EP3: ರಾಜಹಂಸ ಬಸ್ಸು ಮತ್ತು ಕಾರ್ನರ್ ಸೀಟು! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ

Updated: Jan 24ಕಂಡಕ್ಟರ್: ಟಿಕೆಟ್!


ನಾನು: ದುರ್ಗ, ಒಂದು


ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಹೋಗುವ ರಾಜಹಂಸ ಬಸ್‍ನ ಕಾರ್ನರ್ ಸೀಟು ಹಿಡಿದು ಕೂತಿದ್ದೆ. ಶ್ವೇತ ವಸ್ತ್ರಧಾರಿ ಕಂಡಕ್ಟರ್ ಕೈಲಿದ್ದ ಟಿಕೆಟ್ ಮಷಿನ್‍ನಿಂದ ಟಿಕೆಟ್ ಮುದ್ರಿಸಿ ಹರಿದು ಕೈಗಿಟ್ಟರು. ಅದರ ಹಿಂದೆ ಉಳಿದ ಚಿಲ್ಲರೆ ಬರೆಯಲಾಗಿತ್ತು. ಆಗ ಬೆಳಿಗ್ಗೆ ಸುಮಾರು 6.30ರ ಸಮಯ. ಬೆಳಿಗ್ಗೆ ಬೇಗ ಎದ್ದು ರೆಡಿಯಾಗಿ ಮೆಜೆಸ್ಟಿಕ್ ತಲುಪಿ ಅಲ್ಲಿಂದ ಈ ಬಸ್ ಹತ್ತಿಕೊಂಡಿದ್ದೆ. 10 ಗಂಟೆಯಷ್ಟರಲ್ಲಿ ದುರ್ಗದ ವೇಣು ಅವರ ಮನೆಯಲ್ಲಿರುವುದು ನನ್ನ ಪ್ಲಾನಿಂಗ್ ಆಗಿತ್ತು. ಹಿಂದಿನ ರಾತ್ರಿ ಪೂರ್ತಿ ಶಾರ್ಟ್ ಫಿಲಂ ಒಂದರ ಎಡಿಟಿಂಗ್ ಮಾಡುತ್ತಿದ್ದೆನಾದ್ದರಿಂದ ನಿದ್ದೆ ಒದ್ದುಕೊಂಡು ಬರುತ್ತಿತ್ತು. ಬಸ್ ರಾಜಾಜಿನಗರ ಕೂಡ ತಲುಪಿರಲಿಲ್ಲವೇನೊ ನಿದ್ರೆಗೆ ಜಾರಿಬಿಟ್ಟಿದ್ದೆ. ಕಿವಿಯಲ್ಲಿ ಹಂಸಲೇಖ ಹಾಡುಗಳು ಜೋಗುಳ ಹಾಡುತ್ತಿದ್ದವು.

