ಹಿರಿಯರಿಗೆ ತಲೆ ತಗ್ಗಿಸಿ ನಡೆದಷ್ಟು ದಿನ ನಮ್ಮ ಏಳಿಗೆ ನಿಶ್ಚಿತ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 58


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ಮನುಷ್ಯ ಎಲ್ಲಾ ಕಾಲದಲ್ಲಿಯೂ ತಲೆ ತಗಿಸಿಯೇ ಇರುತ್ತಾನೆ. ಬಾಲ್ಯದಲ್ಲಿ ನೆಲ ನೋಡಿ ನಡೆಯುತ್ತಾನೆ. ಯೌವ್ವನದಲ್ಲಿ ಸ್ನೇಹಿತರನ್ನು ಕಂಡಾಗ ನಮಸ್ಕರಿಸುತ್ತಾನೆ. ಹಿರಿಯರ ಕಾಲಿಗೆ ಬೀಳುತ್ತಾನೆ. ದೇವರಿಗೆ ನಮಸ್ಕರಿಸುತ್ತಾನೆ. ನಾನು ತಲೆ ತಗ್ಗಿಸುವುದೇ ಇಲ್ಲ ಎಂಬ ಮನುಷ್ಯನಿಗೆ ಅಹಂಕಾರವಿದೆ ಎಂಬ ಭಾವನೆ ಬರುತ್ತದೆ. ಮನುಷ್ಯನಿಗೆ ಅಹಂಕಾರ ಬಂದರೆ, ಏಳಿಗೆಯನ್ನು ಕುಂಠಿತಗೊಳಿಸುತ್ತದೆ. ಸ್ವಾರ್ಥದ ಭಾವನೆಗಳು ಹುಟ್ಟುತ್ತವೆ.


ನಾನ್ಯಾಕೆ ತಲೆ ತಗ್ಗಿಸಬೇಕು ಎಂಬ ಭಾವನೆ ಹುಟ್ಟಿದಾಗ ಆತ ಮನುಷ್ಯತ್ವದಿಂದಲೇ ದೂರವಾಗುತ್ತಾನೆ. ಗುರು, ಹಿರಿಯರು, ತಂದೆ, ತಾಯಿಯ ಮುಂದೆ ತಲೆ ತಗ್ಗಿಸಿ ನಡೆದಷ್ಟು ದಿನ ನಮ್ಮ ಏಳಿಗೆ ನಿಶ್ಚಿತ ಎಂದು ಅವರು ಹೇಳುತ್ತಿದ್ರು. ತಲೆ ತಗ್ಗಿಸಿ ನಡೆಯುವುದರಿಂದ ಯಶಸ್ಸು ದೊರಕುತ್ತದೆ ಹೊರತು, ತಲೆ ಎತ್ತಿ ನಡೆಯುವುದರಿಂದ ಬರುವುದಿಲ್ಲ ಎಂದು ರಾಜ್‌ಕುಮಾರ್‌ ಹೇಳುತ್ತಿದ್ರು. ಇದು ಅವರ ಅನುಭವ ಮತ್ತು ಜೀವನದಲ್ಲಿ ರೂಢಿಸಿಕೊಂಡು ಬಂದಂತಹ ಮಾತುಗಳು. ಅದು ರಾಜ್‌ಕುಮಾರ್‌ ಅವರ ಹಿರಿತನ. ಈ ಹಿರಿತನದಿಂದಲೇ ಅವರ ಜತೆ ಕೆಲಸ ಮಾಡುತ್ತಿದ್ದಂತಹ ಕಲಾವಿದರು ಅನೇಕ ಒಳ್ಳೆಯ ಗುಣಗಳನ್ನು ಅವರಿಂದ ಪಡೆದುಕೊಂಡಿದ್ದರು.ಮುಂದುವರೆಯುವುದು...

14 views