ಸುಧೀರ್‌ ಗೂ ಎಣ್ಣೆಗೂ ಇದ್ದ ನಂಟು

ಖ್ಯಾತ ಕಳನಟ ಸುಧೀರ್ ಲೈಫ್ ಸ್ಟೋರಿ ಭಾಗ 12

( ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)ನಂತರ ಕಂಟಿನ್ಯೂ ಆಗಿ ಪಿಚ್ಚರಲ್ಲಿ ಪಾರ್ಟ್ ಮಾಡ್ತಾ ಹೋದ್ರು. ಅಣ್ಣಾವ್ರ ಕಂಪೆನಿಯಲ್ಲಿ ಎರಡು ಪಿಚ್ಚರ್ ಮಾಡಿದ್ರು ಅಷ್ಟೆ, ನಂತರ ಅಂಬರೀಷ್ ಹಾಗೂ ವಿಷ್ಣುವರ್ಧನ್ ಅವರ ಪಿಚ್ಚರ್ ಬುಕ್ ಆಯ್ತು. ಮೊದಲು ಅಂಬರೀಶ್ ಅಣ್ಣಾವ್ರ ಪಿಚ್ಚರ್ ಬುಕ್ ಆಯ್ತು. ಸುಧೀರ್ ಅವರ ಜೀವನದಲ್ಲಿ ಒಂದು ದಿವ್ಸನೂ ಕುಡ್ದವರಲ್ಲಾ, ಸ್ಮೋಕ್ ಮಾಡ್ತಿರ್ಲಿಲ್ಲ, ಎಲೆ ಅಡಿಕೆ ಹಾಕ್ತಿರ್ಲಿಲ್ಲ. ಕಾಫಿ ಕುಡಿತಿದ್ರು, ನಾನ್ ವೆಜ್ ಪ್ರಿಯರು. ಇದೆಲ್ಲಾ ಅಂಬರೀಶ್ ಅಣ್ಣನಿಗೆ ತುಂಬಾ ಇಷ್ಟ ಆಯ್ತು. ಅವರು ಯಾವಾಗ್ಲೂ ಹೇಳೋರು “ನಿಜ ಜೀವನದಲ್ಲಿ ನಾವು ಖಳನಾಯಕರು, ಸಿನಿಮಾ ರಂಗದಲ್ಲಿ ನಾವು ಹೀರೋಗಳು. ನೀನು ನಿಜವಾದ ಜೀವನದಲ್ಲಿ ಹೀರೋ ಸುಧೀರ್, ಖಳನಾಯಕ ಸಿನಿಮಾದಲ್ಲಿ ಮಾತ್ರ”ಅಂತ ಅಂಬರೀಶಣ್ಣ ಯಾವಾಗ್ಲೂ ಹೇಳ್ತಿದ್ರು. ಅಷ್ಟು ಹೆಮ್ಮೆ ಪಡೋರು.


ಪರಮ್: ಯಾವಾಗ್ಲೂ ಕುಡಿತನೇ ಇರ್ಲಿಲ್ವಾ ಅವರು?


ಮಾಲತಿ ಸುಧೀರ್: ಅವರ ಜೀವನದಲ್ಲೇ ಕುಡಿಲಿಲ್ಲ. ನಮ್ಮ ಮಕ್ಕಳೂ ಕುಡಿಯೋದಿಲ್ಲ ಇವಾಗ. ನಮ್ಮ ಮಕ್ಕಳು ಒಂದು ಸಿಗರೇಟ್ ಕೂಡ ಕೈಯಲ್ಲಿ ಹಿಡ್ದಿಲ್ಲ. ಒಂದು ಚಮಚದಲ್ಲಿ ಕೂಡ ಬಿಯರ್ ಕುಡ್ದಿಲ್ಲ. ಇವತ್ತಿನ ವರೆಗೂ ಅದೇ ನಮ್ಮನ್ನ ಕಾಪಾಡ್ಕೊಂಡು ಬಂದಿರೋದು. ತರುಣ್ ಹಾಗೂ ನಮ್ಮ ನಂದನ ಬಗ್ಗೆ ಇಂಡಸ್ಟ್ರೀಯಲ್ಲಿ ಯಾರನ್ನ ಬೇಕಾದ್ರೂ ಕೇಳಿ. ನಂತರದಲ್ಲಿ ಸುಧೀರ್‍ಗೆ ಒಳ್ಳೆ ಹೆಸರು ಬಂತು.ಮುಂದುವರೆಯುವುದು…

41 views