ಸ್ನೇಹ ಜೀವಿ ಉದಯಶಂಕರ್

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 88


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ನನ್ನ ಮತ್ತು ಉದಯಶಂಕರ್ ನಡುವೆ ಬಹಳ ಆತ್ಮೀಯತೆ ಇತ್ತು. ಏಕವಚನದಲ್ಲಿಯೇ ಮಾತನಾಡುತ್ತಿದೆವು. ನಾನು ಸ್ನೇಹಕ್ಕೆ ಬೆಲೆ ಕೊಟ್ಟವನು. ಹಾಗಾಗಿಯೇ ನನ್ನ ಮತ್ತು ದೊರೆ ಅವರ ಸ್ನೇಹ ಅಷ್ಟು ಬಿಗಿಯಾಗಿತ್ತು. ಸ್ನೇಹ ಎಂಬ ಭಾವನೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಸ್ನೇಹವನ್ನು ಉಳಿಸುಕೊಳ್ಳುವುದು ಬಹಳ ಕಷ್ಟವಾದ ಕೆಲಸ. ಅದೊಂದು ಸಾಧನೆ. ಅದನ್ನು ನಾನು ಸಾಧಿಸಿದ್ದೇನೆ. 50 ವರ್ಷ ದೊರೆ, ರಾಜ್‌ಕುಮಾರ್‌ ಅವರ ಜೊತೆಗೆ ಇದ್ದೇನೆ. ಆ ತೃಪ್ತಿಯನ್ನು ದೇವರು ಕೊಟ್ಟ ವರ ಎಂದು ಸ್ವೀಕರಿಸಿದ್ದೇನೆ. ‌


ಉದಯ್‌ಶಂಕರ್‌ ಕೂಡ ಸ್ನೇಹ ಜೀವಿ. ಸಿನಿಮಾ ಕ್ಷೇತ್ರದಲ್ಲಿ ಅವನನ್ನು ಶತ್ರು ಎಂದು ಹೇಳುವವರು ಯಾರೂ ಇಲ್ಲ. ಸಾಮಾನ್ಯವಾಗಿ ವೃತ್ತಿ ವೈಷಮ್ಯ ಇರುತ್ತದೆ. ನನಗಿಂತ ಉತ್ತಮವಾಗಿದ್ದಾನೆ ಎಂದಾದರೆ ಅವನ ಬಗ್ಗೆ ಕೊಂಚ ಅತೃಪ್ತಿ, ಅಸಮಾಧಾನ ಇರುತ್ತದೆ. ಆದರೆ ಇವನ ಬಗ್ಗೆ ಹೊಟ್ಟೆ ಉರಿ ಮಾಡಿಕೊಳ್ಳುವವರು ಇರಲಿಲ್ಲ. ಮಿತೃತ್ವದ ಭಾವನೆಯೇ ಹೆಚ್ಚುತ್ತಿರುತ್ತಿತ್ತು.

ಆತನ ಸಂಭಾಷಣೆ, ಸಾಹಿತ್ಯ ಬಹಳ ಅದ್ಭುತವಾಗಿರುತ್ತಿತ್ತು. ಹಾಗಾಗಿಯೇ ರಾಜ್‌ಕುಮಾರ್‌ ಅವರಿಗೆ ಅಷ್ಟೊಂದು ಪ್ರೀತಿ. ಮಂತ್ರಾಲಯ ಮಹಾತ್ಮೆ ಸಿನಿಮಾದಲ್ಲಿ ರಾಜ್‌ಕುಮಾರ್‌ ಅವರು ಅಷ್ಟೊಂದು ಭಕ್ತಿ ಪೂರ್ವಕವಾಗಿ ಹಾಡಲು ಉದಯ್‌ಶಂಕರ್‌ ಸಾಹಿತ್ಯವೂ ಕಾರಣ. ಆ ಸಾಹಿತ್ಯ ಅವರಿಗೆ ಸ್ಫೂರ್ತಿ ನೀಡಿತು.


ಮುಂದುವರೆಯುವುದು...

14 views