"15 ಮಿನಿಟ್‌ ಟೈಮ್‌ ಐತ್‌ ನೋಡ್ರಿ” ಕಂಡಕ್ಟರ್‌ ಸಾಹೇಬರ ಗಟ್ಟಿ ದನಿಗೆ ಅಲ್ಪ ಸ್ವಲ್ಪ ಎಚ್ಚರವಾಯಿತು. ಮೊಬೈಲ್‌ನಲ್ಲಿ ಟೈಮ್‌ ನೋಡಿಕೊಂಡೆ. 8.50 ತೋರಿಸುತ್ತಿತ್ತು. ಬೆಳಗಿನ ಜಾವವೇ ಎದ್ದಿದ್ದರಿಂದ ಹೊಟ್ಟೆ ನಿಧಾನಕ್ಕೆ ಚುರುಗುಡಲು ಪ್ರಾರಂಭವಾಗಿತ್ತಾದ್ದರಿಂದ ಇಳಿದು ಹೋಗಿ ಹೊಟ್ಟೆಗೆ ಏನಾದ್ರೂ ಸೇರಿಸೋಣ ಅನ್ನಿಸಿತ್ತಾದರೂ ಗಾಢವಾಗಿ ಎಳೆಯುತ್ತಿದ್ದ ನಿದ್ರೆ ನನ್ನನ್ನು ವಿಂಡೋ ಸೀಟ್‌ನಿಂದ ಮೇಲೇಳಲು ಬಿಡಲೇ ಇಲ್ಲ. ಕಿಟಕಿಯಿಂದಲೇ ಹೊರಗೆ ನೋಡಿದೆ. ಮತ್ತೆರಡು ಬಸ್ಸುಗಳು ಅಕ್ಕಪಕ್ಕ ನಿಂತಿದ್ದವು. ಎದುರುಗಡೆ ಕಾಣುತ್ತಿದ್ದ" ಉಲ್ಲಾಸ್‌ ರಿಫ್ರೆಷ್‌ಮೆಂಟ್‌" ಜನಭರಿತವಾಗಿದ್ದಂತೆ ಕಂಡಿತು. ಕಂಡಕ್ಟರ್‌ ಅನೌನ್ಸ್‌ಮೆಂಟ್‌ನಂತೆಯೇ 15 ನಿಮಿಷಗಳಲ್ಲಿಯೇ ರಾಜಹಂಸ ಮತ್ತೆ ದುರ್ಗದ ದಾರಿ ಹಿಡಿದು ಹೊರಟಿತು. "ಸಾರ್‌ ಐಬಿಹತ್ರ ನಿಲ್ಲಿಸ್ತೀರ?" ಕೇಳಿದೆ ಕಂಡಕ್ಟರ್‌ ಸಾಹೇಬರನ್ನ. ಹಿಂದಿನ ರಾತ್ರಿ ಬಿ.ಎಲ್‌ವೇಣು ಅವರಿಗೆ ಕರೆ ಮಾಡಿ" ನಾಳೆ ಬತೀದ್ದೀನಿ ಸಾರ್" ಎಂದು ತಿಳಿಸಿದಾಗ "ಐಬಿ ಹತ್ರ ಇಳ್ಕೊಂಡ್ರೆ ನಮ್‌ ಮನೆಗೆ ಬರೋಕ್‌ ಹತ್ರ" ಎಂದು ವೇಣು ಅವರು ತಿಳಿಸಿದ್ದರಿಂದ ಕಂಡಕ್ಟರನ್ನು ಹಾಗೆ ಕೇಳಿದ್ದೆ. "ನಿಲ್ಸೋಣ್‌ ಬಿಡ್ರಿ" ಬಂತು ಉತ್ತರ. ಸಮಯ 10 ಗಂಟೆಯ ಆಸುಪಾಸು. ವೇಣು ಅವರಿಂದ ನನಗೊಂದು ಕರೆ. "ಎಲ್ಲಿದ್ದೀರ ಪರಮೇಶ್ವರ್?"


"ಸಾರ್‌ ದುರ್ಗ ಇನ್ನು 8 ಕಿಮೀ ಅಂತ ಬೋಡ್‌ ಕಾಣಿಸ್ತಿದೆ"


"ಓ ಸರಿ ಬನ್ನಿ ಇನ್ನೊಂದ್‌ ಅಧ ಗಂಟೆ ಅಷ್ಟರಲ್ಲಿ ಬತೀರ"


ಕರೆ ಅಂತ್ಯವಾಯಿತು.

"ಐಬಿ ಯಾರ್‌ ಬರ್ರೀ" ಕಂಡಕ್ಟರ್‌ ದನಿ ಗಟ್ಟಿಯಾಗಿ ಕೇಳಿದ್ದರಿಂದ ನನ್ನ ಕ್ಯಾಮೆರಾ ಬ್ಯಾಗು ಎಳೆದುಕೊಂಡು ಬಾಗಿಲ ಕಡೆ ನಡೆದೆ. ಬಸ್‌ ನಿಂತಿತು. ನನ್ನ ಹಿಂದೆ ನಾಲ್ಕೈದು ಜನ ಅಲ್ಲಿ ಇಳಿದರು. ನಿಜ ಹೇಳಬೇಕೆಂದರೆ ದುರ್ಗಕ್ಕೆ ಬಂದದ್ದು ಅದೇ ಮೊದಲು ನಾನು. ಚಿತ್ರೀಕರಣ, ವೈಯುಕ್ತಿಕ ಕೆಲಸಗಳಿಗಾಗಿ ಅನೇಕ ಬಾರಿ ದುರ್ಗದ ಹೈವೇ ದಾಟಿ ಕರ್ನಾಟಕದ ಅನೇಕ ಭಾಗಗಳಿಗೆ ಹೋಗಿದ್ದರೂ ಪ್ರಾಜೆಕ್ಟ್‌ ನಿಮಿತ್ತ ದುರ್ಗಕ್ಕೆ ಬಂದದ್ದು ಇದೇ ಮೊದಲು. ಕೇಳುವ ಪ್ರಮೇಯವೇ ಬರಲಿಲ್ಲ. ಬಸ್‌ ಇಳಿದ ಕೂಡಲೇ ಎದುರಿಗೆ ಕಾಣಿಸಿತು "ಪ್ರವಾಸಿ ಮಂದಿರ" ಎಂಬ ಬೋರ್ಡು. ಮೊಬೈಲ್‌ನಲ್ಲಿ ಟೈಂ 10.30 ಆಗಿತ್ತು. ಹಸಿವು ತಡೆಯಲಾರದೆ ಅಲ್ಲೇ ರಸ್ತೆಯ ತಿರುವಿಗೆ ಇದ್ದ ಐದಾರು ಊಟದ ಗಾಡಿಗಳಲ್ಲಿ ಒಂದಕ್ಕೆ ನುಗ್ಗಿ ಇಡ್ಲಿ, ರೈಸ್‌ಬಾತ್‌ ಬೇಗಬೇಗ ತಿಂದು ವೇಣು ಅವರು ಹೇಳಿದ್ದ ಲ್ಯಾಂಡ್‌ಮಾಕ್ರ್‌ ಅವರಿವರಲ್ಲಿ ಕೇಳುತ್ತಾ ಅವರ ಮನೆ ಅರಸುತ್ತಾ ಹೊರಟೆ. ದುಗದ ಪ್ರವಾಸಿ ಮಂದಿರದಿಂದ ಬರೊಬ್ಬರಿ ಎರಡು ಕಿಲೊ ಮೀಟರ್‌ ದೂರದ ಮುನ್ಸಿಪಲ್ ಕಾಲೋನಿಯಲ್ಲಿ ವೇಣು ಅವರ ಮನೆ. ಅಷ್ಟು ಹಿರಿಯ ಲೇಖಕರೊಬ್ಬರನ್ನ ಬರಿಗೈಯಲ್ಲಿ ಹೋಗಿ ನೋಡುವುದು ಸರಿಯಲ್ಲವೇನೋ ಅನ್ನಿಸಿ ದಾರಿಯಲ್ಲಿ ಸಿಕ್ಕ ಅಂಗಡಿಯೊಂದರಿಂದ ಸ್ವಲ್ಪ ಬಾಳೆಹಣ್ಣು ಖರೀದಿಸಿ ಅವರ ಮನೆ ಎದುರಿಗೆ ತಲುಪಿದ್ದೆ. ಸ್ವತಃ ವೇಣು ಸರ್ ಗೇಟಿನ ಬಳಿ ಹಾಫ್‌ ಬನಿಯನ್‌, ಲುಂಗಿ ಹಾಗೂ ಕನ್ನಡಕ ಧರಿಸಿ ನನಗಾಗಿ ಕಾಯುತ್ತಾ ನಿಂತಿದ್ದರು! ಅಪ್ರಜ್ಞಾಪೂರ್ವಕವಾಗಿಯೇ "ನಮಸ್ಕಾರ ಸಾರ್‌, ನಾನೇ ಪರಮೇಶ್ವರ್‌" ಪರಿಚಯಿಸಿಕೊಂಡೆ. "ನಮಸ್ಕಾರ ಪರಮೇಶ್ವರ್. ಡಾಕ್ಯುಮೆಂಟರಿ ಮಾಡೋಕ್‌ ಬರೋರು ಯಾರೊ ವಯಸ್ಸಾದೋರ್‌ ಇರಬೇಕು ಅಂದುಕೊಂಡಿದ್ದೆ. ನೀವ್‌ ಇಷ್ಟ್‌ ಯಂಗ್‌ ಅಂಡ್‌ ಎನರ್ಜಿಟಿಕ್‌ ಇದ್ದೀರಲ್ರಿ. ಬನ್ನಿ ಒಳಗೆ..." ಪ್ರೀತಿ, ಆತ್ಮೀಯತೆಯಿಂದ ಒಳಗೆ ಕರೆದೋಯ್ದರು.
