
ಸಿನಿಮಾದಲ್ಲಿ ನೀರು ಜ್ಯೂಸು ಸರಬರಾಜು ಮಾಡುವ ಹುಡುಗನ ಕತೆ
ಮಿಮಿಕ್ರಿ ದಯಾನಂದ ಲೈಫ್ಸ್ಟೋರಿ ಭಾಗ 56

ನಮ್ಮ ಇಂಡಸ್ಟ್ರಿಯಲ್ಲಿರುವ ಹುಡುಗರು ಬಹಳ ಶ್ರಮಜೀವಿಗಳು. ‘ಕೆಂಪು ನಿಶಾದಿ’ ಎಂಬ ಸಿನಿಮಾ ಶೂಟಿಂಗ್ ವೇಳೆ ತೆಪ್ಪದಲ್ಲಿ ಹೋಗಿದ್ವಿ. ದಾವು ಹೆಚ್ಚಿತ್ತು. ನೀರಿನ ಮಧ್ಯೆ ಇದ್ವಿ. ವಾಪಸ್ ಬರುವಂತಿರಲಿಲ್ಲ. ಅಲ್ಲಿಯ ನೀರನ್ನು ಕುಡಿಯಲು ಆಗುತ್ತಿರಲಿಲ್ಲ. ಬೆಂಜಮಿನ್ ಎಂಬ ಹುಡುಗ ಟ್ಯೂಬ್ ಹಾಕಿಕೊಂಡು, ಕಾಲಿನ ಮಧ್ಯೆ ಜ್ಯೂಸ್ ಇಟ್ಕೊಂಡು ನಾಲ್ಕು ಕಿ.ಮೀ. ನೀರಿನಲ್ಲಿ ಬಂದು, ನಮಗೆ ಅದನ್ನು ಕೊಟ್ಟ. ಅವನಿಗೆ ಅದನ್ನು ತಂಡು ಕೊಡುವ ಅಗತ್ಯವೇನೂ ಇರಲಿಲ್ಲ. ತಂದು ಕೊಟ್ರೂ, ಕೊಡದಿದ್ರೂ ಅವನಿಗೆ ಕೊಡುವಷ್ಟೇ ಸಂಬಳ ಕೊಡುತ್ತಾರೆ. ಆದರೆ, ಅದು ಅವನ ಕಮಿಟ್ಮೆಂಟ್. ಎಲ್ಲರಿಗೂ ನೀರು, ಜ್ಯೂಸ್ ಕೊಡುವುದು ಅವನ ಕೆಲಸ. ಸೇವೆಯ ರೀತಿಯಲ್ಲಿ ಅದನ್ನು ಶ್ರದ್ಧೆಯಿಂದ ಅವನು ಮಾಡಿದ್ದ. ಇವರಿಗೆಲ್ಲ ಯಾವ ಅವಾರ್ಡ್ಗಳೂ ಇಲ್ಲ. ಹುಷಾರಿಲ್ಲ ಎಂದು ಅಡ್ಮಿಟ್ ಆಗಲು ಹೋದ್ರೂ, ಇವರಿಗೆಲ್ಲ ವಾರ್ಡ್ ಕೂಡ ಸಿಗುವುದಿಲ್ಲ ಅಂತಹ ಸ್ಥಿತಿಯಲ್ಲಿದ್ದಾರೆ.
ಸಿನಿಮಾದಲ್ಲಿ ಮುಂದಿನ ಪ್ರಪಂಚ ಅಷ್ಟೇ ಕಾಣುತ್ತದೆ. ಹಿಂದೆ ಕಷ್ಟಪಡುವವರ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ. ಒಳ್ಳೆಯ ಸೆಟ್ಗಳನ್ನು ನೋಡಿದಾಗ, ಇದು ಹೇಗೆ ಆಯ್ತು ಎಂದು ಯಾರು ಯೋಚಿಸಲು ಹೋಗೋದಿಲ್ಲ. ಅದರ ಸೃಷ್ಟಿಯನ್ನು ಯಾರೂ ನೋಡುವುದಿಲ್ಲ.
ಮುಂದುವರೆಯುವುದು...