ಸಿನಿಮಾದಲ್ಲಿ ಅವಕಾಶ ಬೇಕಾದರೆ ಇದು ಮಾಡಲೇಬೇಕು

ಸುಮಾ - ಎಲ್. ಎನ್‌ಶಾಸ್ತ್ರಿ ಲೈಫ್ ಸ್ಟೋರಿ ಭಾಗ-19

ಸಿನಿಮಾ ಕ್ಷೇತ್ರ ಎಷ್ಟರ ಮಟ್ಟಿ ಫ್ಯಾಂಟಸಿ ಪ್ರಪಂಚವೋ, ಅಷ್ಟೇ ಪ್ರಮಾಣದಲ್ಲಿ ಕೆಟ್ಟದಾಗಿದೆ. ಚಾಲ್ತಿಯಲ್ಲಿದ್ದರೆ ಮಾತ್ರವೇ ನಿಮ್ಮನ್ನು ನಿನಪಿಟ್ಟುಕೊಳ್ಳುತ್ತಾರೆ. ಇಲ್ಲವಾದರೆ ಯಾರಿಗೂ ನೆನಪೇ ಇರುವುದಿಲ್ಲ. ಅವಕಾಶ ಬೇಕು ಎಂದಾದರೆ ಪ್ರತಿಯೊಬ್ಬರ ಸಂಪರ್ಕದಲ್ಲಿರಬೇಕು. ಆಗಾಗ್ಗೆ ಮಾತನಾಡಿಸುತ್ತಿರಬೇಕು. ಕೆಲಸ ಇಲ್ಲದಿದ್ದರೂ, ಮಾತನಾಡಿಸುತ್ತಲೇ ಇರಬೇಕು. ಆದರೆ ಶಾಸ್ತ್ರಿ ಅವರು ಹಾಗಲ್ಲ. ಅವರು ಯಾರೊಬ್ಬರ ಬಳಿ ಹೋಗಿ ಅವಕಾಶ ಕೇಳಿದಾಗ, ಅವರು ಇಲ್ಲ ಅಂದ್ರೆ ಇವರಿಗೆ ಅವಮಾನ. ಹಾಗಾಗಿ ಅವೆಲ್ಲ ಬೇಡ ಎಂದು ತಾವೇ ಒಂದು ತಂಡ ಕಟ್ಟುವ ಉದ್ದೇಶದಿಂದ ಸಿನಿಮಾ ಮಾಡಲು ಮುಂದಾದರು.


ತುಂಬಾ ದಿನಗಳಿಂದ ಕೆಲಸ ಇಲ್ಲದವರನ್ನೇ ಸಿನಿಮಾಕ್ಕೆ ಆಯ್ಕೆ ಮಾಡಿದ್ದರು. ಆ ಸಿನಿಮಾ ಫ್ಲ್ಯಾಪ್‌ ಆಯ್ತು. ಅದಕ್ಕಾಗಿ ಸಾಲ ಮಾಡಿದ್ದರು. ಅದನ್ನು ತೀರಿಸಲು ನಾನು ಮನೆ ಮಾರಿದೆ.ಮುಂದುವರೆಯುವುದು...

31 views