ಹಂಸಲೇಖ ಹೇಳಿದ ಎಚ್ಚರಿಕೆಯ ಮಾತು...

ಸುಮಾ - ಎಲ್. ಎನ್‌ ಶಾಸ್ತ್ರಿ ಲೈಫ್ ಸ್ಟೋರಿ ಭಾಗ-3
ಅವರ ಬಾಲ್ಯ ಐದಾರು ವರ್ಷಗಳವರೆಗೆ ಚೆನ್ನಾಗಿತ್ತು. ನಂತರ ಅವರ ತಮ್ಮ ಹುಟ್ಟಿದ ಮೇಲೆ ಇವರ ಕಡೆ ಗಮನ ಕಡಿಮೆಯಾಯಿತು. ಅವನಿಗೆ ಹುಟ್ಟುತ್ತಲೇ ಹೃದಯ ಸಂಬಂಧಿ ಕಾಯಿಲೆ ಇತ್ತು. ತಮ್ಮನನ್ನು ಪದೇ ಪದೇ ಬೆಂಗಳೂರು ಆಸ್ಪತ್ರೆಗೆ ಕರೆದುಕೊಂಡು ಬರಬೇಕಿತ್ತು. ಹಾಗಾಗಿ, ಇವರು ಅಜ್ಜ, ಅಜ್ಜಿ, ಅತ್ತೆ ಸೀತಮ್ಮ ಅವರ ಜೊತೆಗೆ ಹೆಚ್ಚು ಕಾಲ ಕಳೆಯುವಂತಾಯಿತು. ತಮ್ಮನ ಮೇಲೆಯೇ ಎಲ್ಲರ ಗಮನ ಇದ್ದ ಕಾರಣ, ಇವರ ಶಿಕ್ಷಣವು ಕುಂಟುತ್ತ ಸಾಗಿತು. ಆದರೆ, ಹಾಡುವುದನ್ನು ಎಂದಿಗೂ ಅವರು ಬಿಟ್ಟಿರಲಿಲ್ಲ.


ವಿಜಯ್‌ ಪ್ರಕಾಶ್‌ ಅವರ ತಾತ ಲಕ್ಷ್ಮಿಪತುಲು ಇವರ ಸಂಗೀತದ ಗುರು. ಮಂಡ್ಯಕ್ಕೆ ಕೆಲವೊಮ್ಮೆ ಅವರು ಬರುತ್ತಿದ್ದರು. ಕೆಲವೊಮ್ಮೆ ಇವರು ಹೋಗಿ ಮೈಸೂರಿನಲ್ಲಿ ಪಾಠ ಕಲಿಸಿಕೊಂಡು ಬರುತ್ತಿದ್ದರು. ಶಾಸ್ತ್ರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವೇಳೆ ತಂದೆ ಮತ್ತು ತಮ್ಮ ಇಬ್ಬರು ತೀರಿಕೊಂಡರು. ತಾಯಿ, ಅತ್ತೆಯ ಜವಾಬ್ದಾರಿ ಇವರ ಮೇಲೆ ಬಿತ್ತು. ಎಂಜಿನಿಯರಿಂಗ್‌ ಇಷ್ಟ ಇಲ್ಲದೇ ಇದ್ದರೂ, ತಾಯಿಯ ಒತ್ತಾಯಕ್ಕೆ ಹೋಗಿ ಸೇರಿಕೊಂಡರು. ಚಿಕ್ಕಮಗಳೂರಿನ ಕಾಲೇಜಿಗೆ ಸೇರಿಕೊಂಡ್ರು. ಅಲ್ಲಿ ಇವರು ಬಹಳ ಜನಪ್ರಿಯರಾದರಂತೆ.


ಯಾವುದೇ ಸಮಾರಂಭವಿದ್ದರೂ, ಇವರನ್ನೇ ಹಾಡಲು ಕರೆಯುತ್ತಿದ್ದರಂತೆ. ಬೇರೆಯವರು ಹಾಡುತ್ತಿದ್ದರೂ, ನಿಲ್ಲಿಸಿ, ಎಲ್ಲಾ ವಿಭಾಗದವರು ಇವರನ್ನೇ ಕರೆಯುತ್ತಿದ್ದರಂತೆ. ಎಲ್ಲರಿಗೂ ಇವರನ್ನು ಕಂಡರೆ ಅಷ್ಟು ಇಷ್ಟ. ಲೆಕ್ಚರ್‌ಗಳು ತುಂಬಾ ಸಹಕಾರ ನೀಡುತ್ತಿದ್ದರಂತೆ. ಎಂಜಿನಿಯರಿಂಗ್‌ ಎಲೆಕ್ಟ್ರಾನಿಕ್ಸ್‌ ವಿಭಾಗದಲ್ಲಿದ್ರು. ಹಂಸಲೇಖ ಅವರು ನೀನು ಒಂದು ದೋಣಿಯಲ್ಲಿ ಕಾಲಿಡು, ಎರಡೆರಡು ಆಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರಂತೆ. ಹಾಗಾಗಿ ಪದವಿಯನ್ನು ಪೂರ್ಣಗೊಳಿಸದೇ ಹಾಡುಗಾರಿಕೆಯನ್ನೇ ವೃತ್ತಿ ಮಾಡಿಕೊಂಡರು.ಮುಂದುವರೆಯುವುದು...

26 views