EP4: ನಿಪ್ಪಾಣ ವಸಂತ್ ಮತ್ತು ನವಾಜುದ್ದೀನ್ ಸಿದ್ದಿಕಿ! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ

Updated: Jan 24, 2021"ಬಿ.ಎಲ್ವೇಣು ಅಂದರೆ ಹಳೆ ಆರ್ಟಿಸ್ಟ್ಅಲ್ವ ಸಾರ್?" ಹಿಂದಿನ ಸೀಟಿನಿಂದ ತೂರಿಬಂದ ಈ ಪ್ರಶ್ನೆಕಿವಿಗೆ ಬಿದ್ದ ಕೂಡಲೇ ಪಾರ್ಲೆಫ್ಯಾಕ್ಟರಿ ಟೋಲ್ ದಾಟಿ ಹೋಗುತ್ತಿದ್ದನಮ್ಮ ಗಾಢ ಹಸಿರು ಬಣ್ಣದಇಂಡಿಕಾ ಕಾರಿನ ಬ್ರೇಕನ್ನು ನನ್ನಕಾಲು ಸಡನ್ನಾಗಿ ತುಳಿದ ಕಾರಣಕಾರು ಗಕ್ಕನೆ ನಿಂತಿತು. ಕಾರುನಿಂತ ಕೂಡಲೇ ಕಾರ್ ಡ್ರೈವ್ಮಾಡುತ್ತಿದ್ದ ನಾನು ಮತ್ತು ನನ್ನಪಕ್ಕ ಕೂತು ಅರ್ಧಂಬರ್ಧ ತೂಕಡಿಸುತ್ತಿದ್ದರವಿರಾಜ್ ಇಬ್ಬರೂ ಹಿಂತಿರುಗಿ ಪ್ರಶ್ನೆಕೇಳಿದ "ಆ ಮಹಾಶಯನ"ನ್ನು ಗುರಾಯಿಸಿದೆವು. ಅವನುಅಷ್ಟೇ ಶಾಂತಚಿತ್ತನಾಗಿ "ಆರ್ಟಿಸ್ಟ್ ಅಲ್ವ? ಹಂಗಾದ್ರೆಡೈರೆಕ್ಟ್ರ?" ಅಂತ ಮತ್ತೊಂದು ಪ್ರಶ್ನೆಯಬಾಣ ಬಿಟ್ಟು ನಮ್ಮಿಬ್ಬರನ್ನೂಮತ್ತೊಂದು ಬಾರಿ ಘಾಸಿಗೊಳಿಸಿದ. "ರೀವಸಂತ್ ಅವರೆ ಏನ್ರೀ ನೀವು? ಯಾರ ಬಗ್ಗೆ ಡಾಕ್ಯುಮೆಂಟರಿಮಾಡಕ್ ಹೋಗ್ತಿದ್ದೀವಿ ಅಂತ ಗೊತ್ತೇ ಇಲ್ವ?" ಮುನಿಸಿನಲ್ಲಿ ರವಿರಾಜ್ ಕೇಳಿದರು. "ಅಲ್ಲನಿನ್ನೆ ಬಾಸ್ ಹೇಳ್ತಿದ್ರು ಫೋನಲ್ಲಿ. ಮರೆತುಹೋಯ್ತು ಅದಕ್ಕೆ ಕೇಳಿದೆ" ಎಂದುಯಾವ ಉದ್ವೇಗವೂ ಇಲ್ಲದೆಉತ್ತರಿಸಿದ ಆ ವಸಂತ್! "ಬಿ.