ಸುಧೀರ್‌ ಅವರ ಬ್ರ್ಯಾಂಡ್‌ಯಾವ್ದುಗೊತ್ತಾ!!!

ಖ್ಯಾತ ಕಳನಟ ಸುಧೀರ್ ಲೈಫ್ ಸ್ಟೋರಿ ಭಾಗ 21

( ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)ಗೌಡರ ಗದ್ದಲ ಅಂತ ಒಂದು ನಾಟಕದಲ್ಲಿ ಸುಧೀರ್ ಅವರದ್ದು ಕುಡುಕನ ಪಾತ್ರ. ಊರಿಗೆ ದೊಡ್ಡ ಗೌಡ ಕುಡ್ಕೊಂಡಿದ್ರೆನೇ ಪ್ರಪಂಚ. ಅವರು ನಾಟಕದಲ್ಲಿ ಹೇಳೋರು “ನಾನು ಈ ಊರ ಮಾಲೀ ಗೌಡ, ಇಲ್ಲಿ ನನ್ನದೇ ಅಧಿಕಾರ, ಆದರೂ ಆಪೋಲೀಸ್ ಗೌಡ ನನ್ನ ವೈರಿ, ನಮ್ಮ ಮನೆತನಗಳ ನಡುವೆ ಹೊತ್ತಿಕೊಂಡ ಬೆಂಕಿ ನಂದಬೇಕಾದರೆ ಇಬ್ಬರಲ್ಲಿ ಒಬ್ಬರು ಆಹುತಿಯಾಗಲೇ ಬೇಕು. ನನ್ನ ಆಸೆ ಹೆಣ್ಣು-ಹೆಂಡ” ಅನ್ನೋರು.


ಪರಮ್: ಡೈಲಾಗ್?


ಮಾಲತಿ ಸುಧೀರ್: ಹೌದು ಡೈಲಾಗ್ ಇದು. ಅವರಿಗೆ ಹೆಂಡ-ಹೆಣ್ಣು ಇದಿಷ್ಟೇ ಪ್ರಪಂಚ ಅಂತ. ಫುಲ್ ಕುಡುಕ ಅದರಲ್ಲಿ. ಎಲ್ಲರಿಗೂ ಹೇಳೋದು “ಏಯ್ ನಿಮ್ಮ ಮನೆಯಲ್ಲಿ ಯಾರೂ ನೀರು ಕುಡಿಬ್ಯಾಡ್ರಿ, ನಿಮ್ಮ ಮನೆಯಲ್ಲಿ ನಲ್ಲಿ ಓಪನ್ ಮಾಡಿದ್ರೆ ಬರೀ ಶರಾಯಿ ಬರ್ಬೇಕು, ನೀವೆಲ್ಲಾ ಬರೀ ಶರಾಯಿ ಕುಡ್ಕೊಂಡಿರ್ಬೇಕು. ನೀರು ಕುಡಿಬಾರ್ದು. ಯಾಕಂದ್ರೆ ಇದು ಗೌಡರ ಗತ್ತು.” ಅಂತ ನಾಟಕದಲ್ಲಿ ಹೇಳೋರು. ಎಷ್ಟೋ ಜನ ಬಂದು “ಅಣ್ಣಾ ನಿಮ್ದು ಯಾವ ಬ್ರಾಂಡ್? ಏನು ಕುಡಿತೀರ ನೀವು?” ಅಂತ ಕೇಳ್ತಿದ್ರು. “ನಂಗೆ ಒಂದು ಲೋಟ ನೀರು ಕೊಡಪ್ಪಾ ಸಾಕು, ನಿಂಗೆ ಇನ್ನೂ ಪ್ರೀತಿ ಇದ್ರೆ ನಿಮ್ಮ ಮನೆ ಕಡಕ್ ರೊಟ್ಟಿ, ಕಾರದ ಪುಡಿ ಇದ್ರೆ ತಂದ್ಕೊಡು. ಇನ್ನೂ ಏನಾದ್ರೂ ಕೊಡ್ಬೇಕು ಅಂದ್ರೆ ಚಿಕನ್ ಮಾಡಿ ತಂದ್ಕೊಟ್ರೆ ತಿನ್ತೀನಿ ಹೊಟ್ಟೆ ತುಂಬಾ”ನಾಟಕ ಬಿಟ್ಮೇಲೆ ಯಾರೇ ಏನೇ ತಿನ್ನೊದಕ್ಕೆ ಅವರಿಗೆ ಕೊಟ್ರೂ ಎಲ್ಲಾ ಕಲಾವಿದರನ್ನ, ಟೆಕ್ನಿಷಿಯನ್ಸ್ ಹಾಗೂ ಗೇಟ್ ಕೀಪರ್‍ನಎಲ್ಲರನ್ನೂ ಕುಂಡ್ರಿಸ್ಕೊಂಡು ಮಧ್ಯ ಅವರು ಕೂತ್ಕೊಂಡು ಊಟ ಮಾಡ್ತಿದ್ರು. ನಾಟಕಕ್ಕೆ ಹೋದಾಗ ಹಾಗೆ ಅವರು ಕಲಾವಿದರನ್ನ ಪ್ರೀತಿಸ್ತಾ ಇದ್ದದ್ದು. ನಂಗೊಂದು ಊಟ ಅವರಿಗೊಂದು ಯಾವಾಗ್ಲೂ ಮಾಡ್ಲಿಲ್ಲ ಅವರು. ‌ಮುಂದುವರೆಯುವುದು…

34 views