ಸುಧೀರ್‌ ಅವರ ಸಾವಿಗೆ ಕಾರಣ ಆ ಫೈಟ್

ಖ್ಯಾತ ಕಳನಟ ಸುಧೀರ್ ಲೈಫ್ ಸ್ಟೋರಿ ಭಾಗ 14

( ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)ಸುಧೀರ್ ಅವರಿಗೆ ಏನೂ ಚಟ ಇಲ್ದೇ ಇದ್ರುನೂ ಅವರು ಒಂದು ಶೂಟಿಂಗ್‍ಗೆ ಹೋಗಿದ್ರು. ಆ ಶೂಟಿಂಗಲ್ಲಿ ಒಬ್ಬ ಫೈಟರ್ ಬರ್ಬೇಕಾಗಿತ್ತು ಮೇಲಿಂದ ಬೀಳೋದಕ್ಕೆ, ಅವತ್ತು ಆಫೈಟರ್ ಬರ್ಲಿಲ್ವಂತೆ. ಲೊಕೇಶನಲ್ಲಿ ಎಲ್ಲರೂ ಇರ್ತಾರೆ, ಎಷ್ಟೊಂದು ದುಡ್ಡು ಖರ್ಚಾಗಿರುತ್ತೆ? ಆ ಫೈಟರಿಂದ ಒಂದು ದಿನ ವೇಸ್ಟ್ ಆಗುತ್ತೆ. ಯೂನಿಯನಿಗೆಲ್ಲಾ ದುಡ್ಡು ಕೊಡ್ಬೇಕು ಅಂತ ಹೇಳಿ “ಸಾರ್ ಒಂದು ಜಂಪ್ ತಾನೇ ನಾನೇ ಮಾಡ್ತೀನಿ”ಅಂತ ಹೇಳಿದ್ರು. ದಂಡನಾಯಕ ಪಿಚ್ಚರ್ ಅದು. ಕೆಳಗೆಲ್ಲಾ ಹಾಸಿಗೆ ಹಾಕಿ ಎರಡು ಮೂರು ಜಂಪ್ ಮಾಡಿದ್ರು. ಆ ಹಾಸಿಗೆ ಒಳಗೆ ತುಂಬಾ ಧೂಳು ಇತ್ತು. ಆ ಧೂಳೆಲ್ಲಾ ಮೂರು ದಿವ್ಸ ಅವರ ಹೊಟ್ಟೆಯೊಳಗೆ ಹೋಗ್ಬಿಡ್ತು. ಅದು ಇನ್ಫೆಕ್ಷನ್ ಆಯ್ತು ಅವರಿಗೆ. ಆ ಇನ್ಫೆಕ್ಷನಿಂದ ಉಸಿರಾಟಕ್ಕೆ ತೊಂದರೆ ಬಂತು ಅವರಿಗೆ. ಅವಾಗ ಹಾಸ್ಪೆಟಲಲ್ಲೆಲ್ಲಾ ತೋರ್ಸಿದ್ವಿ. ಅವಾಗ ಲಂಗ್ಸ್‍ಗೆ ಏನಾದ್ರೂ ಅಫೆಕ್ಟ್ ಆದ್ರೆ ಏನೂ ಅಂಥಾ ದೊಡ್ಡ ಟ್ರೀಟ್ಮೆಂಟ್ ಇರ್ಲಿಲ್ಲ. ಇವಾಗ ಬೇಕಾದಷ್ಟು ಟ್ರೀಟ್ಮೆಂಟ್ ಬಂದಿದೆ. ಇಲ್ಲೇ ಒಂದು ಪ್ರವೀಣ್ ಹಾಸ್ಪೆಟಲಲ್ಲಿ ತೋರ್ಸಿದ್ವಿ ಅದೇನೂ ಸರಿ ಹೋಗ್ಲಿಲ್ಲ. ಆಮೇಲೆ ಮಲ್ಯ ಹಾಸ್ಪೆಟಲಿಗೆ ತಗೊಂಡೋದ್ವಿ. ಮತ್ತೆ ಮನೆಗೆ ವಾಪಸ್ ಕರ್ಕೊಂಡು ಬರ್ಲೇ ಇಲ್ಲ. ಅವಾಗ ಯಡಿಯೂರಪ್ಪ ಹಾಗೂ ಅನಂತ್‍ಕುಮಾರ್ ಅವರು ಡೆಲ್ಲಿ ಯಿಂದ “ಸುಧೀರ್‍ಗೆ ಏನಾಗಿದೆ? ಏಕೆ ಅವನು ಎಂಟು ದಿವ್ಸದಿಂದ ಹಾಸ್ಪೆಟಲಲ್ಲಿ ಇದ್ದಾನೆ?” ಅಂತ ಅಲ್ಲಿಂದ ಫೋನ್ ಮಾಡಿದ್ರು.


ಅವರು ಬರೋ ಹೊತ್ತಿಗೆ ಇವರ ಜೀವ ಹೋಗ್ಬಿಟ್ಟಿತ್ತು. ಮಂಗಳವಾರ ಮಧ್ಯಾಹ್ನ ರಾಹುಕಾಲದಲ್ಲಿ ಅವರು ಹೋಗ್ಬಿಟ್ರು.ಮುಂದುವರೆಯುವುದು…

49 views