ಸ್ರ್ತಿ, ಧನ, ಗೃಹದ ಯೋಗಗಳು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 78


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿಸೈಟ್‌ ಯಾಕೆ ಮಾರಿದ್ರಿ. ಒಳ್ಳೆಯ ಜಾಗ ಅದು ಮುಂದೆ ಅಭಿವೃದ್ಧಿಯಾಗುತ್ತದೆ. ನೀವು ತಪ್ಪು ಮಾಡಿಬಿಟ್ರಿ ಎಂದು ವಜ್ರಮುನಿ ಹೇಳಿದ್ರು. ನಂತರ ನನ್ನ ಮಗನಿಗೆ ಒಂದು ಸೈಟ್‌ ಕೊಟ್ಟರು. ದೊರೆ ಮಗನ ಹೆಸರಿಗೂ ಒಂದು ಸೈಟ್‌ ಕೊಟ್ಟರು. ತಲಾ 1 ಲಕ್ಷ ಕೊಟ್ಟಿದ್ವಿ. ಆದರೆ, ಆ ಪ್ರದೇಶದಲ್ಲಿ ಜನ ಇರದ ಕಾರಣ ನಾವು ಅಡ್ವಾನ್ಸ್‌ ವಾಪಸ್‌ ತೆಗೆದುಕೊಂಡು ಬಿಟ್ಟೆವು. ಇವತ್ತು ಇದಿದ್ರೆ 6 ಕೋಟಿ ಬೆಲೆಬಾಳುತ್ತಿತ್ತು. ಸ್ತ್ರೀ, ಧನ, ಗೃಹ ಎಲ್ಲವೂ ಯೋಗವಿದ್ದರೆ ಮಾತ್ರವೇ ಸಿಗುತ್ತದೆ. ಅದನ್ನು ಕೃಷ್ಣನೇ ಹೇಳಿದ್ದಾನೆ.


ಇಮ್ಮಡಿ ಪುಲಕೇಷಿ ಸಿನಿಮಾಕ್ಕೆ ದೊರೆಯವರು ಕ್ಯಾಮೆರಾ ಮೆನ್‌. ಜಿ.ಕೆ ವೆಂಕಟೇಶ್‌ ಪ್ರೊಡ್ಯೂಸರ್‌. ಹಾಗಾಗಿ ಸಿನಿಮಾ ಚಿತ್ರೀಕರಣದ ವೇಳೆ ನಾನು ಹೋಗುತ್ತಿದ್ದೆ. ಅಲ್ಲಿ ಪರಿಚಯವಾಗಿದ್ದ ನಾರಾಯಣಪ್ಪ ಅವರಿಗೆ ಬ್ಯಾಟರಾಯನಪುರದಲ್ಲಿ ಒಂದೂ ಮುಕ್ಕಾಲು ಎಕರೆ ತೋಟವಿತ್ತು. 38 ಸಾವಿರ ಕೊಡಿ ನಿಮಗೆ ತೋಟ ಕೊಡುತ್ತೇನೆ ಎಂದ್ರು. ಆಗ ದೊರೆಯವರ ಪತ್ನಿ ತೋಟ ತೆಗೆದುಕೊಂಡರೆ ನೋಡಿಕೊಳ್ಳುವವರು ಯಾರು? ನೀವು ಸಿನಿಮಾ ಪ್ರೊಡಕ್ಷನ್‌ ಬಿಟ್ಟು ಅದನ್ನು ನೋಡಿಕೊಳ್ಳುತ್ತೀರಾ? ಯಾರಿಗಾದರೂ ವಹಿಸಿಕೊಡುವುದಾದರೆ, ನಂಬಿಕಸ್ಥರು ಯಾರಿದ್ದಾರೆ ಎಂದು ತೆಗೆದುಕೊಳ್ಳುವುದು ಬೇಡ ಅಂದ್ರು. ದೇವಸ್ಥಾನ ಬಿಟ್ಟರೆ ಏನು ಇರಲಿಲ್ಲ. ಮುಖ್ಯ ರಸ್ತೆಯಲ್ಲಿಯೇ ತೋಟ ಇತ್ತು.


ಮೊದಲೇ ಹೇಳಿದ್ದಂತೆ ಮನುಷ್ಯನ ಹಣೆಯಲ್ಲಿ ಏನು ಬರೆದಿರುತ್ತದೋ ಅದು ಮಾತ್ರವೇ ದಕ್ಕುತ್ತದೆ. ಯೋಗ ಇರದೇ ಹೋದರೆ ಯಾವೂದು ಸಿಗುವುದಿಲ್ಲ.
ಮುಂದುವರಿಯುವುದು...

ಸಂದರ್ಶನ: ಕೆ.ಎಸ್‌. ಪರಮೇಶ್ವರ

17 views