ಎಲ್ ವೇಣು ಅವರುಲೇಖಕ ರೀ. ಸಿನಿಮಾಗಳಿಗೆ ಸ್ಕ್ರೀನ್‍ಪ್ಲೇ ಡೈಲಾಗ್ ಬರಿತಾರೆ. ಚಿ. ಉದಯಶಂಕರ್ ಇದ್ರಲ್ಲಆ ತರ" ಚುಟುಕಾಗಿವಿವರಿಸಿದರು ರವಿರಾಜ್. "ಓಹ್ ಹಂಗ ಸಾರ್? ಬಟ್ ಅಂತವರ ಬಗ್ಗೇನೂಡಾಕ್ಯುಮೆಂಟರಿ ಮಾಡಿಸ್ತಾರ ಗೌರ್ಮೆಂಟು?" ಮತ್ತೊಂದುಪ್ರಶ್ನೆಯ ಬ್ರಹ್ಮಾಸ್ತ್ರ ಬಿಟ್ಟ ವಸಂತ್. "ಅಂತವರಬಗ್ಗೆ ಅಂದ್ರೆ ಏನೋ ಮೀನಿಂಗು? ರೈಟ್ರು ಅಂದ್ರೆ ಏನೂ ಅಲ್ಲಅನ್ನಂಗ್ ಮಾತಾಡ್ತಿದ್ದೀಯ" ನಾನು ಅವನಿಗೇ ಮರುಪ್ರಶ್ನೆ ಕೇಳಿದೆ. "ಹಂಗಲ್ಲ ಸಾರ್ ನಾನುಈ ತರ ಸಿನಿಮಾದಲ್ಲಿಬರೆಯೋರ ಬಗ್ಗೆ ಡಾಕ್ಯುಮೆಂಟರಿ ನೋಡಿಲ್ಲಅದ್ಕೆ ಕೇಳ್ದೆ" ಉತ್ತರಿಸಿದ ವಸಂತ್. "ಮಾಡಬಾರದುಅಂತ ರೂಲ್ಸ್ ಏನಾದ್ರೂಇದ್ಯೇನೊ? ಹಂಗ್ ನೋಡುದ್ರೆ ಸಿನಿಮಾಗಳರೈಟರ್ಸ್ ಬಗ್ಗೆನೇ ಫಸ್ಟ್ ಡಾಕ್ಯುಮೆಂಟರಿಮಾಡಬೇಕಿರೋದು. ಯಾಕಂದ್ರೆ ಸಿನಿಮಾಗಳ ಯಶಸ್ಸುಅಥವ ಸೋಲು ಬಹಳಸಲ ರೈಟಿಂಗ್ ಮೇಲೆನಿಂತಿರುತ್ತೆ. ಉಳಿದ ಬಿಲ್ಡಪ್ ಎಲ್ಲಾಆಮೇಲೆ ಬರೋದು" ಉತ್ತರಿಸಿದೆ. "ಕರೆಕ್ಟು ಸಾರ್" ವಸಂತ್ಒಪ್ಪಿಕೊಂಡ ಅಥವ ಹಾಗೆ ನಟಿಸಿದ. ಹೇಗೊ ಕಾರ್ ನಿಲ್ಲಿಸಿದ್ದೇವೆ. ಒಂದುಚಾ ಕುಡಿದು ಹೋಗೋಣಅನ್ನಿಸಿ ಇಳಿದು ಅಲ್ಲೇ ಹೈವೇಪಕ್ಕದ ಗಾಡಿಯಲ್ಲಿ ಮೂರು ಚಹಾಪಡೆದು ಹೀರತೊಡಗಿದೆವು. ಈ ರೀತಿಡಾಕ್ಯುಮೆಂಟರಿ ಮಾಡಲು ಹೊರಟಾಗಲೆಲ್ಲಾ ನಾನುತುಂಬಾ ಎಂಜಾಯ್ ಮಾಡುವ ಸಂಗತಿಯೇಇದು "ಜರ್ನಿ". ಜಯಂತ್ ಕಾಯ್ಕಿಣ ಅವರು ತೇಜಸ್ವಿಯವರ ಡಾಕ್ಯುಮೆಂಟರಿಮಾಡುತ್ತಿದ್ದ ಸಂದರ್ಭದಲ್ಲಿ ಅವರ ಸಂದರ್ಶನ ಮಾಡಿದಾಗಈ ಮಾತು ಹೇಳಿದ್ದರು. ಕರ್ವಾಲೋ ಕಾದಂಬರಿ ಬಗ್ಗೆ ಮಾತನಾಡುತ್ತಾಅವರು ಹೇಳಿದ್ದರು "ಕರ್ವಾಲೊ ಕಾದಂಬರಿ ನೂರಕ್ಕೂಹೆಚ್ಚು ಪುಟ ಓದಿ ನೀವುಆ ಗುಡ್ಡದ ತುದಿಹೋಗಿ ತಲುಪ್ತೀರಿ. ಕೊನೆಯಲ್ಲಿ ಇನ್ನೇನು ಹಾರುವಓತಿಕ್ಯಾತ ಸಿಕ್ಕೇಬಿಡ್ತು ಜಗತ್ತಿನ ರಹಸ್ಯ ಗೊತ್ತಾಗೇಹೋಯ್ತು ಅನ್ನುವಷ್ಟರಲ್ಲಿ ಅದು ಇದ್ದಕ್ಕಿದ್ದಂತೆ ಹಾರಿಕಣ ವೆಯ ಯಾವುದೊಮೂಲೆಗೆ ಹೋಗಿ ಕಣ್ಮರೆ ಆಗ್ಬಿಡ್ತದೆ. ಆಗ ಡಾ. ಕರ್ವಾಲೊಅವರನ್ನ ಹೊರತುಪಡಿಸಿ ಉಳಿದವರೆಲ್ಲಾ ಅಯ್ಯೋ ಎಷ್ಟು ಕಷ್ಟಪಟ್ಟುಬಂದಿದ್ವಿ ಇಲ್ಲಿವರೆಗೂ. ಈಗ ಈಓತಿ ಕೈಗೆ ಸಿಗದೆಹಾರಿಹೋಯ್ತಲ್ಲ. ಬಂದಿದ್ದೇ ವೇಸ್ಟ್ ಆಗೋಯ್ತು" ಅಂತ ಚಡಪಡಿಸುತ್ತಿದ್ದಾಗ ಕಥಾನಾಯಕಡಾ. ಕರ್ವಾಲೊ ಹೇಳ್ತಾರೆ "ನಾವು ಹಾರುವ ಓತಿ ಹುಡುಕ್ತಾಬಂದ ಜರ್ನಿ ವೇಸ್ಟ್ಆಯ್ತು ಅಂತ ಯಾಕ್ ಅಂದ್ಕೊಳ್ತೀರಿ? ಅದು ನಮ್ ಕೈಗೆಸಿಗದೇ ಹೋದ್ರೇನಂತೆ? ಕೊನೆ ಪಕ್ಷ ನೋಡೋಕಾದ್ರೂಸಿಕ್ತಲ್ಲ. ಅಷ್ಟೇ ಸಾಕು. ಈಜರ್ನಿ ಇಷ್ಟ ಆಯ್ತಲ್ಲ. ಬನ್ನಿಮತ್ತೊಂದ್ ಸಲ ಬರೋಣ" ಅಂತ ಹೇಳಿ ನಿರಾಸೆಗೊಂಡಿದ್ದಉಳಿದವರನ್ನೆಲ್ಲಾ ಕರ್ಕೊಂಡ್ ಹೋಗ್ತಾರೆ. ಅಂದರೆಒಂದು ಗುರಿಯನ್ನ ಹೋಗಿ ತಲುಪುವುದಕ್ಕಿಂತಲೂಆ ಗುರಿಯ ಕಡೆಗಿನದಾರಿಯನ್ನ ಎಂಜಾಯ್ ಮಾಡೋದು ತುಂಬಾಮುಖ್ಯ ಅನ್ನೋದನ್ನ ತೇಜಸ್ವಿ ಕರ್ವಾಲೋಕಾದಂಬರಿ ಮೂಲಕ ನಮಗೆ ಕಲಿಸಿದರು" ಎಂದು ಹೇಳಿದ್ದರು. ಎಂಥ ಅದ್ಭುತ ಚಿಂತನೆ! ಅದು ಅವತ್ತಿನಿಂದ ನನ್ನಬದುಕಿನ ಮೂಲ ಮಂತ್ರವೇ ಆಗಿಹೋಗಿತ್ತು. ಪ್ರತಿಯೊಬ್ಬ ಮನುಷ್ಟನಿಗೂ ಅದರಲ್ಲೂ ಕಲೆಯ ಕ್ಷೇತ್ರದಲ್ಲಿಕೆಲಸ ಮಾಡುವ ನನ್ನಂಥವರಿಗೆ ಸೋಲು, ನಿರಾಸೆ, ಅವಮಾನ ಸಹಜ. ಆದರೆಕೈಗೊಂಡ ಕಾರ್ಯದಲ್ಲಿ ಯಶಸ್ಸು ಸಿಗಲಿಲ್ಲ ಎಂದುಕೊರಗುವುದರ ಬದಲು ಆ ಗುರಿಯೆಡೆಗಿನದಾರಿ ಅಂದರೆ ಪ್ರೊಸೆಸ್ ಎಂಜಾಯ್ಮಾಡುತ್ತಾ ಪ್ರತಿ ಹೆಜ್ಜೆಯನ್ನೂ ಸರಿಯಾದರೀತಿಯಲ್ಲಿ ಇಡುತ್ತಾ ಹೋದರೆ ಹಿಡಿದಕೆಲಸ ಕೈಗೂಡುವ ಸಾಧ್ಯತೆಗಳೂ ಹೆಚ್ಚು. ಒಂದು ವೇಳೆ ಸೋಲುಂಟಾದರೂ ಪ್ರೊಸೆಸ್ಎಂಜಾಯ್ ಮಾಡಿದ್ವಿ ಬಿಟ್ಟಾಕು ಎಂದುಸಮಾಧಾನ ಮಾಡಿಕೊಳ್ಳಬಹುದು. ಹಾಗಾಗಿ ಈ ರೀತಿಶೂಟಿಂಗ್ ಪ್ರೊಸೆಸ್ ಎಂಜಾಯ್ ಮಾಡುವುದುನಮ್ಮ ಅಭ್ಯಾಸ. ಇನ್ನು ಈಜೀನಿಯಸ್ ವಸಂತ್ ಯಾರು? ಅಂತಹೇಳಲೇಬೇಕು. ವಸಂತ ನನ್ನ ಕ್ಲೋಸ್ಫ್ರೆಂಡ್! ನ್ಯಾಷನಲ್ ಸ್ಕೂಲ್ ಆಫ್ಡ್ರಾಮಾದಲ್ಲಿ ನಾವಿಬ್ಬರೂ ಸಹಪಾಠಿಗಳು. ಸಮಾನಆಸಕ್ತಿ, ಅಭಿರುಚಿ ನಮ್ಮಿಬ್ಬರನ್ನೂ ಬಹುಬೇಗಸ್ನೇಹಿತರನ್ನಾಗಿಸಿತ್ತು. ಅವನು ಮೂಲತಃ ಬೆಳಗಾಂಜಿಲ್ಲೆ ನಿಪ್ಪಾಣ ಯ ಅಪ್ಪಟದೇಸಿ ಹುಡುಗ. ನಿನ್ನ ಹಿನ್ನೆಲೆಏನೊ ಮಾರಾಯ? ಅಂತಕೇಳಿದಾಗ "ಅಪ್ಪಿ ನಾನು ಇಂಗ್ಲೀಷ್ಎಂಎ ಮಾಡಿದ್ದೀನಪ್ಪಿ!" ಅಂತಹೇಳಿ ಶಾಕ್ ಹೊಡೆಸಿದ್ದ. ಯಾಕಂದ್ರೆತಲೆ ಚೆಚ್ಚಿಕೊಂಡರೂ ಕೂಡಅವನ ಬಾಯಿಂದ ಇಂಗ್ಲೀಷ್ಹಾಳಾಗೋಗ್ಲಿ ನಿಪ್ಪಾಣ ಕನ್ನಡಹೊರತುಪಡಿಸಿದರೆ ಮತ್ತೇನೂ ಬರುತ್ತಿರಲಿಲ್ಲ! ನಾನುಒಂದೆರಡು ಬಾರಿ ಈ ಬಗ್ಗೆಕೇಳಿದ್ದೆ. ಆಗವನು "ಬರುತ್ತೆ ಅಂತ ಮಾತಾಡಿಪ್ರೂವ್ ಮಾಡಬೇಕಿಲ್ಲ ಅಪ್ಪಿ" ಅಂತ ಹೇಳಿ ಎಸ್ಕೇಪ್ಆಗ್ತಿದ್ದ. ಆದರೆ ಮುಂದೆ ಒಂದುಕ್ಲಿಷ್ಟ ಸಂದರ್ಭದಲ್ಲಿ "ನನಗೆ ಅಷ್ಟಾಗಿ ಇಂಗ್ಲೀಷ್ಬರಲ್ಲ. ಆದರೆ ಒಪನ್ ಯೂನಿವರ್ಸಿಟಿಯಲ್ಲಿಡಿಸ್ಟೆನ್ಸ್ ಇಂಗ್ಲೀಷ್ ಎಂಎ ಮಾಡಿರೋದುನಿಜ" ಅಂತ ಕ್ಲಾರಿಫಿಕೇಷನ್ ಕೊಟ್ಟ. ಒಟ್ಟನಲ್ಲಿ ಡಿಸ್ಟೆನ್ಸ್ ಲರ್ನಿಂಗ್ ಮೂಲಕ ಇಂಗ್ಲೀಷ್ಎಂಎ ಮಾಡಿದ್ದಕೊ ಏನೋಇಂಗ್ಲೀಷ್ ಭಾಷೆ ಅವನಿಂದ ಡಿಸ್ಟೆನ್ಸ್ಕಾಯ್ದುಕೊಂಡಿತ್ತು. ಜೊತೆಗೆ ಅವನು ನೋಡಲುಥೇಟ್ ನವಾಜುದ್ದೀನ್ ಸಿದ್ದಿಕಿ ರೀತಿಯೇ ಕಾಣುತ್ತಿದ್ದ. ಮತ್ತು ಸಿದ್ದಿಕಿಯನ್ನು ಫಾಲೋ ಮಾಡಲು ಬಯಸುತ್ತಿದ್ದ. "ಅವನೂ ಕೂಡ ತನ್ನಂತೆ ತುಂಬಾಬಡತನ ಎದುರಿಸಿ, ಹೋರಾಡಿ ದೊಡ್ಡನಟನಾದವನು. ತಾನೂ ಕೂಡ ಒಂದಲ್ಲಒಂದು ದಿನ ಅವನಂತೆ ದೊಡ್ಡನಟನಾಗುವುದರಲ್ಲಿ ಅನುಮಾನವಿಲ್ಲ" ಎಂದು ಮತ್ತೆ ಮತ್ತೇಹೇಳುತ್ತಿದ್ದ. ಹೀಗಾಗಿ ನಾವು ಅವನನ್ನ "ಕನ್ನಡದ ನವಾಜುದ್ದೀನ್ ಸಿದ್ದಿಕಿ" ಎಂದು ಕರೆಯುತ್ತಾ ಉತ್ಸಾಹತುಂಬುವ ಪ್ರಯತ್ನ ಮಾಡುತ್ತಿದ್ದೆವು. ಎನ್‍ಎಸ್‍ಡಿ ಕೋರ್ಸುಮುಗಿದ ನಂತರ ನಮ್ಮ ಜೊತೆಗೆಸಾಕ್ಷ್ಯಚಿತ್ರ, ಕಿರುಚಿತ್ರ, ಜಾಹೀರಾತು ಇತ್ಯಾದಿ ನಾನುಏನೇ ಮಾಡಿದರೂ ಜೊತೆಗೇಕೆಲಸ ಮಾಡುತ್ತಾ ಬಂದಿದ್ದ. ಹಾಗಾಗಿನಮ್ಮ ಕ್ಯಾಮೆರಾಮನ್ ರವಿರಾಜ್ ಅವರಿಗೆ ಈನಮ್ಮ ವಸಂತ್ ಉರುಫ್ ಕನ್ನಡದನವಾಜುದ್ದೀನ್ ಸಿದ್ದಿಕಿ ಪರಿಚಯವಾದ. ಮೊದಮೊದಲುರವಿ ಅವನು ಹೇಳಿದ್ದನ್ನೆಲ್ಲಾಬಹಳ ಸೀರಿಯಸ್ಸಾಗಿ ನಂಬಿಕೊಂಡುಗೌರವ ಬೆಳೆಸಿಕೊಂಡಿದ್ದರು. ಜೊತೆಗೆ ನಾನೂ ರವಿಇಬ್ಬರೂ ನಮಗೆ ಪರಿಚಯವಿದ್ದ ಕೆಲವರುನಿರ್ದೇಶಕರ ಬಳಿ ನಮ್ಮ ನವಾಜುದ್ದೀನ್ಸಿದ್ದಿಕಿಗೆ ಅವಕಾಶ ಕೊಡಲು ಸಾಧ್ಯವೇಕೇಳಿದ್ದ ಪರಿಣಾಮ ಅವರ ಸಿನಿಮಾಗಳಚಿಕ್ಕಪುಟ್ಟ ಪಾತ್ರಗಳನ್ನು ಅವನಿಗೆ ಕೊಡಲು ಮನಸ್ಸುಮಾಡಿದ್ದರು. ಆದರೆ ನಮ್ಮ ಸಿದ್ದಿಕಿ "ಏಯ್ ಚಿಕ್ಕಪುಟ್ಟ ಕ್ಯಾರೆಕ್ಟರು ಮಾಡ್ಕೊಂಡ್ ಟೈಮ್ ವೇಸ್ಟ್ಮಾಡಬಾರದು ಅಪ್ಪಿ. ಮಾಡಿದ್ರೆ ಹೀರೋಆಗೇ ಮಾಡಬೇಕು" ಅಂತಆ ಎಲ್ಲಾ ಚಿಕ್ಕಆಫರ್‍ಗಳನ್ನು ರಿಜೆಕ್ಟ್ ಮಾಡಿಬಿಟ್ಟ! "ಲೊ ನೀನು ಫಾಲೋ ಮಾಡ್ತಿರೊಒರಿಜಿನಲ್ ಸಿದ್ದಿಕಿ ಕೂಡ ಚಿಕ್ಕಪುಟ್ಟಪಾತ್ರ ಮಾಡ್ತಿದ್ದವನೇ" ಅಂದರೆ "ಅದು ಅವನ ದಾರಿಇದು ನನ್ ದಾರಿ" ಅಂತ ಮರುಪ್ರಶ್ನಿಸಲಾಗದ ಉತ್ತರಕೊಟ್ಟು ನಮ್ಮ ಬಾಯಿ ಮುಚ್ಚಿಸಿಬಿಡುತ್ತಿದ್ದ. ಹಾಗಾಗಿ ನಮ್ಮ ರವಿರಾಜ್ ಅವನನ್ನುಕಂಡಾಗಲೆಲ್ಲಾ “ಹೇಗಿದ್ದೀರ ನವಾಝ್?” ಎಂದುಹಾಸ್ಯ ಮಾಡುತ್ತಿದ್ದರು. ಆದರೆ ವಸಂತ್ ಅವನ್ನೆಲ್ಲಾಮನಸ್ಸಿಗೆ ಹಾಕಿಕೊಳ್ಳುವ ಮನುಷ್ಯನೇ ಅಲ್ಲ. ಯಾರುಏನ್ ಬೇಕಾದ್ರೂ ಹೇಳಿಕೊಳ್ಳಿ, ನಾನು ಇರೋದ್ ಹೀಗೆ ಎಂಬಂತೆಇದ್ದುಬಿಡುತ್ತಿದ್ದ. ಅಂದು ದುರ್ಗದ ಕಡೆಹೊರಟಾಗಲೂ ಇಂಥದ್ದೇ ಪ್ರಶ್ನೆ ಕೇಳಿರವಿ ಅವರ ನಿದ್ದೆಓಡಿಸಿ ಅವರನ್ನು ಹಾಸ್ಯದ ಮೂಡ್‍ಗೆ ತಂದಿದ್ದ. ಅದೇ ಮೂಡ್‍ನಲ್ಲಿರವಿ ವಸಂತನನ್ನು ಚಿತ್ರವಿಚಿತ್ರಪ್ರಶ್ನೇ ಕೇಳಿ ರೇಗಿಸತೊಡಗಿದರು. ನಮ್ಮಗ್ರೀನ್ ಇಂಡಿಕಾ ದುರ್ಗದ ಕಡೆಓಟ ಮುಂದುವರೆಸಿತು.
ಮಾರ್ಗಮಧ್ಯದಲ್ಲಿ ರವಿ ಅವರ ಜೊತೆಕೋಟೆಯ ಒಳಗೆ ಕ್ಯಾಮೆರಾ ತೆಗೆದುಕೊಂಡುಹೋಗಲು ಇರುವ ನಿರ್ಬಂಧಗಳ ಬಗ್ಗೆತಿಳಿಸಿದೆ. “ಫೋಟೋ ತೆಗೆಯೊ ಕ್ಯಾಮೆರಾತಗೊಂಡ್ ಹೋಗಬಹುದು ಅಂದ್ರಲ್ವ?” ಕೇಳಿದರುರವಿ. “ಹಾ ತಗೊಂಡ್ಹೋಗಬಹುದು ಸಾರ್. 25 ರೂಪಾಯಿ ಟಿಕೆಟ್ತಗೊಂಡು” ನಾನು ಉತ್ತರಿಸಿದೆ. “ಹಂಗಾದ್ರೆಟೆನ್ಷನ್ ಯಾಕೆ? ನಮ್ದು 5ಡಿತಾನೆ. ಇದು ಕೂಡ ಫೋಟೋಗ್ರಫಿಕ್ಯಾಮೆರಾನೇ! ಫೋಟೋ ತೆಗಿತೀವಿ ಅಂತಒಳಗಡೆ ಹೋಗೋಣ. ಯಾರಾದ್ರೂ ಬಂದುಕೇಳೋಕೆ ಮುಂಚೆ ಕೆಲಸ ಮುಗಿಸಿಬಂದು ಬಿಡೋಣ ಎಂದರು