ಸಾಯುವ ಹಿಂದಿನ ದಿನ ತನ್ನ ಪ್ರತಿಮೆ ಮಾಡಲು ಹೇಳಿದ್ದ ಶಂಕರ್

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 71

(ಮಾಲ್ಗುಡಿ ಡೇಸ್ ಆರ್ಟ್ ಡೈರಕ್ಟರ್, ಜಾನ್ ದೇವರಾಜ್ ಅವರ ನೆನಪುಗಳು.)

ಪರಮ್: ಶಂಕರ್ ನಾಗ್ ಅವ್ರ ಜೊತೆ ಒಡನಾಟದ ನೆನಪುಗಳು, ಮಾಲ್ಗುಡಿ ಆದ್ಮೇಲೆ ಶಂಕರ್ ಜೊತೆ ಬೇರೆ ಪ್ರಾಜೆಕ್ಟ್ ಯಾವುದಾದ್ರೂ ಮಾಡಿದ್ರಾ?


ಜಾನ್ ದೇವರಾಜ್: ಇಲ್ಲ ಯಾವುದೂ ಮಾಡ್ಲಿಲ್ಲ. ನಾಗಮಂಡಲ ನಾಟಕ ಮಾಡ್ದೆ. ನಾಗಮಂಡಲ ಸೆಟ್ ಮಾಡಕ್ಕೆ 1700 ಖರ್ಚು ಮಾಡಿದ್ದೆ. ಸೋ ಚಿತ್ರದುರ್ಗ ಪರಿಷತ್ ಅಲ್ಲಿ ನಾವು ಕ್ರಿಯೇಟ್ ಮಾಡಿದ್ವಿ. ಅದರ “ಸ್ಟೇಜ್ ಎಲ್ಲಿ ಮಾಡ್ಬೇಕು?” ಅಂತ ಶಂಕರ್ ನ ಕೇಳ್ದಾಗ, “ಸ್ಟೇಜ್ ಬೇಡ ಮರನೇ ನಮ್ಗೆ ಸ್ಟೇಜ್” ಅಂತ ಅಂದ್ರು. ಹಾಗೆ ಆಲದ ಮರದ್ಮೇಲೆ ಸ್ಟೇಜ್ ಮಾಡಿದ್ದೆ ನಾನು. ಜನಗಳೆಲ್ಲ ಓಪನ್ ಏರಲ್ಲಿ ಸ್ಟೇಜ್ ಮೇಲೆ ಕೂತ್ಕೊಳೋದು. ಅಲ್ಲಿ ಬ್ಯೂಟಿಫುಲ್ ಪಪೆಟ್ ಎಲ್ಲ ಮಾಡಿದ್ದೆ.


ಪರಮ್: ಸೋ ಹೌ ವಾಸ್ ದ ಲಾಸ್ಟ್ ಮೂವ್ಮೆಂಟ್?


ಜಾನ್ ದೇವರಾಜ್: ಶಂಕರ್ ಹ್ಯಾಡ್ ಅ ಗ್ರೇಟ್ ಇಂಪಾಕ್ಟ್ ಆನ್ ಮಿ ವೆನ್ ಹೀ ವೆಂಟ್ ಅವೇ. ನನಗೆ ಬಹಳ ಬೇಸರ ಆಯ್ತು. ಒಂದು ದಿನ ನಾನು, ಶಂಕರ್ ನಾಗ್, ರಮೇಶ್ ಭಟ್ ಸಿಂಗ್ಸಂದ್ರದಲ್ಲಿ ಅವರ ಮನೆಯಲ್ಲಿ ನಿತ್ಕೊಂಡು ಮಾತಾಡ್ತಿದ್ವಿ. ಆಗ ಶಂಕರ್ “ಹೇಯ್ ಜಾನ್ ನನ್ದು ಒಂದು ಸ್ಕಲ್ಪಚರ್ ಮಾಡು ಇಲ್ಲಿ” ಅಂತ ಹೇಳ್ದ. ನಾನ್ಹೇಳ್ದೆ “ಶಂಕರ್ ನಾನು ನಿನ್ನ ಸ್ಕಲ್ಪಚರ್ ಮಾಡ್ಬೇಕಾ? ನೀನೇ ಹೋಗಿ ಬಟ್ಟೆ ಬಿಚ್ಚಿ ನಿಂತ್ಬಿಡು ಅಲ್ಲಿ”ಅಂತ ಹೇಳ್ದೆ. ರಮೇಶ್ ಭಟ್ ಹೇಳಿದ್ರು “ನೀನು ಹಂಗೆಲ್ಲ ಹೇಳ್ಬಾರ್ದು ಶಂಕರ್” ಅಂತ.ಮುಂದುವರೆಯುವುದು…

16 views