EP5: 100% ಡಾಕ್ಟ್ರು ಆದರೆ ಡಿಗ್ರಿ ಇನ್‍ಕಂಪ್ಲೀಟ್! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ

Updated: Jan 24, 2021“ನಮಸ್ತೆ ಸರ್, ನಿಮ್ಮಬದುಕು ಹೇಗೆ ಶುರುವಾಯ್ತು ಅಲ್ಲಿಂದಪ್ರಾರಂಭಿಸಿಬಿಡೋಣ?” ಮೊದಲ ಪ್ರಶ್ನೆ ಕೇಳಿದೆ,

ವೇಣುಸರ್: ಬದುಕು ಅಂದ್ರೆ ಯಾವಬದುಕು? ಸಿನಿಮಾ ಬದುಕೆ? ಆರೋಗ್ಯಇಲಾಖೆಯ ನನ್ನ ವೃತ್ತಿ ಜೀವನದಬದುಕೆ? ಸಾಹಿತ್ಯದ ಬದುಕೆ? ಅಥವನನ್ನ ವೈಯುಕ್ತಿಕ ಬದುಕೆ?

ನಾನು: ಅದಕ್ಕಿಂತಲೂ ಇನ್ನೂ ಹಿಂದೆ ಹೋಗೋಣಸರ್. ನಿಮ್ಮ ಹುಟ್ಟು, ಬಾಲ್ಯದಬದುಕಿನಿಂದ ಪ್ರಾರಂಭಿಸಿಬಿಸಿಬಿಟ್ಟರೆ ಒಳ್ಳೇದು.ವೇಣು: (ನಕ್ಕು) ಬಾಲ್ಯ ಒಂತರ ಚೆನ್ನಾಗಿತ್ತಪ್ಪ. ಹಸಿವಿನ ಮಧ್ಯೆ ಕೂಡ ಸಂತೋಷವಾಗಿದ್ವಿನಾವು! ನನ್ನ ತಂದೆ ರಂಗಭೂಮಿಕಲಾವಿದರಾಗಿದ್ದರು. ಅವರು ಒಂತರ ಸಕಲಗುಣಸಂಪನ್ನ ಅಂತ ಹೇಳಬೇಕೊ ಏನೊಗೊತ್ತಿಲ್ಲ. ಎಲ್ಲಾ ಚಟಗಳು ಇದ್ದವುಅವರಿಗೆ. ಅದೆಲ್ಲದರ ಮಧ್ಯೆ ಹೆಂಡತಿಮಕ್ಕಳನ್ನ ಸಾಕಬೇಕಿತ್ತು ಅವರು. ನಮ್ಮನೇಲಿ ನಾನು, ನನ್ನ ತಂಗಿ, ನನ್ ತಮ್ಮ, ನಮ್ಮಮ್ಮ ನಾಲಕ್ ಜನ ಇದ್ವಿ. ಅವರು ಅವರ ಖರ್ಚು ವೆಚ್ಚಗಳನ್ನಕಳೆದು, ಸುಖಲೋಲುಪತೆಗಳಿಗೆಲ್ಲಾ ಬಳಸಿ ಒಂದು ವೇಳೆಅಲ್ಪಸ್ವಲ್ಪ ದುಡ್ಡು ಉಳಿದ್ರೆ ನಮಗ್ಕಳಿಸ್ತಿದ್ರು. ಹಾಗಾಗಿ ನಮ್ಮಮ್ಮ ನಮ್ಮನ್ನಬಹಳ ಕಷ್ಟಪಟ್ಟು ಸಾಕಿದ್ರು. ನನಗೆ ಕಾಲೇಜಲ್ಲಿ ಓದಬೇಕಾದರೆ ಡಾಕ್ಟರ್ಆಗಬೇಕು ಅಂತ ಆಸೆ. ಸಿಬಿಝೆಡ್ತಗೊಂಡಿದ್ದೆ ನಾನು. ಬಾಟನಿ, ಝೂವಾಲಜಿಮತ್ತೆ ಕೆಮಿಸ್ಟ್ರಿ. ಆದ್ರೆ ನನಗೆ ಡಾಕ್ಟ್ರಾಗಕ್ಆಗ್ಲಿಲ್ಲ. ಡಾಕ್ಟ್ರು ಹಾಳಾಗೋಗ್ಲಿ ಡಿಗ್ರಿಕೂಡ ಮುಗ್ಸಕ್ ಆಗ್ಲಿಲ್ಲ. ಬಟ್ ಆದರೂ ನಾನುಡಾಕ್ಟರ್. ಬಿ.ಎಲ್ವೇಣು ಆದೆ ಮುಂದೆ ಒಂದುಸಂದರ್ಭದಲ್ಲಿ. ಅದು ಬೇರೆ ವಿಚಾರಬಿಡಿ” ನಗು ಮುಂದುವರೆಯಿತು. “ಬಹಳತಮಾಷೆ ಅಂದರೆ ಕಾಲೇಜ್ ಓದ್ಬೇಕಾದ್ರೆಜಿ.ಟಿ ರಂಗಸ್ವಾಮಿಅಂತ ಇದ್ರು ಒಬ್ರುಪ್ರೊಫೆಸರ್ರು. ತುಂಬಾ ಅವಕಾಶಗಳನ್ನ ಒದಗಿಸಿಕೊಟ್ರು. ಅದಕ್ಕಿಂತ ಮುಂಚೆ ನಾನುನಾಟಕದಲ್ಲಿ ಪಾತ್ರ ಮಾಡಬೇಕು ಹಾಡೇಳಬೇಕುಅಂತ ತುಂಬಾ ಆಸೆಇತ್ತು. ಎಷ್ಟೇ ಪ್ರಯತ್ನ ಪಟ್ರುಹೈಸ್ಕೂಲ್‍ವರೆಗೂ ಅದು ಆಗಲಿಲ್ಲ. ಯಾಕಂದ್ರೆ ನಾನು ಕರ್ರಗೆ ಪೀಚುಪೀಚಲಾಗಿದ್ದೆ. ಈಗಿನಂಗ್ ದಪ್ಪ ಇರ್ಲಿಲ್ಲ ಆಗ. ಪಾತ್ರ ಕೇಳಿದ್ರೆ “ಏಯ್ ನಿನಗೇನ್ಪಾತ್ರ ಕೋಡೋದು ಹೋಗಯ್ಯ” ಅಂತ ಬೈತಿದ್ರು ಮೇಷ್ಟ್ರುಗಳು. ಆ ಸಂದರ್ಭದಲ್ಲಿ ಮಾಸ್ಟರ್ಹಿರಣಯ್ಯ ಅವರ ಕಂಪನಿ ನಮ್ಮಚಿತ್ರದುರ್ಗಕ್ಕೆ ಬಂದಿತ್ತು. ಆ ಕಂಪನಿನಲ್ಲಿನಮ್ ತಂದೆ ಪಾತ್ರಮಾಡ್ತಿದ್ರು “ವಸಂತ ಶೇಖರ” ಅಂತ “ದೇವದಾಸಿ” ನಾಟಕದಲ್ಲಿ. ತುಂಬಾ ಒಳ್ಳೆ ನಟನೆಮಾಡೋರು. ಅಲ್ಲಿ ಯಾರೋ ಪಾತ್ರಮಾಡೋರು ತಪ್ಪಿಸಿಕೊಂಡ್ ಹೋಗಿದ್ದಕ್ಕೊ ಅಥವ ಕೈಕೊಟ್ಟಿದ್ದಕ್ಕೊ ನಾಟಕನಿಲ್ಲೊ ಸ್ಥಿತಿಗೆ ಬಂದಿತ್ತು. ಯಾರ್ಮಾಡಬೇಕು ಈಗ? ರಾತ್ರಿ ನಾಟಕಬೆಳಿಗ್ಗೆ ಇಲ್ಲ ಆ ಹುಡುಗಿ! ಚಿಕ್ಕುಡುಗಿ ಪಾತ್ರ. ನನಗೆ ಮಾಡೋಉತ್ಸಾಹ ಇತ್ತು ಆದರೆ ಮಾಡ್ತೀನಿಅಂತ ಹೇಳೊ ಧೈರ್ಯಇರಲಿಲ್ಲ. ಕೊನೆಗೆ ನಮ್ಮಪ್ಪನೇ ಕೇಳಿದ್ರು “ಎನೋ ಮಾಡ್ತಿಯೇನೋ?” ಅಂತ. “ಮಾಡ್ತೀನಿ” ಅಂದೆ. ಹಂಗದ್ ತಕ್ಷಣಮಾಸ್ಟರ್ ಹಿರಣಯ್ಯನೋರು ಬಂದು ಒಳಗ್ ಕರ್ಕೊಂಡ್ಹೋದ್ರು. ನಂದೇನ್ ಕಂಡಿಷನ್ ಅಂದ್ರೆ “ಇದೇ ಪ್ಯಾಂಟು ಷರ್ಟು ಹಾಕ್ಕೊಂಡ್ಹುಡುಗನ ಪಾತ್ರ ಮಾಡ್ಬಹುದೆ ಹೊರತುಹುಡುಗಿ ಪಾರ್ಟ್ ಮಾಡಲ್ಲ. ಹೆಂಗೊಅದು ಭಿಕ್ಷದವರ ಪಾತ್ರತಾನೆ, ನಾನು ಭಿಕ್ಷುಕ ಕಂಡಂಗೆಕಾಣ ್ತೀನಿ. ತೆಳ್ಳಗ್ಬೇರೆ ಇದೀನಲ್ಲ” ಅಂತ ಹೇಳಿದೆ. ಅವರುಪರ್ಮಿಷನ್ ಕೊಟ್ರು “ಏನೋ ಹಾಳಾಗೋಗ್ಲಿ” ಅಂತ. ಅವರೂ ಒಂದ್ ಮಾತ್ಹೇಳಿದ್ರು “ನೋಡಪ್ಪ ಸಾಯಂಕಾಲದಷ್ಟರಲ್ಲಿ ಡೈಲಾಗ್ಕಲಿತು ಒಪ್ಪಿಸಬೇಕು” ಅಂತ. ಪಾಪ ಹಿರಣಯ್ಯನವರೇಕೂರಿಸ್ಕೊಂಡ್ ಡೈಲಾಗ್ ಎಲ್ಲಾ ಹೇಳ್ಕೊಟ್ರು. ಅವರೇ ನಂಗ್ ಫಸ್ಟ್ ಡೈರೆಕ್ಟ್ರು.“ನೋಡಪ್ಪ ಒಂದ್ ಹಾಡುಕೂಡ ಇದೆ. ಅದನ್ನೂಕಲಿಬೇಕು ನೀನು. ಆಮೇಲೆ ನೀನುಅಭಿನಯಿಸೋದು ಪಾರ್ಥಸಾರಥಿ ಅವರ ಜೊತೆ” ಪಾರ್ಥಸಾರಥಿ ಅಂದ್ರೆ ಆ ಕಾಲದದೊಡ್ಡ ಕಲಾವಿದರು. ತುಂಬಾ ಗೌರವಇತ್ತು ಎಲ್ರಿಗೂ ಅವರ ಬಗ್ಗೆಆಗ. “ಅವರ ಜೊತೆ ಆ್ಯಕ್ಟಿಂಗ್ಮಾಡೋವಾಗ ಡೈಲಾಗ್ ಮರೆತು ಬೆಬೆಬೆಮಾಡಿಬಿಟ್ಟೀಯ” ಅಂತ ಹಿರಣಯ್ಯನೋರು ಕೇಳಿಕೊಂಡ್ರು. ಪಾರ್ಥಸಾರಥಿ ಅವರು “ಜೊತೆಗೆ ಸುಮ್ನೆಬಾರಪ್ಪ. ನಾನು ಹಾಡೇಳ್ತಾ ಹೋಗ್ತೀನಿ. ನೀನು ಹಿಂದೆ ಬಾ. ಡೈಲಾಗ್ಮರೆತ್ರೂ ಚಿಂತೆ ಮಾಡ್ಬೇಡ. ನಾನ್ಹೆಂಗೊ ಅಡ್ಜೆಸ್ಟ್ ಮಾಡ್ತೀನಿ” ಅಂತ ಹೇಳಿದ್ರು. ನೋಡಿಆ ಸೀನು “ಮಕ್ಮಲ್ಟೋಪಿ” ನಾಟಕದ್ದು, ಆ ಸೀನ್ಬಿಟ್ಟು ನಾಟಕ ಮಾಡಕ್ ಬರಲ್ಲ. ಸೈಡ್‍ವಿಂಗ್ಸ್‍ನಲ್ಲಿ ದೊಡ್ಡದೊಡ್ಡ ಆರ್ಟಿಸ್ಟ್‍ಗಳೆಲ್ಲಾ ನಿಂತ್ಕೊಂಡ್‍ಬಿಟ್ಟಿದ್ರು. ನಾನ್ ಸ್ಟೇಜಿಗೆ ಹೋಗಿಜನ ನೋಡಿ ಏನಾದ್ರೂಹೆದರಿಕೊಂಡ್ ಓಡಿ ಬಂದ್‍ಬಿಟ್ರೆನನ್ನನ್ನ ಹಿಡಿದು ಮತ್ತೆ ಸ್ಟೇಜಿಗೆದಬ್ಬಕ್ಕೆ! ವೇಣು ಸರ್ ಜೊತೆಗೆಅವರ ಅನುಭವಗಳನ್ನು ಚಿತ್ರೀಕರಿಸುತ್ತಾಕೂತಿದ್ದ ನಾವೆಲ್ಲರೂ ನಕ್ಕೆವು. ಸರ್ಮುಂದುವರೆಸಿದರು. ಹಿರಣಯ್ಯನೋರು ಹೇಳ್‍ಬಿಟ್ಟಿದ್ರು “ಜನನೋಡಿ ಓಡಿ ಬಂದ್‍ಬಿಡಮರಿ. ಏನಾದ್ರೂ ಆಗ್ಲಿ ಸೀನ್ಮುಗ್ಸೇ ಬರಬೇಕು ನೀನು” ಅಂತ. “ನಾನ್ ಕೈಹಿಡ್ಕೊಂಡ್ ಇರ್ತೀನಿ ಬಿಡಿ” ಅಂದ್ರು ಪಾರ್ಥಸಾರಥಿ ಅವರು. ನಾಟಕದಲ್ಲಿ ಅವರದ್ದು ಕುರುಡನ ಪಾತ್ರ. ನಾನು ಹಾಡೇಳ್ತಾ ಅವರನ್ನ ನೆಡಸ್ಕೊಂಡ್ಹೋಗೋದು ಡೈಲಾಗ್ ಹೇಳೋದು ಇವೆಲ್ಲಾಇತ್ತು. ನಾನು ಆರಾಮಾಗ್ ಮಾಡಿದೆಅದನ್ನ. ಹಾಡು ಬಂದಾಗ ಹಾಡೇಳ್ದೆ. ಹಾಡೇಳೋದು ನನಗ್ ಅಭ್ಯಾಸ ಇತ್ತು. ಆಮೇಲೆ ಆ ನಾಟಕದಒಂದು ಸೀನ್‍ನಲ್ಲಿ ದುಡ್ಡೆಸಿತಾರೆಕೂತಿರೊ ಪ್ರೇಕ್ಷಕರು. ಅದನ್ನ ಅಭಿನಯ ಮಾಡ್ತಾನೇ, ಹಾಡು ಹೇಳ್ತಾನೇ ಆರಿಸಬೇಕು. ಸೀನ್‍ನ ಒಂದುಭಾಗ ಅದು. ಆದರೆಮಾಸ್ಟರ್ ಹಿರಣಯ್ಯನವರು ಹೇಳಿದ್ರು “ಅದೆಷ್ಟು ದುಡ್ಡಾದ್ರೂನಾನ್ ಕೊಡ್ತೀನ್ ಕಣಯ್ಯ. ನೀನುದುಡ್ಡು ಆರಿಸಕ್ ಹೋಗ್ಬೇಡ. ಆಮೇಲ್ದುಡ್ಡು ಎತ್ತಿಕೊಳ್ತಾ ಡೈಲಾಗ್ ಮರ್ತುಬಿಟ್ರೆ ನಾನ್ಬಾಯ್ ಬಡ್ಕೊಳ್‍ಬೇಕಾಗುತ್ತೆ” ಅಂದ್ರು. ಆದರೆ ನಾನ್ಬಿಡಲಿಲ್ಲ ಹಾಡೇಳಿ, ಅಭಿನಯ ಮಾಡಿದುಡ್ಡು ಹಾಕಿದಾಗ ಅದನ್ನೂ ಆರಿಸ್ಕೊಂಡುಚೆನ್ನಾಗೇ ಮಾಡ್‍ಬಿಟ್ಟೆ. ಹಿರಣಯ್ಯನೋರುಗ್ಖುಷಿ ಆಗೋಯ್ತು. ಆಮೇಲ್ ಸುಮಾರುಮೂರು ತಿಂಗಳು ಆ ನಾಟಕನಡೀತು. ಪೂರ್ತಿ ಮೂರ್ ತಿಂಗಳುಆ ನಾಟಕ ನಾನೇಮಾಡ್ತಾ ಹೋದೆ ಆ ಪಾತ್ರ. ಹಿಂಗಿದ್ದಾಗ ನಮ್ಮಮ್ಮನಿಗ್ ಗಾಬರಿ! “ಓ ಇವನುಇನ್ನೇನ್ ನಾಟಕ ಸೇರ್ಕೊಂಡ್ ಬಿಡ್ತಾನಪ್ಪಓದಲ್ಲ, ಬರೆಯಲ್ಲ” ಅಂತ. “ಇಲ್ಲಮ್ಮ ಸುಮ್ನಿರುನೀನು. ನಾನೇನ್ ನಾಟಕಕ್ಕೆ ಹೋಗಲ್ಲ. ತಕ್ಷಣಕ್ಕೆ ಸ್ವಲ್ಪ ದುಡ್ಡು ಬರುತ್ತೆ. ನಾನ್ ಓದ್ತೀನಿ. ಧೈರ್ಯವಾಗಿರು” ಅಂತ ಹೇಳಿ ಆಮೂರು ತಿಂಗಳು ಮುಗಿಸ್ದೆ. ಅದಾದ್ಮೇಲ್ಕೂಡ ಹೈಸ್ಕೂಲ್‍ನಲ್ಲಿವಾರ್ಷಿಕೋತ್ಸವ ಅದು ಇದು ಮಾಡ್ತಿರ್ತಾರಲ್ಲಅಲ್ಲಿ ಹೋಗಿ ಪಾತ್ರ ಕೇಳಿದ್ರೆ “ಇಲ್ಲಿ ಯಾವ್ದೂ ಭಿಕ್ಷುಕುನ್ ಪಾರ್ಟ್ಇಲ್ಲ ಕೊಡಕ್ ಹೋಗು” ಅಂತ ಹಂಗಿಸಿ ಕಳಿಸಿಬಿಡೋರುಕೆಲವು ಮೇಷ್ಟ್ರುಗಳು. ಒಂದ್ಸಾರಿ ಒಬ್ನೇ ಡ್ಯಾನ್ಸ್ಆದ್ರೂ ಮಾಡಣ ಅಂತ ಹೇಳಿಕೊಂಡಮಾಮ ಅಂತ ಬರುತ್ತೆ, ಆಡ್ರೆಸ್ ಹಾಕೊಂಡ್ ಹೋಗಿ ನಿಂತಿದ್ದೀನಿ. “ನೀನ್ ಹೆಸರು ಬರೆಸಿಲ್ಲ” ಅಂತ ಸ್ಟೇಜಿಗೆ ಹತ್ತಿಸಲಿಲ್ಲ. ಆಕ್ಚುಯಲಿ ಅವರು ನನ್ ಹೆಸರುಬರೆಸೋಕ್ ಹೋದಾಗ ಬರ್ಕೊಂಡಿಲ್ಲ. “ಸಾರ್ನನಗೇನೂ ಪ್ರೈಝ್ ಬ್ಯಾಡ. ಸುಮ್ನೆಸ್ಟೇಜ್ ಮೇಲೆ ಈ ಕಡೆಯಿಂದಆ ಕಡೆ ಹೋಗ್ಬಂದ್‍ಬಿಡ್ತೀನಿ” ಅಂತ ಬೇಡಿಕೊಂಡರು, ಅತ್ತರುಕೂಡ ಆ ಮನುಷ್ಯನನ್ನ ಸ್ಟೇಜೇ ಹತ್ತಿಸಲಿಲ್ಲ. ಜಿಟಿಪುಟ್ಟಸ್ವಾಮಿ ಅಂತ ಅವರ ಹೆಸರು, ಜಿಟಿ ಮೇಷ್ಟ್ರು ಅಂತ ಕರಿತಿದ್ರು. ಆಮೇಲೆ ಮುಂದೆ “ವೇಣು ನನ್ಹೆಮ್ಮೆಯ ಶಿಷ್ಯ” ಅಂತ ತುಂಬಾ ಕಡೆವೇದಿಕೆಗಳಲ್ಲಿ ಹೇಳ್ಕೊಂಡ್ರು ಬಿಡಿ ಅದ್ ಬೇರೆ ವಿಷ್ಯ.
