರಮ್: ಮಲ್ನಾಡವರಾಗಿ?


ಮಾಲತಿ ಸುಧೀರ್: ಜೋಳದ ರೊಟ್ಟಿ ಜೊತೆ ಕಡಕ್ ರೊಟ್ಟಿ ಇರ್ಬೇಕು. ಅದು ಎಂಟು ದಿನದ ಹಿಂದೆ ಮಾಡಿಟ್ಟಿದ್ದಾಗಿದ್ರೂ ಪರವಾಗಿಲ್ಲ. ಆರೊಟ್ಟಿಗೆ ಕಾರದ ಪುಡಿ ಹಾಗೂ ಕೊಬ್ಬರಿ ಎಣ್ಣೆ ಹಾಕೊಂಡು ತಿನ್ತಿದ್ರು. ಅದೇ ಅವರ ಸ್ಪೆಷಾಲಿಟಿ.


ಕೆಲವೊಮ್ಮೆ ನಾವು ಹೆಣ್ಣು ಮಕ್ಕಳು ಸಣ್ಣ ಬುದ್ದಿ ತೋರಿಸ್ತೀವಿ, “ಅವರಿಗ್ಯಾಕೆ ಅಷ್ಟು ದುಡ್ಡು ಕೊಡ್ತೀರಿ?” ಅಂತ. ಆದರೆ ಅವರು ಯಾರೇ ನೊಂದು ಬಂದ್ರೂ, ಅವರು ನಂಗೆ “ಟೀ ಮಾಡ್ಕೊಂಡು ಬಾ” ಅಂತ ಒಳಗೆ ಕಳ್ಸಿ ನಂಗೆ ಗೊತ್ತಿಲ್ಲದ ಹಾಗೆ ಅವರಿಗೆ ದುಡ್ಡು ಕೊಡ್ತಿದ್ರು. ಎಷ್ಟೋ ಜನ ಬಸ್ ಚಾರ್ಜ್ ಇಲ್ಲದೇ ಬಂದವರಿಗೆ, ಅಥವಾ ಇನ್ನೇನೋ ತೊಂದರೆಯಲ್ಲಿದ್ದವರಿಗೆ ಎಲ್ಲರಿಗೂ ತುಂಬಾ ಸಹಾಯ ಮಾಡ್ತಿದ್ರು. ಅದು ಅಂಬರೀಶ್ ಅಣ್ಣನಿಂದ ಬಂದಿರುವ ಗುಣಗಳು ಅವು.ಮುಂದುವರೆಯುವುದು…

38 views