ಸುಧೀರ್‌ ಮತ್ತು ನನ್ನ ಪ್ರೇಮ ಕತೆ

ಖ್ಯಾತ ಕಳನಟ ಸುಧೀರ್ ಲೈಫ್ ಸ್ಟೋರಿ ಭಾಗ 5

( ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)ಆಗ ಬೆಳಗಾಮ್ ಕ್ಯಾಂಪಲ್ಲಿ ಒಂದು ಆರ್ಟಿಸ್ಟ್ ಇದ್ದಕ್ಕಿದ್ದಂಗೇ ಒಂದು ನಾಲ್ಕು ಗಂಟೆ ಅಷ್ಟೊತ್ತಿಗೆ ಜಗಳ ಮಾಡ್ಕೊಂಡು ಹೋಗ್ಬಿಟ್ರು. ರಾತ್ರಿ ಹತ್ತ್ತು ಗಂಟೆಗೆ ನಾಟಕ ಇತ್ತು. ಮುಸುರಿ ಅವರ ಜೊತೆಯಲ್ಲಿ ಕಾಮಿಡಿ ಪಾರ್ಟ್ ಮಾಡ್ತಿದ್ದದ್ದು ಅವರು ರಾಜೇಶ್ವರಿ ಅಂತ ಕ್ಯಾರೆಕ್ಟರ್ ಅದು. “ಯಾರು ಮಾಡ್ತಾರೆ ಈಗ ಆಕ್ಯಾರಕ್ಟರ್?” ಅಂತ ಡಿಸ್ಕಸ್ ಮಾಡ್ತಿದ್ರು. ಆಗ ನಾನು ನಾಟಕದಲ್ಲಿ ಎಲ್ಲರ ಡೈಲಾಗ್‍ಗಳನ್ನೂ ಬೈಹರ್ಟ್ ಮಾಡ್ಕೊಂಡಿದ್ದೆ. “ಅವಾಗ ಮಾಲತಿ ಮಾಡ್ತಿಯಾ?” ಅಂತ ಕೇಳ್ದಾಗ “ಹೂನಮ್ಮ ಮಾಡ್ತೀನಿ”ಅಂತ ಹೇಳ್ದೆ. “ಮಾಡಿ ತೋರ್ಸು”ಅಂದ್ರು. ನಾನು ಮಾಡಿ ತೋರಿಸಿದಾಗ ಅವರಿಗೆ “ಇವಳು ಮಾಡ್ತಾಳೆ”ಅಂತ ಪಕ್ಕಾ ಆಯ್ತು. ಅವಾಗ ತಕ್ಷಣ ಯಾರನ್ನೋ ಕಳಿಸಿ ಆ ಡ್ರಸ್‍ಗಳನ್ನೆಲ್ಲಾ ಆಲ್ಟರ್ ಮಾಡ್ಸಿದ್ರು. ಅವತ್ತು ನಾನು ಪಾರ್ಟ್ ಮಾಡ್ದೆ. ಅದರಿಂದ ಅವರ ಗೌರವನೂ ಉಳಿತು. ನನಗೆ ಪಾತ್ರ ಮಾಡಿದ ಹೆಮ್ಮೆನೂ ಸಿಕ್ತು. ಅಲ್ಲಿಂದ ನಾನು ಡ್ಯಾನ್ಸ್ ಜೊತೆಗೆ ಕಲಾವಿದೆಯಾಗಿ ಪಾರ್ಟ್ ಕೂಡ ಮಾಡಕ್ಕೆ ಶುರು ಮಾಡ್ದೆ.


ಆಗ ಸುಧೀರ್ ಅವರು ನನ್ನ ನೋಡಿ ಇಷ್ಟ ಪಟ್ರು. ನಮ್ದು ಲವ್ ಏನೂ ಅಲ್ಲ. ಅವರು ಇಷ್ಟ ಪಟ್ಟು ಕಲ್ಪನಾಜೀ ಅವರ ಹತ್ರ ಹೇಳಿದ್ರಂತೆ. “ಆಹುಡುಗಿನ ನಾನು ಮದುವೆ ಆಗ್ತೀನಿ”ಅಂತ. ಕಲ್ಪನಾಜೀ ಅವರು ಹಾಸ್ಯ ಮಾಡಿದ್ರಂತೆ “ಏಯ್ ತಮಾಷೆ ಮಾಡ್ತೀಯೇನೋ? ಅವಳ ಕುಲ ಗೋತ್ರ ಏನೂ ಗೊತ್ತಿಲ್ಲ. ಮತ್ತೆ ಬಡವರ ಮನೆ ಹೆಣ್ಣು ಮಗಳು. ನೀನು ಹೇಗೆ ಮದುವೆ ಆಗ್ತೀಯ ಅವಳನ್ನ?” ಅಂತ ಕಲ್ಪನಾಜೀ ಅವರು ಕೇಳಿದ್ರೆ “ಇಲ್ಲ ನಾನು ಆಗ್ತೀನಿ”ಅಂದಿದ್ದಾರೆ. ಸರಿ ಅಂತ ಕಲ್ಪನಾಜೀ ಅವರು ನಿಂತು ನಮ್ಮ ಮದುವೆ ಮಾಡ್ಸಿದ್ರು. ನಾನು ನಾಟಕದ ಕಂಪೆನಿಗೆ ಸೇರಿ ಐದಾರು ತಿಂಗಳಾಗಿತ್ತು ಅಷ್ಟೇ. ಅವಾಗ್ಲೆನೇ ಮದುವೆ ಮಾಡಿಸಿ ಬಿಟ್ರು.ಮುಂದುವರೆಯುವುದು…

34 views