ಹೀಗೆನಾನು ಹಪಾಹಪಿಸ್ತಾ ಇದ್ದೆ ಅವಕಾಶಗಳಿಗೋಸ್ಕರ. ಅಲ್ಲಿನಮ್ ಕಾಲೇಜ್‍ನಲ್ಲಿರಂಗಸ್ವಾಮಿ ಅಂತ ಪ್ರೊಫೆಸರ್ರು ಅವರಿಗೆಸಮಯ ಇರ್ತಿರ್ಲಿಲ್ಲ ಅಂತಹೇಳಿ “ಏಯ್ ನೀನ್ ನೋಡ್ಕೊಂಡ್ಬಿಡಪ್ಪ. ನೀನೇ ನಾಟಕ ಮಾಡಿಸ್‍ಬಿಡಪ್ಪ” ಅಂತ ಹೇಳೋಕೆ ಶುರುಮಾಡಿದ್ರು. ಅಷ್ಟೊತ್ತಿಗೆ ನಾನು ಒಂದು ಆರ್ಕೆಸ್ಟ್ರಾಮಾಡ್ಕೊಂಡಿದ್ದೆ”. ಆರ್ಕೆಸ್ಟ್ರಾವಿಷಯ ವೇಣು ಸರ್ ಪ್ರಸ್ತಾಪಿಸಿದಾಗನನ್ನ ಕಿವಿ ಚುರುಕಾದವು. ಏಕೆಂದರೆವೇಣು ಅವರ ಆತ್ಮಕಥನ ಓದಿನೋಟ್ಸ್ ಮಾಡಿದಾಗ ಸವಿತಾ ತುಂಬಾಎಕ್ಸೈಟ್ ಆಗಿ ಹೇಳಿದ ವಿಷಯವೇ “ಆರ್ಕೆಸ್ಟ್ರಾ” ಕುರಿತದ್ದಾಗಿತ್ತು. ಈ ಆರ್ಕೆಸ್ಟ್ರಾ ವಿಶೇಷಯಾಕೆಂದರೆ ಈ ತಂಡದಒಬ್ಬರು ಗಾಯಕಿಯನ್ನ ವೇಣು ಅವರುಗಾಢವಾಗಿ ಪ್ರೀತಿಸಿ ಭಗ್ನಪ್ರೇಮಿಯಾದದ್ದು. ಹಾಗಾಗಿಈ ಪಾಯಿಂಟ್ ಅನ್ನುವಿವರವಾಗಿ ಅವರಿಂದಲೇ ಕೇಳಲು ನಾನುಉತ್ಸುಕನಾಗಿದ್ದೆ. ಹಾಗಾಗಿ ವೇಣು ಸರ್ “ಆರ್ಕೆಸ್ಟ್ರಾ” ಅಂದ ತಕ್ಷಣ ಮಧ್ಯ ಬಾಯಿಹಾಕಿ “ಆರ್ಕೆಸ್ಟ್ರಾ!” ಎಂದು ಆಶ್ಚರ್ಯದಿಂದ ಉದ್ಘರಿಸಿದೆ. ನನ್ನ ಮುಖ ಹಾಗೂ ಧ್ವನಿಯಲ್ಲಿನಆಶ್ಚರ್ಯವನ್ನು ಗಮನಿಸಿದ ವೇಣು ಸರ್ನಗುತ್ತಾ “ಆರ್ಕೆಸ್ಟ್ರಾ ಲವ್ ಎಪಿಸೋಡ್ ಆಮೇಲ್ಹೇಳ್ತೀನಿ” ಎಂದು ಹೇಳಿ ಮುಂದುವರೆಸಿzರು. “ನಾವೊಂದು ಆರ್ಕೆಸ್ಟ್ರಾಟೀಂ ಮಾಡ್ಕೊಂಡಿದ್ವಿ. ನಮ್ಮಲ್ಲಿಹಾಡೋರಿದ್ರು, ತಬಲ ಬಾರಿಸೋರು ಇದ್ರು, ನಾನು ಕೊಳಲು ಬಾರಿಸ್ತಿದ್ದೆ, ಹಾರ್ಮೀನಿಯಂನುಡಿಸ್ತಿದ್ದೆ, ಹಾಡ್ತಿದ್ದೆ. ಇನ್ನೊಬ್ರು ಗಿಟಾರ್ ನುಡಿಸೋರು. ಮುಖ್ಯವಾಗಿ ನಮ್ ಕಾಲೇಜ್ ಹುಡುಗೀರ್ಹಾಡ್ ಹೇಳೋರು. ಹಿಂಗಿದ್ವಿ ನಾವು. ನಮ್ಮ ರಂಗಸ್ವಾಮಿ ಸಾರ್ ಅಂತುಯಾವುದಕ್ಕೂ ನಕಾರವೇ ಇಲ್ಲ. ಎಲ್ಲದಕ್ಕೂಓಕೆ ಅನ್ನೋರು, ಸಪೋರ್ಟ್ಮಾಡೋರು. “ಡ್ಯಾನ್ಸ್ ಮಾಡ್ತೀಯ ಮಾಡು, ಹಾಡು ಹೇಳ್ತೀಯ ಹೇಳು, ನಾಟಕಮಾಡಿಸ್ತೀಯ ಮಾಡು. ಆದ್ರೆ ನನ್ಹೆಸ್ರು ಇರ್ಬೇಕಷ್ಟೆ ಅದಕ್ಕೆ!” ಅನ್ನೋರು” ಎನ್ನುತ್ತಾ ನಕ್ಕರು ವೇಣುಸರ್. ನಾವು ಭಾಗಿಗಳಾದೆವು. “ಅಲ್ಲಿನನ್ನ ಪ್ರತಿಭೆಯನ್ನ ಪ್ರದರ್ಶನ ಮಾಡೋದಕ್ಕೆ ಅವಕಾಶಸಿಕ್ತು. ಅಲ್ಲಿ ಕಾಲೇಜ್ ಮ್ಯಾಗ್‍ಝೈನ್‍ನಲ್ಲಿ ನನ್ನದೊಂದುಕತೆ ಪ್ರಕಟ ಆಯ್ತು “ಆ ರಾತ್ರಿ ಆಮನೆಯಲ್ಲಿ” ಅಂತ. “ಆಗ ಯಾವಕಾಲೇಜು? ಏನ್ ಓದ್ತಿದ್ರಿ ಸರ್?” ಕೇಳಿದೆ ನಾನು. “ಡಿಗ್ರಿ ಕಾಲೇಜು. ಪಿಯುಸಿ ಮುಗಿಸಿ ದುರ್ಗದ ಸರ್ಕಾರಿಕಾಲೇಜಿನಲ್ಲಿ ಸೈನ್ಸ್ ಡಿಗ್ರಿ ಸೇರ್ಕೊಂಡಿದ್ದೆ. ಆಗ ಇವೆಲ್ಲಾ ಆಟಗಳುನಮ್ದು. ನೋಡಿ ಆಗ ನಾನುಸಾಹಿತಿನೂ ಅಲ್ಲ, ನಾಟಕದ ಕಲಾವಿದನೂಅಲ್ಲ, ಸಂಗೀತಗಾರನೂ ಅಲ್ಲ. ಆದರೆ ಏನೇನೊಆಗಬೇಕು ಅನ್ನೋ ಕನಸುಗಳು. ಏನ್ಆಗ್ಬೇಕು ಅಂತ ಗೊತ್ತಿಲ್ಲ. ಆದರೆಸಿಕ್ಕ ಅವಕಾಶವನ್ನೆಲ್ಲಾ ಬಳಸಿಕೊಳ್ತಿದ್ದೆ ಅಷ್ಟೆ. ಕಾಲೇಜ್ ಮುಗುದ್ಮೇಲೂಕೂಡ ಸ್ವಲ್ಪ ಕಾಲಆರ್ಕೆಸ್ಟ್ರಾ ಮಾಡ್ತಿದ್ವಿ. ಅಲ್ಲಿಂದಲೂ ಸ್ವಲ್ಪ ದುಡ್ಡುಬರೋದು ನನಗೆ. ಅದನ್ನ ಮನೆಗ್ಕೊಟ್‍ಕೊಂಡು... ಹಿಂಗೆ ಕಷ್ಟದಲ್ಲಿಜೀವನ ಸಾಗಿಸ್ತಾ ಇದ್ವಿ. ಆದರೆಅದೃಷ್ಟವಶಾತ್ ಕೆಪಿಎಸ್‍ಸಿ ಎಕ್ಸಾಂಬರೆದಿದ್ದೆ. ಇದ್ದಕ್ಕಿದ್ದಂಗೆ ನನಗೆ ಅಪಾಯಿಂಟ್‍ಮೆಂಟ್ಆರ್ಡರ್ ಬಂದ್‍ಬಿಡ್ತು. ಆದರೆಗುಲ್ಬರ್ಗಾಕ್ಕೆ ಹಾಕಿದ್ರು.
ಅಲ್ಲಿಕೆಲಸಕ್ಕೆ ಸೇರಿ ಅಲ್ಲಿ ಜೀವನಪ್ರಾರಂಭಿಸಿದಾಗಲೇ ನಾನ್ ನೋಡಿದ್ದು ಬೆತ್ತಲೆಸೇವೆ (ಬೆತ್ತಲೆ ಸೇವೆ ವೇಣುಅವರ ಪ್ರಸಿದ್ಧ ಕಾದಂಬರಿಹಾಗೂ ಇದೇ ಕಾದಂಬರಿ ಇದೇಹೆಸರಲ್ಲಿ ಡಾ. ರಾಜ್‍ಕುಮಾರ್ಸಹೋದರ ವರದಣ್ಣನವರು ಹಾಗೂ ಚಂದೂಲಾಲ್ ಜೈನ್ನಿರ್ಮಾಣದಲ್ಲಿ ಸಿನಿಮಾ ಆಗಿ ಯಶಸ್ವಿಯಾಗಿತ್ತು). ಚಿಂಚೋಳಿ ತಾಲ್ಲೂಕು ಹದಳಗಿ ಅನ್ನೊಗ್ರಾಮದಲ್ಲಿ ಈ ಬೆತ್ತಲೆಸೇವೆ ನಡಿತಿತ್ತು. ಮಳೆ ಬರೆದೆ ಇದ್ರೆಅಥವ ಇನ್ನೇನೊ ತೊಂದ್ರೆಆದ್ರೆ ದಲಿತ ಹೆಣ್ಣುಮಕ್ಕಳನ್ನ ದೇವರಹೆಸರಲ್ಲಿ ಬೆತ್ತಲೆ ಸೇವೆ ಮಾಡಿಸೊಪದ್ದತಿ ನನಗೆ ತುಂಬಾ ಕಾಡಿಸ್ತು. ಇವರು ದೇವರ ಹೆಸರು ಹೇಳ್ಕೊಂಡ್ಇವೆಲ್ಲಾ ಮಾಡ್ತಿದ್ರೂ ಇದೆಲ್ಲಾ ಶ್ರೀಮಂತರು ದಲಿತಹೆಣ್ಣುಮಕ್ಕಳನ್ನ ಶೋಷಣೆ ಮಾಡೋಕೋಸ್ಕರ ಮಾಡ್ಕೊಂಡಿರೊಅನಿಷ್ಠ ಪದ್ದತಿ ಇದು ಅಂತನನಗೆ ಕನ್ಫರ್ಮ್ ಆಯ್ತು. ಆದರೆಆಗ ನಾನಿನ್ನೂ ಕತೆಗಾರ, ಕಾದಂಬರಿಕಾರ ಆಗಿರಲಿಲ್ಲ. ಆದರೂ ಕೂಡ ಆಲೋಚನೆಮಾಡ್ತಿದ್ದೆ “ಇದು ಅನ್ಯಾಯ ಅಲ್ವ? ಕಾರ್‍ನಲೆಲ್ಲಾ ರಾತ್ರೋ ರಾತ್ರಿಜನಗಳು ಬರ್ತಾರೆ ಅಂದ್ರೆ ಯಾಕ್ಬರ್ತಾರೆ ಅವರು? ಹೋಗ್ಲಿ ಇಂಥಕೆಲಸಕ್ಕೆಲ್ಲಾ ದಲಿತ ಹೆಣ್ಣು ಮಕ್ಕಳೇಆಗಬೇಕೇನು ಇವರಿಗೆ?” ಯೋಚನೆ ಮಾಡಿದೆ. ಆವಾಗ್ಲೇ ಒಂದು ಥ್ರೆಡ್ ಹೊಳೀತು “ಕತೆ ಮಾಡಬಹುದಲ್ಲ ಇದನ್ನ” ಅಂತ. ಆದರೆ ಅದುಕತೆ ಬರೆದದ್ದು ಆಮೇಲ್ಬಿಡಿ 4 ವರ್ಷ ಆದ್ಮೇಲೆ. ಆದರೆಇದಕ್ಕೆಲ್ಲದಕ್ಕೂ ಮೊದಲೇ ಆರ್ಕೆಸ್ಟ್ರಾ ಮಾಡ್ತಿದ್ನಲ್ಲ “ಅಲ್ಲಿ ಯಾವ್ದೊ ಮೇಲ್‍ಜಾತಿಹುಡುಗೀನ ಲವ್ ಮಾಡಿ ಡಿಸಪಾಯಿಂಟ್ಎಲ್ಲಾ ಆಯ್ತು” ವೇಣು ಸರ್ ತೇಲಿಸಲುನೋಡಿದರು. ನಾನು ಬಿಡ್ತೀನ? “ಏನಾಯ್ತುಸರ್?” ಕೆದಕಿದೆ. ಮತ್ತೆ ನಕ್ಕರುವೇಣು ಸರ್. ಒಂದರೆಕ್ಷಣದ ಮೌನ. ಮತ್ತೆ ನಗುತ್ತಲೇ ಪ್ರಾರಂಭಿಸಿದರು

197 views