ಚಿಕ್ಕ ಆದರೆ ಚೊಕ್ಕದಾದ ಮನೆ. ಮಧ್ಯಮ ವಗದ ಒಬ್ಬ ಗೃಹಸ್ಥ ಜೀವನ ಪೂತಿ ಪ್ರಾಮಾಣ ಕವಾಗಿ ದುಡಿದು ಸ್ವಂತಕ್ಕೆ ಅಂತ ಕಟ್ಟಿಕೊಂಡರೆ ಹೇಗಿರುತ್ತದೊ ಹಾಗಿತ್ತು ಅವರ ಮನೆ. ಮನೆಯ ಒಳ ಹೊರಗೆ ಅನಗತ್ಯ ಆಡಂಬರ, ಪೀಠೋಪಕರಣಗಳು, ಐಶಾರಾಮ ಇತ್ಯಾದಿ ಇಲ್ಲದೆ ಅಗತ್ಯಕ್ಕೆ ತಕ್ಕಂತೆ ಸಜ್ಜುಗೊಳಿಸಿರುವ ಗಂಡ, ಹೆಂಡತಿ ಹಾಗೂ ಇಬ್ಬರು ಮಕ್ಕಳು ವಾಸಿಸಲು ಮಾಡಿಕೊಂಡಿರುವ ಸರಳ, ಸುಂದರ ಮನೆ ಅದು. ಹಾಗೆ ಒಳಗೆ ಹೋಗುತ್ತಲೇ ನಾನು ಗಮನಿಸಿದ ಮತ್ತೊಂದು ಮುಖ್ಯ ಅಂಶ "ವೇಣು ಅವರ ಬಲ ತೋಳಿನ ಮೇಲಿದ್ದ ದೊಡ್ಡ ಗಾಯದ ಗುರುತು. ತೋಳಿನ ಮೇಲೆ ಆಳವಾಗಿ ಕೊರೆದು ಹೋದ ಗುರುತು ನೋಡುತ್ತಲೇ ಬೆಚ್ಚಿ ಅದರ ಬಗ್ಗೆ ಕೇಳಿದೆ. "ಕೆಲವು ವರ್ಷಗಳ ಹಿಂದೆ ಆಕ್ಸಿಡೆಂಟ್‌ ಆಗಿತ್ತು. ಆಗ ಕೈ ಆಪರೇಷನ್‌ ಮಾಡಿದ ನಂತರ ಈ ಗುರುತು ಹಾಗೆ ಉಳಿದು ಹೋಯ್ತು" ಗಾಯದ ಹಿಂದಿನ ಕತೆ ವಿವರಿಸಿದರು.ಅಷ್ಟರಲ್ಲಾಗಲೇ ಮನೆ ಪ್ರವೇಶಿಸುತ್ತಲೇ ಸಿಗುವ ಅವರ ಬರವಣಿಗೆಯ ಕೋಣೆಯಲ್ಲಿದ್ದೆವು. ಹಳೆಯ ಟೇಬಲ್ಲು, ಸಾಮಾನ್ಯ ಚೇರ್. ನಾಲ್ಕೈದು ಪುಸ್ತಕಗಳು. ಒಂದು ರೈಟಿಂಗ್‌ ಪ್ಯಾಡ್, ಎರಡು ಪೆನ್ನು, ಸಾಹಸಸಿಂಹ ವಿಷ್ಣುವಧನ್‌ ಜೊತೆ ಅಭಿನಯಿಸಿದ್ದ ಒಂದು ಫೋಟೋ ವಿತ್‌ ಫ್ರೇಮ್‌ ಇವಿಷ್ಟೂ ಅವರ ರೈಟಿಂಗ್‌ ಟೇಬಲ್‌ ಮೇಲಿದ್ದ ವಸ್ತುಗಳು. ಕೋಣೆಯ ಇವರು ಕೂರುವ ಹಿಂಬದಿಗೆ ಕಪಾಟಿನಲ್ಲಿ ಮತ್ತಷ್ಟು ಪುಸ್ತಕಗಳು, ಗೋಡೆಯ ಮೇಲೆ ಪುಟ್ಟಣ್ಣ ಕಣಗಾಲ್‌ ಜೊತೆ ನಿಂತಿರುವ ಯಂಗ್‌ ಬಿ.