ಸಾಯುವ ಮುಂಚೆ ಶಂಕರ್‌ ನಾಗ್ ಏನೆಲ್ಲಾ ಕನಸು ಕಂಡಿದ್ರು?

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 47

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ಮಾಲ್ಗುಡಿ ಆದ್ಮೇಲೆ ಹಿ ವಾಸ್ ಬ್ಯುಸಿ ವಿತ್ ಸೋ ಮೆನಿ ಅದರ್ ಥಿಂಗ್ಸ್. ಸಾಮಾಜಿಕ ಕಳಕಳಿ ತುಂಬಾ ಜಾಸ್ತಿ ಆಗ್ಹೋಯ್ತು. “ಕಡಿಮೆ ಕಾಸಲ್ಲಿ ಮನೆ ಕೊಡೋಣ ಜನಕ್ಕೆ”, ಅಂತ ಆಸ್ಟ್ರೇಲಿಯಾದವ್ರ ಯಾವುದೋ ಪ್ರಾಜೆಕ್ಟ್ ಇದೆ ಅವರನ್ನ ಕರೆಸಿ ಒಂದು ಮನೆ ಮಾಡಿಸಿದ. ಎಂಟೇ ದಿವ್ಸದಲ್ಲಿ ಲೋ ಕಾಸ್ಟಲ್ಲಿ ಒಂದು ಮನೆ. ಯಾವತರ ಮನೆ ಅಂದ್ರೆ? ಅರ್ಥ್ ಕ್ವಿಕ್ ಆಗುವಲ್ಲಿ ಮಾಡುವಂತದ್ದು, ಮನೆ ಜನರ ಮೇಲೆ ಬಿದ್ರೂ ಜನರಿಗೆ ಏನೂ ಆಗ್ಬಾರ್ದು ಅಂತಹ ಮನೆ. ಥರ್ಮಕೋಲಿನ ಮೇಲೆ ಸಣ್ಣ ಕಬ್ಬಿಣದ ಮೆಶ್ ಮಾಡಿ, ಅದಕ್ಕೆ ಕಾಂಕ್ರೇಟ್ ಹಾಕಿ ಅದೇ ಗೋಡೆ. ಅದು ನಾಲ್ಕಡಿ ಹತ್ತಡಿ ಸಿಗುತ್ತೆ. ಸೋ ಹನ್ನೆರಡು ಅಡಿ ಬೇಕಂದ್ರೆ, ಮೂರು ಸೇರ್ಸಿದ್ರೆ ಹನ್ನೆರಡು ಅಡಿ ರೂಮ್ ಆಗ್ಹೋಯ್ತು. ಟು ಡೇಸಲ್ಲಿ ಆಗ್ಹೋಗುತ್ತೆ ಮನೆ. ಫ್ಲೋರ್ ಯಾಕೆ ಬೇಕು? ಗುಡ್ಸಿ ಬಿಟ್ಟು ಊರಲ್ಲಿ ಸೆಗಣಿ ಸಾರ್ಸಿದ ಹಾಗೆ ಸಾರ್ಸಿದ್ರೆ, ಪ್ರತಿಯೊಬ್ಬರಿಗೂ ಸ್ವಂತ ಮನೆ ರಡಿ. ಈ ತರದ್ದೆಲ್ಲಾ ಯೋಚ್ನೆ ಬಂದ್ಬಿಡ್ತು.


ಇಟ್ಟಿಗೆ ಫ್ಯಾಕ್ಟ್ರಿ ಮಾಡ್ಬೇಕುಂತಿದ್ರು. 40 ಪೈಸೆಗೆ ಒಂದು ಇಟ್ಟಿಗೆ ಕೊಡಕ್ಕೆ. ಸ್ಯಾಂಡ್ ಬೇಕೂಂತಾಯ್ತು. ಕಾರವಾರದಲ್ಲಿ ಸ್ಯಾಂಡ್ ಸಿಗುತ್ತೆ, ಅದು ದಿನಕ್ಕೆ ನಾಲ್ಕು ಲಕ್ಷ, ಐದು ಲಕ್ಷ ಇಟ್ಟಿಗೆ ಬರುತ್ತೆ. ಒಂದೇ ಕಡೆ ಇದ್ರೆ, ಮಾರ್ಕೆಟಿಂಗ್ ಕಷ್ಟ ಅಥವಾ ಬೇರೆ ಊರಿಗೆ ಕಳ್ಸಕ್ಕೆ ಟ್ರಾನ್ಸಪೋರ್ಟ್ ಕಾಸ್ಟ್ ಬೀಳುತ್ತೆ. ಸೋ “ಸೆಂಟರಲ್ಲಿರ್ಲಿ” ಅಂತ್ಹೇಳಿ ಕಾರವಾರದಲ್ಲಿ ಸ್ಯಾಂಡ್ ಸೆಲೆಕ್ಟ್ ಆಯ್ತು. ಸೊ ಅಲ್ಲಿ ನೇವಲ್ ಬೇಸ್ ಇದೆಂತ ಕೊಡ್ಲಿಲ್ಲ. ಅಂದ್ರೆ ಅವರ ಯೋಚನೆ ಈ ತರ ಎಲ್ಲಾ ಚೇಂಜ್ ಆಯ್ತು. ಅಷ್ಟು ಬ್ಯುಸಿಯಲ್ಲಿದ್ರು. ನಮ್ಮ ಹುಡುಗರಿಗೆಲ್ಲರಿಗೂ ಕೆಲ್ಸ. “ಜಗ್ಗ ಫ್ರೀ ಇದ್ಯಾ? ಇಲ್ಲಿಂದ ಕೊಡಗು ತನಕ ಹೋಗಿ ಬಾ, ಐವತ್ತು ಕಿಲೋಮೀಟರ್ ಗೆ ಯಾವ ಹಳ್ಳಿ ಸಿಗುತ್ತೋ, ಅಲ್ಲಿ ಎರಡು ಎಕರೆ ಜಾಗ ಸಿಗುತ್ತಾ? ನೋಡು. ಏನು ಬೇಕು ಮಾತಾಡ್ಕೊಂಡು ಬಾ. ಯಾಕಂದ್ರೆ ಐವತ್ತು ಕಿಲೋಮೀಟರ್ ಗೆ, ಒಂದು ಹಂಡ್ರಡ್ ಬೆಡ್ ಹಾಸ್ಪಿಟಲ್ ಕಂಟಿನ್ಯೂಸ್ ಆಗ್ಬೇಕು”. ಮೆಡಿಕಲ್ ಗೂ, ಸಿನಿಮಾ ಆಕ್ಟರ್ ಗೂ ಏನು ಸಂಬಂಧ ಇಲ್ಲ. ಆದ್ರೆ ಸಾಮಾಜಿಕ ಕಳಕಳಿ ಅಷ್ಟಿತ್ತು. ಸೋ ನಮಗೆಲ್ಲಾ ಒಂದೊಂದು ಜವಾಬ್ದಾರಿ ಇತ್ತು.ಮುಂದುವರೆಯುವುದು…

9 views