ಸಿನಿಮಾದಲ್ಲಿ ಸ್ಟಾರ್‌ ಆದ್ರು ನಾಟಕ ಬಿಡ್ಲಿಲ್ಲ ಅವರು

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 81

( ಶಂಕರ್‌ನಾಗ್‌ ಕುರಿತಂತೆ ನಟ ಅವಿನಾಶ ಅವರ ನೆನಪುಗಳು)ಆಮೇಲೆ ನನಿಗೆ ಸಿನಿಮಾ ಹುಚ್ಚು ಬಂತು, ಶಂಕರ್ ಜೊತೆಗೇನೆ ‘ಸಾಂಗ್ಲೀಯಾನ’ಮಾಡ್ದೆ. ಇಪ್ಪತ್ತನಾಲ್ಕುಗಂಟೆನೂ ಕಂಟ್ರೀ ಕ್ಲಬ್ನಲ್ಲಿ ಅವ್ರ ಫಾರ್ಮ್ ಹೌಸ್ ಇತ್ತಲ್ಲ ಅಲ್ಲೇ ಇರ್ತಿದ್ವಿ ನಾವೆಲ್ಲಾ. ಹೀ ವಾಸ್ ಅ ಮ್ಯಾನ್ ಹೂ ಈಸ್ ಅಹೆಡ್ ಆಫ್ ಹಿಸ್ ಟೈಮ್. ಯೋಚನೆ ಮಾಡೊದ್ರಲ್ಲೂ, ಪ್ರತಿಯೊಂದ್ರಲ್ಲೂ ತುಂಬಾ ಮುಂದೆ ಇರ್ತಿದ್ರು. ಅವಾಗ್ಲೇ ನೋಡಿ ಮಿಂಚಿನ ಓಟ, ಆಕ್ಸಿಡೆಂಟ್ ಎಲ್ಲಾ ಅವಾಗಿನ ಕಾಲಕ್ಕೆ ತುಂಬಾ ಮುಂದೆ ಇದ್ದಂತಹ ಸಿನಿಮಾಗಳು. ಅವ್ರ ಬಹಳ ಗ್ರೇಟ್ ವಿಷಯ ಏನಂದ್ರೆ, ಅವ್ರು ಎಷ್ಟೇ ಬ್ಯುಸಿಯಾಗಿದ್ರೂ, ಎಷ್ಟೇ ದೊಡ್ಡ ಸ್ಟಾರ್ ಆದಾಗ್ಲೂ ನಾಟಕನ ಬಿಡ್ಲೇ ಇಲ್ಲ ಅವ್ರು. ನಮಿಗೆಲ್ಲಾ ರೇಗಿಸ್ತಿದ್ರು “ನೀನು ಸಿನಿಮಾದವ್ನಾ? ನಾಟಕದವ್ನಾ? ನಾಟಕದವ್ನಲ್ವಾ ನೀನು ಬರ್ಬೇಕು ನೀನು ಅಂತ ಬೈತಿದ್ರು. ‘ನಾಗಮಂಡಲ’ ನಾಟಕಮಾಡ್ವಾಗನನಿಗೆ ಏನೂ ಕೆಲ್ಸನೇ ಇರ್ತಿರ್ಲಿಲ್ಲ, ಯಾವ ಪಾತ್ರನೂ ಇರ್ಲಿಲ್ಲ. ಶಂಕರ್ ನಾಗ್ ನನ್ನ ಕೋರಸ್ ಅಲ್ಲಿ ಕೂರ್ಸಿದ್ರು. ನನಿಗೆ ಹಾಡಕ್ಕೇ ಬರ್ತಿರ್ಲಿಲ್ಲ. ಕೂತಿರ್ಬೇಕಷ್ಟೇ, “ಬಾ ಕೂತ್ಕೋ” ಅಂತಹೇಳ್ತಿದ್ರು. ಆತರ ಶಂಕರ್. ತುಂಬಾ ಆತ್ಮೀಯತೆ ಎಲ್ಲರ ಜೊತೆ.


ಒಂದು ರಾತ್ರಿ ಧಾರವಾಡದಲ್ಲಿ ರಿಹರ್ಸಲ್ ಮುಗ್ಸಿ ಎಲ್ಲರೂ ಮಲ್ಗಿದ್ದೀವಿ, ರಾತ್ರಿ ಹನ್ನೆರಡು ಗಂಟೆಗೆ ಬಕೆಟಲ್ಲಿ ನೀರು ತಂದು ಎಲ್ಲರ ಮೇಲೂ ಸುರ್ದು, ಎಬ್ಸಿದ್ರು ಎಲ್ಲರನ್ನ. ಹೀ ವಾಸ್ ಲೈಕ್ ದಟ್. ಬಹಳ ಅಮೇಜಿಂಗ್ ಪರ್ಸನಾಲಿಟಿ.ಮುಂದುವರೆಯುವುದು…

14 views