ಎಲ್‌ ವೇಣು ಫೋಟೊ, ಜೊತೆಗೆ ಕೆಲವು ಪ್ರಶಸ್ತಿ ಪುರಸ್ಕಾರಗಳು, ಸ್ಮರಣಿಕೆಗಳು ರಾರಾಜಿಸುತ್ತಿದ್ದವು. ರಂಗಭೂಮಿಯವನಾದ್ದರಿಂದ ಈ ರೀತಿಯ ಕೀನ್‌ ಅಬ್ಸವೇಷನ್‌ ಬಗ್ಗೆ ನಮಗೆ ತರಬೇತಿ ಸಿಕ್ಕಿರುತ್ತದೆ. ನಾನು ನೇರವಾಗಿ ವಿಷಯಕ್ಕೆ ಎಂದುಬಿಡೋಣ ಎಂದುಕೊಂಡರೂ ಮಾತು ಬೆಳೆಯಲು ಇಬ್ಬರೂ ಇನ್‌ ಸ್ವಲ್ಪ ಒಪನ್‌ ಆಗಬೇಕು ಅನ್ನಿಸಿ ನಾನು ತೆಗೆದುಕೊಂಡು ಹೋಗಿದ್ದ ನಮ್ಮ ಇದರ ಮುಂಚೆ ಮಾಡಿದ್ದ ಸಾಕ್ಷ್ಯಚಿತ್ರಗಳ ಡಿವಿಡಿಗಳನ್ನು ಮತ್ತು ವಿಶಿಷ್ಠ ಸಾಹಿತಿ ಕೆ.ಪಿ ಪೂಣಚಂದ್ರ ತೇಜಸ್ವಿಯವರ ಡಾಕ್ಯುಮೆಂಟರಿ ಮಾಡಿದ ಅನುಭವ ಕಥನ ಕುರಿತ ಪುಸ್ತಕ "ತೇಜಸ್ವಿ ಸಿಕ್ಕರು" ಅವರ ಟೇಬಲ್‌ ಮೇಲಿಟ್ಟು "ಸರ್‌ ಇವು ನಾವು ಮಾಡಿರುವ ಡಾಕ್ಯುಮೆಂಟರಿಗಳು ಮತ್ತಿದು ನನ್ನ ಮೊದಲನೇ ಪುಸ್ತಕ. ನಿಮಗೆ ಕೊಡೋಕೆ ಅಂತ ತಂದೆ" ಎಂದೆ. "ಓಹ್‌ ಈ ಪುಸ್ತಕ ನೀವ್‌ ಬರೆದಿದ್ದ. ಪತ್ರಿಕೆಗಳಲ್ಲಿ ತುಂಬಾ ಒಳ್ಳೆ ಮಾತುಗಳು ಬರೆದಿದ್ದು ಓದಿದ್ದೆ ಕಣ್ರಿ" ಮೆಚ್ಚುಗೆ ವ್ಯಕ್ತಪಡಿಸಿದರು. ಡಾಕ್ಯುಮೆಂಟರಿಗಳನ್ನು ಕೈಯಲ್ಲಿ ಹಿಡಿದು ನೋಡುತ್ತಾ "ತುಂಬಾ ಒಳ್ಳೊಳ್ಳೆ ಪ್ರಾಜೆಕ್ಟ್ಸ್‌ ಮಾಡಿದ್ದೀರಿ ಹಾಗಾದ್ರೆ..." ಮತ್ತೊಂದು ಮೆಚ್ಚುಗೆಯ ಮಾತು ವೇಣು ಸರ್‌ ಕಡೆಯಿಂದ. ಅಷ್ಟರಲ್ಲಿ ಹುಡುಗನೊಬ್ಬ ಎರಡು ಕಪ್‌ ಕಾಫಿ ಹಿಡಿದು ಬಂದ. "ಕಾಫಿ ತಗೊಳಿ" ವೇಣು ಸರ್‌ ಒಂದು ಕಪ್‌ ಕೈಗಿಟ್ಟರು. ಕಾಫಿ ತಂದ ಆ ಹುಡುಗ ಬಹುಶಃ ಅವರ ಮಗ ಇರಬೇಕು ಯಾಕೊ ಅವತ್ತು ಕೇಳೋಕ್‌ ಮರೆತೆ. ಕಾಫಿ ಜೊತೆಗೆ ಮೂರ್ನಾಲ್ಕು "ಮತ್ತಿತರ" ವಿಷಯಗಳ ಬಗ್ಗೆ ಮಾತನಾಡಿಕೊಂಡೆವಾದ್ದರಿಂದ ಇನ್ನು ವಿಷಯಕ್ಕೆ ಬರೋದು ಸೂಕ್ತ ಎನ್ನಿಸಿ ಅವರ ಜೊತೆ ಚರ್ಚಿಸಬೇಕು ಎನ್ನುವ ಉದ್ದೇಶದಿಂದ ತೆಗೆದುಕೊಂಡು ಹೋಗಿದ್ದ ನೋಟ್ಸ್‌, ರಿಸಚ್‌ ಪೇಪರ್ಸ್‌, ಡಾಕ್ಯುಮೆಂಟರಿಯ ಡ್ರಾಫ್ಟ್‌ ಸ್ಕ್ರಿಪ್ಟ್‌ ಇತ್ಯಾದಿ ಎಲ್ಲವನ್ನೂ ತೆಗೆದು ಒಂದೊಂದಾಗಿ ಅವರ ಕೈಗಿಡುತ್ತಾ ವಿವರಿಸುತ್ತಾ ಹೋದೆ. ವೇಣು ಸಾರ್‌ ಬನಿಯನ್‌ ಮತ್ತು ಲುಂಗಿಯಲ್ಲೇ ಕೂತು ಕನ್ನಡಕದ ಕೊನೆಯಿಂದ ಅವೆಲ್ಲವನ್ನೂ ಕೂಲಂಕುಷವಾಗಿ ನೋಡಿ ಹೇಳಿದರು
"ನನ್‌ ಬಗ್ಗೆ ಆಲ್ರೆಡಿ ಎರಡು ಡಾಕ್ಯುಮೆಂಟರಿ ಮಾಡಿದ್ದಾರೆ. ಒಂದು ಸಾಹಿತ್ಯ ಅಕಾಡೆಮಿಯವರು, ಇನ್ನೊಂದು ವಾರ್ತಾ ಇಲಾಖೆಯವರು ಇರಬೇಕು ಸರೀಗ್‌ ನೆನನಪಿಲ್ಲ. ನನ್‌ ಹತ್ರ ಇದಾವೆ ಕೊಡ್ತೀನಿ ನಿಮಗೆ, ನೋಡಿ. ಆ ಡಾಕ್ಯುಮೆಂಟರಿಗಳನ್ನ ಮಾಡಿದವರು ನೇರವಾಗಿ ಕ್ಯಾಮೆರಾ ತಂದು ನನ್‌ ಮುಂದೆ ಇಟ್ಟು "ಹೇಳಿ ಸಾರ್‌ ನಿಮ್‌ ಲೈಫ್‌ ಪೂರ್ತಿ" ಅಂತ ಸುತ್ತಿಕೊಂಡು ಹೋಗಿ ಏನೇನೊ ಮಾಡಿ ಮುಗಿಸಿಬಿಟ್ರು. ಅಂತ ಎಫೆಕ್ಟಿವ್‌ ಆಗ್‌ ಏನಿಲ್ಲ ಬಿಡಿ ಅವು. ನೀವೂ ಹಾಗೇ ಮಾಡ್ತೀರ ಅಂದ್ಕೊಂಡಿದ್ದೆ. ನೀವ್‌ ನೋಡಿದ್ರೆ ಪೇಜ್‌ಗಟ್ಟಲೇ ರಿಸಚ್ರ್‌ ಮಾಡ್ಕೊಂಡಿದೀರ. ಅದೂ ಸಾಲದೇ ಈಗ ಡೌಟ್ಸ್‌ ಇದೆ ಕ್ಲಾರಿಫಿಕೇಷನ್‌ ಕೊಡಿ ಅಂತ ಬಂದಿದ್ದೀರಲ್ಲ! ಇಷ್ಟ ಆದ್ರಿ ಪರಮೇಶ್ವರ್! ಚೆನ್ನಾಗ್‌ ಮಾಡೇ ಮಾಡ್ತೀರ ಬಿಡಿ ನೀವು. ಯಾವ ಮನುಷ್ಯ ಪ್ರೊಸೆಸ್‌ ಚೆನ್ನಾಗ್‌ ಮಾಡ್ತಾನೊ ಅವನು ಮಾಡೊ ಕೆಲಸದ ರಿಸಲ್ಟ್‌ ಚೆನ್ನಾಗೇ ಇರುತ್ತೆ. ಹೇಳಿ ಏನ್‌ ಕ್ಲಾರಿಫಿಕೇಷನ್‌ ಬೇಕು ನಿಮಗೆ?" ವೇಣು ಸರ್‌ ಕೇಳಿದರು. ನಾನು ಗುರುತು ಹಾಕಿಕೊಂಡಿದ್ದ ಪ್ರಶ್ನೆಗಳು, ಅನುಮಾನಗಳು ಇತ್ಯಾದಿ ಎಲ್ಲವನ್ನೂ ಒಂದೊಂದಾಗಿ ಅವರ ಮುಂದೆ ಇಟ್ಟು ಕೇಳುತ್ತಾ ಹೋದೆ. ಅವರು ಸುದೀಘವಾಗಿ ಉತ್ತರಿಸುತ್ತಾ ಹೋದರು. ಅವರ ವಿವರಣೆ ಎಷ್ಟು ವಿವರವಾಗಿ, ಆಸಕ್ತಿಯುತವಾಗಿದ್ದವೆಂದರೆ ಕ್ಯಾಮೆರಾ ಇಟ್ಟು ಅದನ್ನ ರೆಕಾಡ್‌ ಮಾಡಿಕೊಂಡಿದ್ದರೆ ಅದೇ ದೊಡ್ಡ ದಾಖಲೆ ಆಗಿರುತ್ತಿತ್ತೇನೊ? ಆದರೆ ಪರವಾಗಿಲ್ಲ ಅವರು ಅಂದು ನನ್ನೊಂದಿಗೆ ಹಂಚಿಕೊಂಡ ಅಷ್ಟೂ ವಿಷಯಗಳನ್ನ ಮುಂದೆ ಕೆಲವು ದಿನಗಳ ನಂತರ ತಂಡದೊಂದಿಗೆ ಮತ್ತೆ ಅವರ ಮನೆಗೆ ಹೋಗಿ ಚಿತ್ರೀಕರಣ ಮಾಡಿದಾಗಲೂ ಅದಕ್ಕಿಂತಲೂ ಹೆಚ್ಚು ವಿವರವಾಗಿ ಹಂಚಿಕೊಂಡರು. ಹೀಗೆ ಬೆಳಿಗ್ಗೆ 11ಕ್ಕೆ ಪ್ರಾರಂಭವಾದ ನಮ್ಮ ಮಾತು ಕತೆ ಮುಗಿದದ್ದು ಸಂಜೆ 4.30 ಸುಮಾರಿಗೆ.
ಅಲ್ಲಿಯವರೆಗೂ ನಮ್ಮಿಬ್ಬರಿಗೂ ಊಟ, ತಿಂಡಿಗಳ ಪರಿವೇ ಇರಲಿಲ್ಲ ಎಂದರೆ ಉತ್ಪ್ರೇಕ್ಷೆಯಲ್ಲ. ಅಷ್ಟು ಇಂಟರೆಸ್ಟಿಂಗ್‌ ಆದ ಚಿತ್ರರಂಗದ ಪಯಣದ ಅನೇಕ ಸಂಗತಿಗಳನ್ನು, ಸ್ವಾರಸ್ಯಕರ ಸಂಗತಿಗಳನ್ನು ವೇಣು ಸರ್‌ ಹೇಳುತ್ತಾ ಹೋದರು. ವೇಣು ಸರ್‌ ಅವರ ಪ್ರೆಸೆಂಟೇಷನ್‌ ಸ್ಕಿಲ್ಸ್‌ ಬಗ್ಗೆ ನಾನಿಲ್ಲಿ ವಿಶೇಷವಾಗಿ ಹೇಳಲೇಬೇಕು. ನೀವು ಬೇಕಿದ್ದರೆ ಯಾವುದಾದರೂ ಸಂಗತಿಯ ಬಗ್ಗೆ ಮಾತು-ಕತೆಗೆ ಅವರ ಎದುರು ಕೂತು ನೋಡಿ, ಹೇಳಬೇಕಿರುವ ವಿಷಯವನ್ನ ತುಂಬಾ ಪರಿಣಾಮಕಾರಿಯಾಗಿ, ಬೇಸರವಾಗದಂತೆ ರಸವತ್ತಾಗಿ ವಿವರಿಸುವ ಒಂದು ವಿಶೇಷ ಸ್ಕಿಲ್‌ ವೇಣು ಸರ್‌ ಅವರಿಗಿದೆ. ಉದಾಹರಣೆಗೆ ಕಳೆದುಹೋದ ಯಾವುದಾದರೊಂದು ಘಟನೆಯ ಬಗ್ಗೆ ವಿವರಿಸುತ್ತಾರೆ ಎಂದುಟ್ಟಿಕೊಳ್ಳೋಣ, ಆ ಘಟನೆಯ ಪಾತ್ರಧಾರಿಗಳು ಯಾರ್ಯಾರು? ಆ ಘಟನೆಯ ಪ್ರಾರಂಭ ಹೇಗಾಗಿತ್ತು? ಆ ಘಟನೆಯ ಪಾತ್ರಗಳೆಲ್ಲಾ ಏನೇನು ಹೇಳಿದರು? ಯಾವ ಧಾಟಿಯಲ್ಲಿ ಹೇಳಿದರು? ಎಂದು ಆಯಾ ವ್ಯಕ್ತಿಗಳ ಡೈಲಾಗ್‌ ಡೆಲಿವರಿ ಸ್ಟೈಲ್‌ನಲ್ಲೇ ವಿವರಿಸುವ ವಿಶಿಷ್ಠವಾದ ತಾಕತ್ತು ಅವರದ್ದು. ಬಹುಶಃ ಈ ವಿಶೇಷ ಸ್ಕಿಲ್‌ ಅವರಿಗೆ ಸಿದ್ದಿಸಿರುವುದು ಅವರೊಬ್ಬ ಯಶಸ್ವಿ ಸಂಭಾಷಣೆಕಾರ, ಚಿತ್ರಕತೆಗಾರರಾಗಿ ನೂರಾರು ಕತೆಗಳನ್ನು ಅನೇಕ ನಿರ್ದೇಶಕರಿಗೆ, ನಟರಿಗೆ, ನಿರ್ಮಾಪಕರಿಗೆ ಸುಮಾರು 40 ವಷಗಳ ಕಾಲ ಡೈಲಾಗ್‌ ಸಹಿತ ವಿವರಿಸಿರುವ ಅನುಭವದ ಕಾರಣಕ್ಕೆ ಇರಬಹುದು ಎಂಬುದು ನನ್ನ ಗ್ರಹಿಕೆ. ಹಾಗೆ ಅಂದು ಬೆಳಿಗ್ಗಿನಿಂದ ಸಂಜೆಯವರೆಗೂ ಅವರ ಬದುಕಿನ ಕುರಿತು ಅನೇಕ ವಿಷಯಗಳನ್ನು ಚರ್ಚಿಸಿ ಸಮಾಧಾನವಾದ ನಂತರ "ಹೊರಡ್ತೇನೆ ಸರ್. ಕೆಲವೇ ದಿನಗಳಲ್ಲಿ ಟೀಂ ಕರ್ಕೊಂಡು ಶೂಟಿಂಗಿಗೆ ಬರ್ತೇನೆ" ಎಂದು ಅವರಿಗೆ ತಿಳಿಸಿ ಹೊರಡಲನುವಾದೆ. ವೇಣು ಸರ್‌ ತುಂಬಾ ತಡವಾಗಿದೆ. ನಾನು ಸಮಯ ಮರೆತುಬಿಟ್ಟೆ. ಊಟ ಮಾಡಿಕೊಂಡು ಹೋಗಿ ಎಂದು ವಿಪರೀತ ಬಲವಂತ ಮಾಡಿದರೂ ದುರ್ಗದ ಕೋಟೆಗೆ ಹೋಗಿ ಅಲ್ಲಿ ಶೂಟಿಂಗಿಗೆ ಏನೇನು ಫಾರ್ಮಾಲಿಟಿಗಳಿವೆ ಎಂದು ಮಾಹಿತಿ ಪಡೆಯಬೇಕಿದ್ದ ತುರ್ತು ಕೆಲಸ ನೆನಪಾಗಿ ಅವರ ಪ್ರೀತಿಯ