ಸುಧೀರ್‌ ಮತ್ತು ಕಲ್ಪನಾ ಆ ನಾಟಕದಲ್ಲಿ ಫೇಮಸ್

ಖ್ಯಾತ ಕಳನಟ ಸುಧೀರ್ ಲೈಫ್ ಸ್ಟೋರಿ ಭಾಗ 4

( ಅವರ ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)ಅವಾಗ ನನ್ನ ಸಂಭಾವನೆ ದಿವ್ಸಕ್ಕೆ ಐವತ್ತು ರೂಪಾಯಿ.


ಪರಮ್: ದಿನಕ್ಕೆ ಐವತ್ತು ರೂಪಾಯಿ? ಯಾವ ಇಸವಿಯಲ್ಲಿ?


ಮಾಲತಿ ಸುಧೀರ್: 1977 ರಲ್ಲಿ ದಿನಕ್ಕೆ ಐವತ್ತು ರೂಪಾಯಿಯ ಹಾಗೆ ನನ್ನ ಹಾಕೊಂಡ್ರು.

ಪರಮ್: ಐವತ್ತು ವರ್ಷದ ಹಿಂದೆ?


ಮಾಲತಿ ಸುಧೀರ್: ನನ್ನ ಹಾಕೊಂಡ ತಕ್ಷಣನೇ ಕ್ಲಿಕ್ ಆಗ್ಬಿಡ್ತು. ಅದು ಏನು ಸೀನ್ ಅಂದ್ರೆ ಕಲ್ಪನಾಜೀ ಹಾಗೂ ಅವರ ಯಜಮಾನ್ರು ಮನೆಯಲ್ಲಿ ಎಲ್ಲರನ್ನೂ ಕೂರಿಸ್ಕೊಂಡು ಡ್ರಿಂಕ್ಸ್ ಮಾಡ್ತಾ ಇರ್ತಾರೆ. ಅವಾಗ “ನೋಡು ನಮ್ಮ ನರ್ತಕಿ ಒಬ್ಳು ಬರ್ತಾಳೆ. ಮನೆಯಲ್ಲೇ ಗೆಟ್ ಟು ಗೆದರ್” ಅಂತ ಹೇಳ್ತಾರೆ. ಆಗ ನನ್ನ ಡ್ಯಾನ್ಸ್ ಎಂಟ್ರಿ. ಆ ಡ್ಯಾನ್ಸ್ ಬಹಳ ಫೇಮಸ್ ಆಯ್ತು. ನಮ್ಮ ಹಂಸಲೇಖ ಅವರು ಇವಾಗ್ಲೂ ನಂಗೆ ಸಿಕ್ಕಿದ್ರೆ “ಏನ್ರೀ ಏರಿಮೇಲೆ ಏರಿ ಮೇಲೆ ಕೆಳಗೆ ಹಾರಿ” ಅಂತಾರೆ. ಅವರೂ ಆಟ್ರೂಪಲ್ಲಿದ್ರು. ಕಲ್ಪನಾ ಅವರ ಟ್ರೂಪಲ್ಲಿ ಹಂಸಲೇಖ ಅವರು ಮ್ಯೂಸಿಕ್ ಬಾರಿಸ್ತಾ ಇದ್ರು. ಸೋ ಅಲ್ಲಿ ಸುಧೀರ್ ಅವರು ಖಳನಾಯಕನ ಪಾರ್ಟ್ ಮಾಡ್ತಾ ಇದ್ರು. ಶ್ರೀಪತಿ ಅಂತ ಕ್ಯಾರೆಕ್ಟರ್. ಆ ನಾಟಕದಲ್ಲಿ ಕಲ್ಪನಾಜೀ ಹಗೂ ಶ್ರೀಪತಿ ಇವರಿಬ್ಬರನ್ನ ನೋಡಕ್ಕೇ ಜನ ಬರ್ತಾ ಇದ್ದದ್ದು. ಅಷ್ಟೊಂದು ಕ್ರೇಜ್ ಬಂದ್ಬಿಡ್ತು. ಎಲ್ಲಾ ಜಾತ್ರೆಗಳಲ್ಲೆಲ್ಲಾ ಕಾಂಟ್ರಾಕ್ಟ್ ಶುರುವಾಯ್ತು. ನಾನು ಪರ್ಮನೆಂಟಾಗಿ ಅ ಟ್ರೂಪಲ್ಲಿದ್ದೆ.ಮುಂದುವರೆಯುವುದು…


22 views