
ಸಾವಿರದ ನೋಟು ನೋಡಿ ರಾಜಕುಮಾರ ಕೊಟ್ಟ ರಿಯಾಕ್ಷನ್
ದೊರೆ-ಭಗವಾನ್ ಲೈಫ್ ಸ್ಟೋರಿ - ಭಾಗ 109
(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)

ಮದ್ರಾಸ್ನಲ್ಲಿದ್ದಾಗ ಬರ್ಮಾ ಬಜಾರ್ಗೆ ರಾಜಕುಮಾರ ಅವರನ್ನು ಕರೆದುಕೊಂಡು ಹೋಗಿ, ಫಾರಿನ್ ಸಾಮಾನುಗಳನ್ನೆಲ್ಲ ತೆಗೆದುಕೊಳ್ಳಿ ಮುತ್ತುರಾಜಣ್ಣ ಎಂದರೆ ನನಗೆ ಏನಕ್ಕೆ ಭಗವಾನ್, ಸುಮ್ನೆ ನೋಡುತ್ತೇನೆ ಅಷ್ಟೇ ಎನ್ನುತ್ತಿದ್ರು. ಒಳ್ಳೊಳ್ಳೆ ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಹಲವು ವಸ್ತುಗಳನ್ನು ತೋರಿಸಿದರೆ ಬೇಡ ಅನ್ನುತ್ತಿದ್ರು. ನೀವು ಏನಾದ್ರೂ ತೆಗೆದುಕೊಳ್ಳಲೇಬೇಕು ಎಂದು ಹಠ ಹಿಡಿದೆ. ಅಲ್ಲಿ ಜಿಲೆಟ್ ಕಂಪನಿಯ ಹ್ಯಾಂಡಲ್ ಶೇವ್ ಇತ್ತು. ಇದನ್ನು ತೆಗೆದುಕೊಳ್ಳಿ ಗಡ್ಡ ಬೊಳಿಸಲು ಸುಲಭವಾಗುತ್ತದೆ ಎಂದೆ. ಅದೊಂದು ಮಾತ್ರ ತೆಗೆದುಕೊಡಿ ಎಂದರು. ಟೇಪ್ ರೇಕಾರ್ಡರ್ ಬೇಕಾ ಎಂದರೆ, ಬೇಡ ಕಾರು ಮತ್ತು ಮನೆಯಲ್ಲಿ ಇದೆ. ಯಾಕೆ ಸುಮ್ನೆ ದಂಡ ಮಾಡುತ್ತೀರಾ ಎಂದು ನನಗೆ ಹೇಳಿದ್ರು. ಅವರು ದುಡ್ಡನ್ನು ಸುಖಾ ಸುಮ್ಮನೆ ವ್ಯಯ ಮಾಡುತ್ತಿರಲಿಲ್ಲ. ಹಾಗೆಯೇ ಕೈಯಲ್ಲಿ ದುಡ್ಡನ್ನು ಇರಿಸಿಕೊಳ್ಳುತ್ತಿರಲಿಲ್ಲ.
ಎಂ.ಎಸ್. ರಾಜಶೇಖರ್ ಒಮ್ಮೆ ಸಾವಿರ ರೂಪಾಯಿ ನೋಟು ತೆಗೆದುಕೊಂಡು ಬಂದು ತೋರಿಸಿದ್ರು. ಆಗ, ರಾಜ್ಕುಮಾರ್ ಅವರು, ಸಾವಿರ ರೂಪಾಯಿಯ ನೋಟಾ ಎಂದು ಆಶ್ಚರ್ಯ ಪಟ್ಟಿದ್ದರು. ಅಷ್ಟು ಮುಗ್ಧತೆ ಅವರಲ್ಲಿ ತುಂಬಿತ್ತು.
ಮುಂದುವರೆಯುವುದು...