ರವಿ. “ಹೌದಲ್ವ?” ಅನ್ನಿಸಿತು ನನಗೆ. ದೊಡ್ಡದೊಂದುತಲೆ ನೋವು ಹಾಗೆನಿವಾರಣೆಯಾಗಿತ್ತು. ಸಿರಾ ಬಳಿ ತಿಂಡಿಕಾಫಿ ಮುಗಿಸಿ ದುರ್ಗದ ವೇಣುಸರ್ ಅವರ ಮನೆತಲುಪಿದಾಗ ಬೆಳಿಗ್ಗೆ ಹೆಚ್ಚುಕಡಿಮೆ 10 ಗಂಟೆ. ಹೇಳಿದ್ದ ಸಮಯಕ್ಕೆ ಸರಿಯಾಗಿ ಅವರಮನೆ ತಲುಪಿಕೊಂಡಿದ್ದೆವು. ಎಂದಿನಂತೆವೇಣು ಸರ್ ಅವರೇ ಬಂದುನಮ್ಮನ್ನು ಸ್ವಾಗತಿಸಿದರು. ಆದರೆ ಯಾಕೋ ಕೊಂಚಕುಂಟುತ್ತಿದ್ದರು. ರವಿ ಹಾಗೂ ವಸಂತ್‍ರನ್ನು ಅವರಿಗೆ ಪರಿಚಯಿಸಿದೆ. ಆತ್ಮೀಯತೆಯ ಹಸ್ತಲಾಘವ ಕೊಟ್ಟು ಒಳಗೆಕರೆದೊಯ್ದರು ಸರ್. ಹೋಗಿ ಎಂದಿನಂತೆಅವರ ಬರೆಯುವ ಕೋಣೆಕೂತೆವು. ಸಮಯ ವ್ಯರ್ಥ ಮಾಡುವಹಾಗೇ ಇರಲಿಲ್ಲ.“ಬನ್ನಿ ಸರ್ಕೋಟೆ ಒಳಗಡೆ ಹೋಗೋಣ” ಅಂದಾಗ ವೇಣು ಸರ್, “ಸಾರಿ ಪರಮೇಶ್ವರ್. ನನಗೆ ನಿನ್ನೆಯಿಂದ ಸಿಕ್ಕಾಪಟ್ಟೆಕಾಲು ನೋವು. ಓಡಾಡೋದು ಕಷ್ಟಆಗ್ತಿದೆ. ಏನ್ಮಾಡೋದು? ಇಲ್ಲೇ ಮಾಡಬಹುದ ನೋಡಿ” ಮನವಿಯ ಧ್ವನಿಯಲ್ಲಿ ಪರಿಸ್ಥಿತಿ ವಿವರಿಸಿದರು. ಅವರುಬಾಯಿ ಬಿಟ್ಟು “ಕಾಲು ನೋವುಅಂದ ನಂತರವೂ “ಇಲ್ಲನೀವು ಬರಲೇಬೇಕು ಅಂತ ಹೇಳೋದುಹೇಗೆ? ಸರಿ ಅವರ ಬರವಣಗೆಯ ಕೋಣೆಯಲ್ಲೇ ಬ್ಲಾಕ್ಫಿಕ್ಸ್ ಮಾಡಿ ವೇಣು ಅವರಬದುಕಿನ ಜರ್ನಿ ಕೇಳಲು ಅನುವಾದೆವು. ರವಿರಾಜ್ ಅವರ ಮುಂದಿದ್ದ ಕ್ಯಾಮೆರಾ 64 ಜಿಬಿಗಳ ಕಾರ್ಡ್‍ನೊಳಕ್ಕೆ ಅವರಬದುಕನ್ನು ತುಂಬಿಕೊಳ್ಳಲು ಸನ್ನಧ್ದವಾಗಿತ್ತು. ವೇಣು ಸರ್ ಒಳಹೋಗಿ ಅವರ ಸಿಗ್ನೇಚರ್ ಶೈಲಿಯಅರ್ಧ ತೋಳಿನ ಷರ್ಟ್ ಹಾಕಿಕೊಂಡುಬಂದು ತಮ್ಮ ಕತೆ ಹೇಳಲುದೇಹ, ಮನಸ್ಸು ಶೃತಿ ಮಾಡಿಕೊಂಡುಕೂತರು.


81 views