ಹವ್ಯಾಸಿ ರಂಗಭೂಮಿಯಲ್ಲಿ ಶಂಕರ್‌ ವಿಭಿನ್ನವಾಗೋದು ಈ ಕಾರಣಕ್ಕಾಗಿ…

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 130

(ಶಂಕರ್ ನಾಗ್ ಅವರ‌ ಒಡನಾಡಿ‌ ಬಿ.ಸುರೇಶ ಅವರ ನೆನಪುಗಳು)ಆ ತರಹದ ಒಬ್ಬ ವ್ಯಕ್ತಿ ಶಂಕರ್ ನಾಗ್. ಮತ್ತೆ ಅವ್ರ ‘ಸಂಕೇತ್’ತಂಡ ಒಂದು ನಾಟಕ ಮಾಡಕ್ಕೆ ತೀರ್ಮಾನ ಮಾಡಿದೆ ಅಂದ್ರೆ, ಉದಾಹರಣೆಗೆ ‘ಬ್ಯಾರಿಯರ್’ ನಾಟಕ, ಅದನ್ನ ‘ಸ್ಪಂದನ’ ತಂಡಕ್ಕಾಗಿ ಮಾಡಿದ್ರು, ಅದ್ರಲ್ಲಿ ಬಿ.ಜಯಶ್ರೀ ಯವರು ಒಂದು ಪ್ರಧಾನವಾದ ಪಾತ್ರ ಮಾಡಿದ್ರು. ನಾಟಕದ ರೀಡಿಂಗ್ ಅಂದ್ರೆ ಒಂದು ಸಂಭ್ರಮ, ಒಂದು ಹಬ್ಬ. ‘ಸಿಂಗಸಂದ್ರ’ ದಲ್ಲಿದ್ದ ಅವ್ರ ಫಾರ್ಮ್ ಹೌಸಲ್ಲಿ ಆ ನಾಟಕದ ರೀಡಿಂಗ್ ಇಟ್ಕೊಂಡಿದ್ರು. ಅದಕ್ಕೆ ನಾವೆಲ್ಲಾ ಹೋಗಿದ್ವಿ. ನಾಟಕವನ್ನು ಓದುವುದು ಮತ್ತು ನಾಟಕ ಹೇಗೆ ಕಟ್ಟಬೇಕು ಅನ್ನುವುದರ ಬಗ್ಗೆ ಚರ್ಚೆ. ಮುಕ್ತವಾಗಿ ನಮ್ಮೆದುರಿಗೆ ಒಂದು ನಾಟಕ ಅರಳೋದನ್ನ ನಾವು ನೋಡಬಹುದಾಗಿತ್ತು.


ಏನೂ ಗೊತ್ತಿಲ್ಲದ ಹುಡುಗರು ನಾವು. ಏನೂ ಗೊತ್ತಿಲ್ಲ ಅಂದ್ರೆ ತೀರಾ ಏನೂ ಗೊತ್ತಿಲ್ಲ ಅಂತಲ್ಲ. ಬೀದಿ ನಾಟಕಗಳು ಹಾಗೇ ಇನ್ನೇನೆಲ್ಲಾ ಮಾಡಿದ್ವಿ ಆದ್ರೆ ಪ್ರೊಫೆಶನಲ್ ಆಗಿ ಒಂದು ನಾಟಕ ಕಟ್ಟೋದನ್ನ ನಮ್ಮ ಕಣ್ಣು ಮುಂದೆ ನೋಡೋದಕ್ಕೆ ಸಾಧ್ಯ ಆಯ್ತು. ಮತ್ತೆ ಕೆಲ್ಸ ಮಾಡಿದ್ದಕ್ಕೆ ಅಥವಾ ಏನಕ್ಕಾದರೂ ಓಡಾಡಿದ್ರೆ ಒಂದು ಮಿನಿಮಮ್ ಅಮೌಂಟ್ ಆಫ್ ಮನಿ, ಪೆಟ್ರೋಲ್ ಗೆ ಅಥವಾ ಇನ್ನೇನಕ್ಕಾದರೂ ಕೊಡುವಂತಹ ಗುಣ. ಬೇರೆ ಯಾವುದಾದರೂ ತಂಡಗಳಲ್ಲಿ ಕೆಲ್ಸ ಮಾಡಿದರೆ, ಒಂದು ಥ್ಯಾಕ್ಯೂ ಬಿಟ್ರೆ ಬೇರೇನೂ ಸಿಗ್ತಾ ಇರ್ಲಿಲ್ಲ.ಮುಂದುವರೆಯುವುದು…

40 views