ಸಾಯುವಾಗ ಶಾಸ್ತ್ರಿ ಕಂಪೋಸ್‌ ಮಾಡುತ್ತಿದ್ದ ಹಾಡು ಯಾವುದು?

ಸುಮಾ - ಎಲ್. ಎನ್‌ಶಾಸ್ತ್ರಿ ಲೈಫ್ ಸ್ಟೋರಿ ಭಾಗ-17
ಶಾಸ್ತ್ರಿ ಅವರದು ಬಹಳ ವಿಶೇಷ ವ್ಯಕ್ತಿತ್ವ. ಅವರು ಕಲಾವಿದನಾಗಿ ಮತ್ತೆ ಹುಟ್ಟುತ್ತಾರೆ. ಅವರು ಕೊನೆಯುಸಿರೆಳೆಯುವಾಗಲೂ ಹಾಡುಗಳ ಸಂಯೋಜನೆ ಮಾಡುತ್ತಿದ್ದರು. ನೀರು ಅಥವಾ ಜ್ಯೂಸ್‌ ಕುಡಿಸೋಣ ಎಂದು ನಾನು ಹತ್ತಿರ ಹೋದೆ. ಸುಮ್ನೀರು ನಾನು ಹಾಡುಗಳ ಕಂಪೋಸ್‌ ಮಾಡುತ್ತಿದ್ದೇನೆ ತೊಂದರೆ ಕೊಡಬೇಡ ಎಂದ್ರು. ಆ ವೇಳೆ ಅವರು ರಾಘವೇಂದ್ರ ಸ್ವಾಮಿಗಳ ಹಾಡುಗಳನ್ನು ಕಂಪೋಸ್‌ ಮಾಡುತ್ತಿದ್ದರು.


ಅವರ ದೇಹವಿಲ್ಲ ಅಷ್ಟೇ. ಅವರ ಅದ್ಭುತವಾದ ಜ್ಞಾನ, ಅವರ ಅನುಭವಗಳ ವಿಷಯಗಳು ಎಂದೆಂದಿಂಗೂ ಉಳಿಯಲಿದೆ. ಅವರ ಕೋಲುಮಂಡೆ, ಲಾಲಿ ಸುವಾಲಿ, ಕರುನಾಡೆ ಹಾಡುಗಳನ್ನು ಎಂದಿಗೂ ಕನ್ನಡದ ಜನರು ಮರೆಯುವುದಿಲ್ಲ. ಅವರು ಸತ್ತು ಮುಂದಿನ ಆಗಸ್ಟ್‌ಗೆ ನಾಲ್ಕು ವರ್ಷ ಕಳೆಯಲಿದೆ. ಇಂದಿಗೂ ಕನ್ನಡ ರಾಜ್ಯೋತ್ಸವದಂದು ಹತ್ತರಲ್ಲಿ ಒಂಬತ್ತು ಕಡೆಯಾದರೂ ‘ಕರುನಾಡೆ’ ಹಾಡು ಕೇಳುತ್ತದೆ. ಜನ ಎಂದಿಗೂ ಅವರನ್ನು ಮರೆಯುವುದಿಲ್ಲ.ಮುಂದುವರೆಯುವುದು...

18 views