ಸುಧೀರ್‌ ಮಾಡೋ ನಾಟಕಕ್ಕೆ ಆನೆ ಟಿಕೇಟ್‌ ಕೊಡ್ತಿತ್ತು

ಖ್ಯಾತ ಕಳನಟ ಸುಧೀರ್ ಲೈಫ್ ಸ್ಟೋರಿ ಭಾಗ 9

( ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)ನಮಗೂ ಅವಾಗ ಆರ್ಥಿಕ ಪರಿಸ್ಥಿತಿ ಏನೂ ಚನ್ನಾಗಿರ್ಲಿಲ್ಲ. ಒಂದು ಹೊತ್ತಿನ ಊಟಕ್ಕೂ ನಾವು ಕಷ್ಟ ಪಡ್ತಾ ಇದ್ವಿ. ಅವಾಗ ಅವರು ಬಂದು “ಗಂಡ ಹೆಂಡ್ತಿ ಇಬ್ಬರೂ ನಮ್ಮ ಕಂಪೆನಿಗೆ ಬನ್ನಿ” ಅಂತ ಬುಕ್ ಮಾಡಿದ್ರು. ನಾವು ಮಗುನ ಕರ್ಕೊಂಡು ಅವರ ಕಂಪೆನಿಗೆ ಹೋದ್ವಿ. ಲಕ್ಷ್ಮಣನ ಪಾತ್ರ ಫಸ್ಟ್ ಟೈಮ್ ಸುಧೀರ್ ಅವರು ಗದಗ್ ನಲ್ಲಿ ಮಾಡಿದ್ರು. ಅದು ಇವತ್ತಿಗೂ ಹೇಳಕ್ಕೇ ಆಗಲ್ಲಿ ಅಷ್ಟು ಚನ್ನಾಗಿ ಮಾಡಿದ್ರು. ಅವರು ಪರ್ಸನಾಲಿಟಿನೇ ಹಾಗಿತ್ತು. ಅವರು ಲಕ್ಷ್ಮಣ ಆಗಿ ಸ್ಟೇಜ್ ಮೇಲೆ ಬಂದ ತಕ್ಷಣ ಜನ ಒಂದು ಐದು ನಿಮಿಷ ಅವರಿಗೆ ಕ್ಲಾಪ್ಸ್ ಹೊಡಿತಿದ್ರು.


ಪರಮ್: ಎಂಟ್ರಿಗೆ?


ಮಾಲತಿ ಸುಧೀರ್: ಎಂಟ್ರಿಗೇ ಅವರ ಎಂಟ್ರಿನೇ ಅಷ್ಟು ಗಮ್ಮತ್ತಾಗಿರ್ತಿತ್ತು. ಇವತ್ತಿನ ವರೆಗೂ ಅದು ಇತಿಹಾಸ ಆಗ್ಬಿಡ್ತು. ಒಳ್ಳೆ ಕಲೆಕ್ಷನ್ ಆಯ್ತು. ಆಕಂಪೆನಿ ಪ್ರೊಡ್ಯೂಸರ್ ತುಂಬಾ ಹೆಮ್ಮೆ ಪಟ್ರು. ಸುಧೀರ್ ಅವರಿಗೆ ಒಳ್ಳೆ ನೇಮ್ ಆಯ್ತು. “ಸುಧೀರ್ ಹದಾನೇನ್ರೀ?” ಅಂತ ಕೇಳಿ ಟಿಕೇಟ್ ಹರಿತಿದ್ರು. ಆರಷ್ಷಲ್ಲಿ ಟಿಕೇಟ್ ಕೊಡಕ್ಕಾಗಲ್ಲ ಅಂತ ದೇಸಾಯಿ ಅವರು ಒಂದು ಆನೆ ತಂದು ನಿಲ್ಸೋರು. ಆನೆ ಟಿಕೇಟ್ ಕೊಟ್ಟ ತಕ್ಷಣ ಅವರು ಹೊರಗೋಗ್ಬೇಕು ಮತ್ತೊಬ್ರು ಒಳಗೆ ಹೋಗೋದು. ಹಂಗಾಗ್ಬಿಡ್ತು.ಮುಂದುವರೆಯುವುದು…

12 views